Theatre : ಅಂಕಪರದೆ; ‘ಅಕ್ಕಯ್’ ನೋಡಲು ಮಾರ್ಚ್ 6ಕ್ಕೆ ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ

Transgender and Theatre : ಲಿಂಗತ್ವ, ಲೈಂಗಿಕ ಸಮಾನತೆ, ಸಮಾಜದೊಂದಿಗೆ ಸಹಬಾಳ್ವೆಯನ್ನು ಕೋರುವ ನಾಟಕ ಹಲವು ಆಯಾಮಗಳನ್ನು ಕಟ್ಟಿಕೊಡುತ್ತಲೇ  ಸಿದ್ದಮಾದರಿಯ ಕಟ್ಟೆಗಳನ್ನು ಒಡೆದು ಹೊಸತೊಂದನ್ನು ಕಟ್ಟುವುದು ನಾಟಕದ ವಿಶೇಷ.

Theatre : ಅಂಕಪರದೆ; ‘ಅಕ್ಕಯ್’ ನೋಡಲು ಮಾರ್ಚ್ 6ಕ್ಕೆ ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ
ಅಕ್ಕೈ ಪಾತ್ರಧಾರಿ ನಯನ ಸೂಡ
Follow us
ಶ್ರೀದೇವಿ ಕಳಸದ
|

Updated on:Feb 26, 2022 | 4:01 PM

ಅಂಕಪರದೆ | Ankaparade :ಅಕ್ಕಯ್’ ಸಾಮಾಜಿಕ ವ್ಯವಸ್ಥೆಯಲ್ಲಿ ಕರುಣೆಗೆ ಸವಾಲೊಡ್ಡಿ ದೌರ್ಜನ್ಯಗಳನ್ನು ಮೆಟ್ಟಿ ನಿಂತು ಸಮಸಮಾನತೆಯನ್ನು ಸಂವಿಧಾನಬದ್ಧವಾಗಿ ಕೇಳುವ ಅತ್ಯಂತ ಮಹತ್ವದ ನಾಟಕವಾಗಿದೆ. ಹಿಜ್ರಾ ಸಮುದಾಯಕ್ಕೆ ಎದುರಾಗುವ ಆಂತರಿಕ ಮತ್ತು ಬಾಹ್ಯ ಸಂಘರ್ಷಗಳು, ಕುಟುಂಬ ಮತ್ತು ಸಮಾಜದೊಳಗೆ ಹೊಸ ಹೊಸ ರೂಪಗಳನ್ನು ಪಡೆಯುತ್ತದೆ. ಸಾಮಾಜಿಕ ಕಟ್ಟುಪಾಡುಗಳು ಮತ್ತು ಸಾಂಸ್ಕೃತಿಕ ಹಾಗೂ ಶಕ್ತಿ ರಾಜಕಾರಣದ ವಿವಿಧ ನೆಲೆಗಳು ಭಿನ್ನ ಭಿನ್ನ ರೀತಿಯಲ್ಲಿ ಅಕ್ಕಯ್ ಪದ್ಮಶಾಲಿ ಅವರ ಬದುಕನ್ನು ನಿರ್ವಹಿಸಿದೆ. ತನ್ನದಲ್ಲದ ರೂಪವನ್ನು ತನ್ನೊಳಗೆ ಸಮಾಜ ತುಂಬಿದ ಕಥೆಯನ್ನು ಬಿಚ್ಚಿಡುತ್ತಾ ಇದೆಲ್ಲವನ್ನು ಎದುರಿಸಿ ಅಕ್ಕಯ್ ಭಿಕ್ಷುಕಿಯಾಗಿ, ಲೈಂಗಿಕ ಕಾರ್ಯಕರ್ತೆಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ರೂಪುಗೊಂಡ ಹಾದಿಯನ್ನು ಚಿತ್ರಿಸುವ ನಾಟಕವಿದು. ಡಾ. ಬೇಲೂರು ರಘುನಂದನ, ಕವಿ, ನಾಟಕಕಾರ (Dr. Beluru Raghunandana)

*

(ಭಾಗ 2)

ದೇಹ ಗಂಡಿನದ್ದಾದರೂ ದೇಹದೊಳಗೆ ಅರಳುವ ಚಿತ್ರ-ಚಿತ್ತಾರದ ಭಾವನೆಗಳೆಲ್ಲವೂ ಹೆಣ್ಣಿನದು. ಹೆಣ್ಣಾಗಬೇಕು ಎಂಬ ಬಯಕೆ, ಅಕ್ಕಯ್ ಅವರ ಜೀವನವೂ ಸೇರಿದಂತೆ ಸಮುದಾಯದ ಮನಸ್ಸುಗಳನ್ನು ಅಧಿಕಾರ ಮತ್ತು ಯಜಮಾನ್ಯ ಹೇಗೆಲ್ಲಾ ಪ್ರಭಾವ ಬೀರಿದವು ಎಂಬ ಕಥಾಹಂದರವನ್ನು ಈ ನಾಟಕ ಬಹಳ ಸೂಕ್ಷ್ಮವಾಗಿ ತೆರೆದಿಡುತ್ತದೆ.

