Transgender: ಹಾದಿಯೇ ತೋರಿದ ಹಾದಿ; ‘ಎಲ್ಲದಕ್ಕೂ ನನ್ನ ಸಲಹೆಯನ್ನೇ ಪಡೆಯುತ್ತಾರೆ ನನ್ನ ಕುಟುಂಬದವರು’

Sex Work : ಈವತ್ತು ಸೆಕ್ಸ್ ವರ್ಕ್, ಭಿಕ್ಷಾಟನೆಯಿಂದ ದೂರವಿದ್ದು ಸಂಘಟನೆ, ಹೋರಾಟದಂಥ ಕೆಲಸಗಳನ್ನು ಮಾಡುತ್ತಿದ್ದೇನೆ. ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತದೆ. ಅದಕ್ಕೆ ನಾನೇ ಉದಾಹರಣೆ.

Transgender: ಹಾದಿಯೇ ತೋರಿದ ಹಾದಿ; ‘ಎಲ್ಲದಕ್ಕೂ ನನ್ನ ಸಲಹೆಯನ್ನೇ ಪಡೆಯುತ್ತಾರೆ ನನ್ನ ಕುಟುಂಬದವರು’
ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ್ತಿ ಸೌಮ್ಯಾ
Follow us
ಶ್ರೀದೇವಿ ಕಳಸದ
|

Updated on:Mar 10, 2022 | 2:13 PM

ಹಾದಿಯೇ ತೋರಿದ ಹಾದಿ | Haadiye Torida Haadi : ಕೆಲವು ತಿಂಗಳುಗಳು ಉರುಳಿದ ಒಂದು ದಿನ ರಾತ್ರಿ ಸೌಮ್ಯಾ ತಮ್ಮ ಮನೆಗೆ ಹೋದರು. ಆಗಾಗ ಹೋಗುವುದು ಬರುವುದನ್ನು ರೂಢಿ ಇಟ್ಟುಕೊಂಡಿದ್ದರಿಂದ ಅವರನ್ನು ಮನೆಯವರು ಅರ್ಥ ಮಾಡಿಕೊಂಡು ಗೌರವ ಕೊಡಲಾರಂಭಿಸಿದರು. ಈಗ ಮನೆಯಲ್ಲಿ ಏನೇ ಸಮಸ್ಯೆಗಳಾದರೂ ಸೌಮ್ಯಾರ ಸಲಹೆಯನ್ನೇ ಪಡೆಯುತ್ತಾರೆ. ಸದ್ಯ ‘ಪಯಣ’ ಸಂಸ್ಥೆಯ ಅಧ್ಯಕ್ಷರಾಗಿರುವ ಇವರಿಗೆ ತಮ್ಮ ಸ್ವಂತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅನುಕೂಲವಾಗಿದೆ. 2009ರಿಂದ 2013ರವರೆಗೂ ಸಂಘಟನೆಗಳನ್ನು ಕಟ್ಟಿ ನಿರಂತರ ಹೋರಾಟ ಮಾಡಿದ ಇವರು ಸದ್ಯ 1,300 ತೃತೀಯಲಿಂಗಿ ಸಮುದಾಯಗಳ ಜೊತೆಗೆ ಕೆಲಸ ಮಾಡುತ್ತಿದ್ದಾರೆ.  HIV ಬಗ್ಗೆ ಜಾಗೃತಿ, ನಿಯಮಿತ ಆರೋಗ್ಯ ತಪಾಸಣೆ, ಹೀಗೆ ಎಲ್ಲಾ ರೀತಿಯ ಸೇವೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಕೌಶಲಾಭಿವೃದ್ಧಿ ತರಬೇತಿಯನ್ನೂ ಕೊಡುತ್ತಾರೆ. ಕಾರ್ಯಗಾರಗಳನ್ನು ಏರ್ಪಡಿಸುತ್ತಾರೆ. ಲೈಂಗಿಕತೆ, ಲಿಂಗತ್ವ, ತಂಡ ರಚನೆಗೆ ಸಂಬಂಧಿಸಿದ ತರಬೇತಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಇತರೇ ಸಂಸ್ಥೆಗಳಿಗೂ ಹೋಗುತ್ತಾರೆ. ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

(ಹಾದಿ 9, ಭಾಗ 4)

‘ನಮ್ಮ ಸಮುದಾಯದವರು ಹೆಚ್ಚಾಗಿ ಪ್ರೇಮ ವೈಫಲ್ಯ, ಕುಟುಂಬ ನಿರಾಕರಣೆಯಿಂದ ಖಿನ್ನತೆಗೆ ಒಳಗಾಗುತ್ತಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂಥವರು ನಮಗೆ ಸಿಕ್ಕಾಗ ಧೈರ್ಯ ತುಂಬಿ, ಆಪ್ತಸಮಾಲೋಚನೆಗೆ ಒಳಪಡಿಸಿ, ಕುಟುಂಬದವರು ಅವರನ್ನು ಸ್ವೀಕರಿಸಲು ಸಹಾಯ ಮಾಡುತ್ತೇವೆ.

