AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poetry: ಅವಿತಕವಿತೆ; ಕವಿತೆ ನನಗೆ ಬಿಕ್ಕುವ ಆಗಸದಿ ಬೆಳಕ ಹೊತ್ತು ಬರುವ ಸೂರ್ಯ

Poem : ‘ಸಾವು ರುಚಿಸುವಾಗ ಬದುಕು ಬದುಕುವ ತೀವ್ರತೆಯಲ್ಲಿ ಸಾವು ಇದಿರುಗೊಳ್ಳುವ ನೆರಳು -ಬೆಳಕಿನ ಬಣ್ಣಗಳ ಏಕರೇಖೆಯಲ್ಲಿ ಕ್ಯಾನ್ವಾಸ್ ಮೇಲೆ ಚಿತ್ರಿಸುವ ಮಹಾ ಕಲಾವಿದ ಅಭದ್ರತೆ. ಈ ಅಭದ್ರತೆಯೇ ನನಗೆ ಧ್ಯಾನಸ್ಥ ಮನಸ್ಥಿತಿಯನ್ನು ದರ್ಶಿಸುವ ಮಹಾಗುರು.’ ನಾಗರಾಜ ಪೂಜಾರ

Poetry: ಅವಿತಕವಿತೆ; ಕವಿತೆ ನನಗೆ ಬಿಕ್ಕುವ ಆಗಸದಿ ಬೆಳಕ ಹೊತ್ತು ಬರುವ ಸೂರ್ಯ
ಕವಿ ನಾಗರಾಜ ಪೂಜಾರ
ಶ್ರೀದೇವಿ ಕಳಸದ
|

Updated on: Feb 27, 2022 | 11:14 AM

Share

ಅವಿತಕವಿತೆ | AvithaKavite : ಸಾವು ರುಚಿಸುವಾಗ ಬದುಕು ಬದುಕುವ ತೀವ್ರತೆಯಲ್ಲಿ ಸಾವು ಇದಿರುಗೊಳ್ಳುವ ನೆರಳು -ಬೆಳಕಿನ ಬಣ್ಣಗಳ ಏಕರೇಖೆಯಲ್ಲಿ ಕ್ಯಾನ್ವಾಸ್ ಮೇಲೆ ಚಿತ್ರಿಸುವ ಮಹಾ ಕಲಾವಿದ ಅಭದ್ರತೆ. ಈ ಅಭದ್ರತೆಯೇ ನನಗೆ ಧ್ಯಾನಸ್ಥ ಮನಸ್ಥಿತಿಯನ್ನು ದರ್ಶಿಸುವ ಮಹಾಗುರು. ಹಿರಿಯರ ಅಥವಾ ನನ್ನ ಸಮಕಾಲೀನ ಕವಿಗಳ ಕವಿತೆಗಳನ್ನ ಓದಿದಾಗ ನನಗೆ ಹಲವು ಆಯಾಮಗಳ ಕರುಳು ಸಂಬಂಧವನ್ನು ಕಟ್ಟಿಕೊಟ್ಟಿವೆ, ಜೀವಪರವಾಗಿ ಬದುಕುವ ಕಲೆಯನ್ನು ಕಲಿಸಿವೆ ಜೊತೆಜೊತೆಗೆ ನನ್ನನ್ನು ಬರೆಯುವಂತೆ ಪ್ರೇರೇಪಿಸಿವೆ ಹಾಗಾಗಿ ಹೆಚ್ಚು ಹೆಚ್ಚು ಓದಿದಾಗ, ಓದಿದ್ದನ್ನು ಇಹವಾಗಿಸುವ ಇಹದಿಂದ ಪರವಾಗಿಸುವ ಹುಚ್ಚುತನಕ್ಕೆ ಕವಿತೆ ಬರೆಯುತ್ತೇನೆ. ಇತಿಹಾಸದಲ್ಲಿ ಬದುಕು ಅನಿವಾರ್ಯವಾದಾಗ ಅದನ್ನು ಕೆದಕುವ ಭಯದಿಂದ ಕವಿತೆ ಬರೆಯುತ್ತೇನೆ. ಕವಿತೆ ನನಗೆ ಬಿಕ್ಕುವ ಆಗಸದಿ ಬೆಳಕ ಹೊತ್ತು ಬರುವ ಸೂರ್ಯ. ಕಾವ್ಯದಲ್ಲಿ ನನಗೆಲ್ಲವೂ ದಕ್ಕಿದೆ ಎಂಬ ಭ್ರಮೆಗಿಂತ ಸಿಕ್ಕಿದೆ ಎಂಬ ಆತ್ಮತೃಪ್ತಿಯಿದೆ. ನಾಗರಾಜ ಪೂಜಾರ, ಕವಿ

*

ಅವಸರವಿರದ ನಿಸರ್ಗದಲಿ ಸಗ್ಗದ ಮಾತು

ಬಂಗಿ ಧೇನಿಸುವ ಬೆಟ್ಟದ ಕಾಡು ದೈನೇಸಿ ಬೆವರು ಮೈಗೆ. ನೇರ-ವಿಲೋಮ ತುದಿಗೆ ಸೂರ್ಯ-ಚಂದಿರ ಒಬ್ಬನಿಗೆ ಸಜೆ, ಇನ್ನೊಬ್ಬನಿಗೆ ರಜೆ ಬರಪೂರ ಬೆವರು-ಬಂಗಿಯ ನೇರ-ವಿಲೋಮ ನಿಸರ್ಗ ಸಗ್ಗ.