“ಅಕ್ಕಯ್” ಒಬ್ಬಳ ನೋವಿನಿಂದ ಶುರುವಾಗಿ ಅದು ಸಮುದಾಯದ ನೋವನ್ನು ತಲುಪುವ ಜೀವನಾಧಾರಿತವಾಗಿ ಕಟ್ಟಿದ ಗೆಜ್ಜೆಯಾದರೂ ಇದರಲ್ಲಿ ಮೂಡುವ ನಾದಗಳು ಹಲವಾರು. ಸಮುದಾಯರೂಪಿಯಾದ ಅಕ್ಕಯ್ ರ ಹಸಿವು ನೋವುಗಳನ್ನು ಕಟ್ಟಿಕೊಡುತ್ತಾ ಅಂತರಂಗದಲ್ಲಿ ಹೆಣ್ಣಿನ ಸಂಕಟಗಳನ್ನೂ ಕೂಡ ಅರ್ಥಪೂರ್ಣವಾಗಿ ಬಹು ಆಯಾಮದಲ್ಲಿ ಕಟ್ಟಿದ ನಾಟಕವಾಗಿದೆ.  ನಾಟಕದಲ್ಲಿ ಹಸಿವು, ದೌರ್ಜನ್ಯ, ತಾರತಮ್ಯ, ನೋವು, ಹಿಂಸೆ, ಅವಮಾನ, ಸಂಕಟ, ಶೋಷಣೆ, ಶಿಕ್ಷಣ, ಹೋರಾಟ, ಲಿಂಗ ಸಮಾನತೆ ಮುಂತಾದ ಅಂಶಗಳು ಅಭದ್ರತೆಯ ರೂಪಕಗಳಾಗುತ್ತಲೇ ಲೈಂಗಿಕ ಅಲ್ಪಸಂಖ್ಯಾತರ ಜೀವನ ಸಾಧ್ಯತೆಗಳನ್ನು ಬಿಡಿಬಿಡಿಯಾಗಿ ನಾಟಕ ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.

ಇದನ್ನೂ ಓದಿ : Theatre: ಅಂಕಪರದೆ; ಹೋಟೆಲು, ಬಾರ್, ಪಬ್; ಶೇ. 100ರಷ್ಟು ಅನುಮತಿ ಕೊಟ್ಟ ಸರ್ಕಾರ ರಂಗಮಂದಿರಗಳಿಗೇಕೆ ಶೇ. 50?

ಹಿಜ್ರಾ ಸಮುದಾಯದಲ್ಲಿನ ವಿವಿಧ ಆಚರಣೆಗಳು, ಹೆಣ್ಣು ಗಂಡಿನ ರೂಪಾಂತರ, ಸೆಕ್ಷನ್ 377ರ ತೀರ್ಪು, ಅಕ್ಕಯ್ ರ ಮದುವೆ, ಡಿವೋರ್ಸ್, ದತ್ತು ಮಗುವಿನ ಸ್ವೀಕಾರ ಮತ್ತು ಈಗಿನ ಹೋರಾಟವನ್ನೂ ಒಳಗೊಂಡಿರುವ ನಾಟಕ ಒಂದೇ ಸಮಯದಲ್ಲಿ ಪ್ರೇಕ್ಷಕನ ಮನಸ್ಸನ್ನು ಅರಿವಿನಿಂದ ಹಗುರ ಮಾಡುತ್ತಲೇ ಭಾರವಾಗಿಸುವ ವಿಶೇಷತೆ ನಾಟಕಕ್ಕಿದೆ.  ಒಂದೆಡೆ ತನ್ನನ್ನು ಸ್ವೀಕರಿಸುವ ಮನಸ್ಥಿತಿಯಿಲ್ಲದ ಸಮಾಜದ ಎದುರು ಪ್ರತಿರೋಧದಲ್ಲಿ ಸಿಡಿಯುವ, ಆ ಮೂಲಕ ಜೀವನದ ಅರ್ಥಗಳನ್ನು ವಿಸ್ತರಿಸಿಕೊಳ್ಳುವ ಅಂಶಗಳು ನಾಟಕದ ಕೆಂದ್ರಪ್ರಜ್ಞೆಯಾಗಿ ದುಡಿಯುತ್ತದೆ. ಆಂತರಿಕವಾಗಿ ತನ್ನೊಳಗೆ ತಾನೇ ಮತ್ತೊಂದು ರೂಪದಲ್ಲಿ ಸೃಷ್ಟಿಯಾಗುವ ಹೋರಾಟ ಮತ್ತು ಸಂಘರ್ಷಗಳು ಕೂಡ ತನ್ನ ಅರ್ಥವ್ಯಾಪ್ತಿಯನ್ನು ದಕ್ಕಿಸಿಕೊಂಡು, ಸಮಾಜಕ್ಕೆ ಹೋರಾಟದ ಬದುಕನ್ನು ತೋರಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಕ್ಕಯ್ ನಾಟಕ ಮಾಡುತ್ತದೆ.