ನಾನು ಇದೆಲ್ಲವನ್ನು ದಾಟಿಕೊಂಡು ಬಂದವಳು. ಯಾವುದೇ ಸಮಸ್ಯೆಗೂ ಪರಿಹಾರ ಇದ್ದೇಇರುತ್ತೆ. ಆದರೆ ನಮ್ಮನ್ನು ಮೊದಲು ಕುಟುಂಬದವರು ಒಪ್ಪಿಕೊಳ್ಳಬೇಕು. ಮುಂದಿನ ಪರಿಹಾರ ಶಿಕ್ಷಣದ ವ್ಯವಸ್ಥೆ. ಶಿಕ್ಷಣದ ಹಕ್ಕಿಗಾಗಿ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಹೋರಾಟದ ಫಲವಾಗಿ ಯೂನಿವರ್ಸಿಟಿಗಳಲ್ಲಿ ಶೇ. 1 ರಷ್ಟು ಮೀಸಲಾತಿ ಸಿಕ್ಕಿದೆ. ಹುಟ್ಟಿದಾಗ ನಾವು ಕೂಡ ಎಲ್ಲರಂತೆ ಹುಟ್ಟಿರುತ್ತೇವೆ. ನಂತರದಲ್ಲಿ ಭಾವನೆಗಳು, ನಡೆವಳಿಕೆಗಳು ಬದಲಾಗುತ್ತವೆ. ಅದಕ್ಕೆ ಪ್ರತಿಯೊಬ್ಬರು ಪ್ರೀತಿ ಸಹಕಾರ ಕೊಟ್ಟಾಗ, ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಾಗ ನಮ್ಮ ಬದುಕನ್ನು ನಾವು ರೂಪಿಸಿಕೊಳ್ಳುತ್ತೇವೆ. ನಮಗೆ ಅನುಕಂಪ ಬೇಡ ಅವಕಾಶ ಬೇಕು.

ನಮ್ಮ ಸಮುದಾಯದವರು ಮಗುವನ್ನು ದತ್ತುಪಡೆದು ಕುಟುಂಬ ಕಟ್ಟಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇನ್ನು ನನ್ನನ್ನು ಹೆತ್ತವಳು ಒಬ್ಬ ತಾಯಿಯಾದರೆ ಈ ಸಮುದಾಯದಲ್ಲಿ ನನಗೆ ತಾಯಿಯಾಗಿ, ಗುರುವಾಗಿ, ಬೆನ್ನೆಲುಬಾಗಿ ಎಲ್ಲದಕ್ಕೂ ಸಹಕಾರ ನೀಡುತ್ತಿರುವುದು ನಮ್ಮ ಸಮುದಾಯದ ಗುರು ಗೀತಮ್ಮ. ಈವತ್ತು ನಾನು  ಸೆಕ್ಸ್ ವರ್ಕ್, ಭಿಕ್ಷಾಟನೆಯಿಂದ ದೂರವಿದ್ದು ಸಂಸ್ಥೆ, ಸಂಘಟನೆ, ಹೋರಾಟದಂಥ ಕೆಲಸಗಳನ್ನು ಮಾಡುತ್ತಿದ್ದೇನೆಂದರೆ ಅದರ ಎಲ್ಲಾ ಕ್ರೆಡಿಟ್ ಗೀತಮ್ಮನವರಿಗೆ ಸಲ್ಲಬೇಕು ಮತ್ತು ನನ್ನ ಒಳ್ಳೆಯ ಸ್ನೇಹಿತರು ಅಂದರೆ ಅಕ್ಕಯ್ ಮತ್ತು ಸೌಂದರ್ಯ.

ಭಾಗ 2 : Transgender: ಹಾದಿಯೇ ತೋರಿದ ಹಾದಿ; ಆ ದಿನ ಸೆಕ್ಸ್​ ವರ್ಕ್​ಗೆ ಹೊರಟಾಗ

ಈಗ ಹೆಬ್ಬಾಳದ ಕೆಂಪಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದೇನೆ. ಎರಡು ತಿಂಗಳಿಗೊಮ್ಮೆ ಇಲ್ಲಿರುವ ಸಮುದಾಯದ ಜನರನ್ನೆಲ್ಲ ಒಗ್ಗೂಡಿಸಿ ಮರದ ಕೆಳಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವುದು, ಬಿಬಿಎಂಪಿಯಿಂದ ಸಾಲ ಕೊಡಿಸುವುದು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸುವುದು ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಂಡಿರುತ್ತೇನೆ.

ನಮ್ಮಂಥವರನ್ನು ನಮ್ಮ ಕುಟುಂಬ ಒಪ್ಪಿಕೊಂಡರೆ ನಮಗಂಟಿದ ಅಸ್ಪೃಶ್ಯತೆ ಕ್ರಮೇಣ ಕಡಿಮೆಯಾಗುತ್ತದೆ. ಶಿಕ್ಷಣದಿಂದ ಈವತ್ತು ನಮಗೆ ಸಮಾನ ಹಕ್ಕುಗಳು ಲಭಿಸುತ್ತಿವೆ. ಸಮಾಜವೂ ಎಲ್ಲರಂತೆ ನಮ್ಮನ್ನು ಕಾಣಬೇಕು. ನಾವು ಸಾರ್ವಜನಿಕವಾಗಿ ಪ್ರಾರಂಭಿಸಿದ ವಾಣಿಜ್ಯ ವ್ಯವಹಾರಗಳಿಗೆ ಬೆಂಬಲ ಕೊಡಬೇಕು. ಸರ್ಕಾರ ಅಗತ್ಯ ಮೀಸಲಾತಿ, ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕು. ಇತ್ತೀಚಿಗೆ ಕೆಲವು ತೃತೀಯ ಲಿಂಗಿಗಳು ಡಾಕ್ಟರ್, ಲಾಯರ್, ಪೊಲೀಸ್ ಆಗುವ ಮೂಲಕ ಸ್ವಾವಲಂಬಿಗಳಾಗಿ, ಸಾಮಾಜಿಕವಾಗಿ ಉನ್ನತ ಹುದ್ದೆಗಳನ್ನು ಸಂಭಾಳಿಸುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಸ್ವಾಭಿಮಾನದಿಂದ ಬದುಕಲು ಪ್ರಯತ್ನಿಸುತ್ತಿರುವ ನಾವು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಬೇಕು.

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi

Published On - 2:13 pm, Thu, 10 March 22

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