ಹೆಣ್ಣಾಗಬೇಕು ಎಂಬ ಬಯಕೆ ಎಷ್ಟೆಲ್ಲಾ ಸಂಘರ್ಷಗಳನ್ನು ಮತ್ತು ಸಮಾನತೆಗೋಸ್ಕರ ಹುಟ್ಟಿಕೊಂಡ ಚಳುವಳಿಗಳನ್ನು, LGBT ಸಮುದಾಯದ ಹಕ್ಕು ಮತ್ತು ಆಯ್ಕೆಗಳನ್ನು, ಕುಟುಂಬ, ಸಮಾಜದಿಂದ ಹಿಡಿದು ಸರ್ಕಾರದವರೆಗಿನ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಇರುವ ನಿಲುವುಗಳು ಅಕ್ಕಯ್ ನಾಟಕದ ಮೂಲಭಿತ್ತಿಯಾಗಿದೆ. ಕರುಣೆ ಮತ್ತು ಸಹಾನುಭೂತಿ, ಬೇಡದ ಸಿದ್ಧಮಾದರಿಯ ಸಂಪ್ರದಾಯಗಳನ್ನು ಹಾಗೂ ಅಂಧಾಚರಗಳನ್ನು ಮುರಿದು ಸಮಾನತೆಯ ಕನಸುಗಳನ್ನು ಕಾಣುವ ಸ್ವತಂತ್ರದ ಅರ್ಥವನ್ನು ನಿಜದಲ್ಲಿ ಕಂಡುಕೊಳ್ಳುವ ಏಕವ್ಯಕ್ತಿ ನಾಟಕ ಅಕ್ಕಯ್ ಆಗಿದೆ. ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಮಾತ್ರವಲ್ಲದೆ ಭಾರತೀಯ ರಂಗಭೂಮಿಯಲ್ಲೇ ವಸ್ತು, ವಿಷಯ ಮತ್ತು ಪ್ರಯೋಗ ಭಾಷೆಯಲ್ಲಿ ಅನನ್ಯವಾದುದಾಗಿದೆ.

ಲಿಂಗತ್ವ, ಲೈಂಗಿಕ ಸಮಾನತೆ, ಸಮಾಜದೊಂದಿಗೆ ಸಹಬಾಳ್ವೆಯನ್ನು ಕೋರುವ ನಾಟಕ ಹಲವು ಆಯಾಮಗಳನ್ನು ಕಟ್ಟಿಕೊಡುತ್ತಲೇ  ಸಿದ್ದಮಾದರಿಯ ಕಟ್ಟೆಗಳನ್ನು ಒಡೆದು ಹೊಸತೊಂದನ್ನು ಕಟ್ಟುವುದು ನಾಟಕದ ವಿಶೇಷ.

ನಾಟಕ : ಅಕ್ಕಯ್ ವಿನ್ಯಾಸ-ರಂಗರೂಪ-ನಿರ್ದೇಶನ : ಬೇಲೂರು ರಘುನಂದನ ಸ್ಥಳ : ರವೀಂದ್ರ ಕಲಾಕ್ಷೇತ್ರ ಸಮಯ : ಸಂಜೆ 6ಕ್ಕೆ ಪ್ರವೇಶ : ಉಚಿತ

(ಮುಗಿಯಿತು)

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

ಭಾಗ 1 : Theatre: ಅಂಕಪರದೆ; ಭಿಕ್ಷಾಟನೆಯಿಂದ ಹೋರಾಟದವರೆಗೆ ಇದು ‘ಅಕ್ಕೈ’ ನಡೆದ ಹಾದಿ

Published On - 3:33 pm, Sat, 26 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್