ಹಸಿವಿನೊಟ್ಟೆಯವಳು ಮುಟ್ಟಾಗಿದ್ದಾಳೆ ಕಡು ನೀಲಗೆಂಪು ಹರಿವು ಇಳೆಗೆ ತೊಗಟೆಯ ಕಾವು ಇಳಿಯುತ್ತಾಳೆ, ನಿಲ್ಲುತ್ತಾಳೆ, ಇಳಿಯುತ್ತಾಳೆ ಇಳಿಯುವ ನಿಲ್ಲುವ ಹೊಟ್ಟೆಯ ಮುಟ್ಟು ಹಸಿವು.

ಗಾಢ ನಿದ್ದೆಯಲಿ ಎದ್ದವನವನು ಗುಲಾಗಿ ತುಟಿ ಮಂದಸ್ಮಿತ ಬೆಳ್ಳಿ ಕಿರಣ ಗಾಡ ನಿದ್ದೆಯಲಿ ಬಿದ್ದವನವನು ಹಚ್ಚಹಸಿರು ಹೊದಿಕೆ ಬಾಯಿಜೊಲ್ಲು ತಾಣ ಬಿದ್ದು-ಎದ್ದವನ ಆಟ-ಮಾಟ ಗಾಡನಿದ್ದೆ.

ಜನರ ರೇಜಿಗೆ, ಅವರ ತೇಜಿಗೆ ಜಾಜಿ-ಸಂಪಿಗೆ ನಾಗಮುಡಿಗೆ ತರತರಹ ಆರು ತರಹ ಮುಡಿಯ ಅಡಿಗೆ ಬೇಡುತ್ತಾರೆ, ಕೊಡುತ್ತಾರೆ, ಬೇಡುತ್ತಾರೆ ಬೇಡಿ-ಕೊಡುವ ಹಾರ-ವ್ಯವಹಾರ ನಾಗಮುಡಿ.

ಅವಸರದ ನಿಸರ್ಗದಲಿ ಸಗ್ಗದ ಮಾತು ಅವಳು ಒಲೆಯನ್ನು ಊದುತ್ತಾಳೆ ಇವನು ಹೊಗೆಯನ್ನು ಉಗುಳುತ್ತಾನೆ.

*

ಆರ್. ತಾರಿಣಿ ಶುಭದಾಯಿಣಿ ಕವಿತೆಗಳನ್ನೂ ಓದಿ : Poetry: ಅವಿತಕವಿತೆ; ‘ತೊಂಬತ್ತಾದರೂ ಅಪ್ಪ ಸಾಯುತ್ತಿಲ್ಲ!’ ಆಸ್ತಿಗಾಗಿ ಕೋರ್ಟ್​ ಮೊರೆ ಹೋಗಿದ್ದ ಸೋಫೊಕ್ಲಿಸ್​ನ ಮಕ್ಕಳು 

AvithaKavithe Kannada Poetry Column by Nagaraj Pujar

ನಾಗರಾಜ ಪೂಜಾರರ ಪ್ರಕಟಿತ ಸಂಕಲನ ಮತ್ತು ಕೈಬರಹ

ನಮ್ಮೂರು ಹೂವಿನಹಡಗಲಿ ಹತ್ತಿರದ ಹೊಳೆ ದಂಡೆಯ ಹಳ್ಳಿ ಮಾಗಳದಲ್ಲಿ ಹುಟ್ಟಿ ಬೆಳೆದ ಕವಿ ನಾಗರಾಜ ಪೂಜಾರ. ಊರ ಹೆಸರುಗಳ ಹಿಂದಿನ ರಾಜರಾಳ್ವಿಕೆಯ ಚರಿತ್ರೆಯನ್ನು ಹೊತ್ತುಕೊಂಡು ಬಿರುಕುಬಿಟ್ಟ ವರ್ತಮಾನದಲ್ಲಿ ಬೆಳೆದ ಬದುಕು ನನ್ನಂತೆಯೇ ನಾಗರಾಜರದೂ ಹೌದು. ಹಾಗೆಂದೇ ಅವರ ಕವನಗಳಲ್ಲಿ ಆಗಿಹೋದ ವೈಭವದ ಹಳವಂಡಗಳಿಂದ ಮುಕ್ತವಾದ, ಆಗಬೇಕಾದ ಕನಸುಗಳನ್ನು ಹೊತ್ತು ಸಾಗುವ ಹೊಣೆಗಾರಿಕೆಯೇ ಅವರ ಕವಿತೆಗಳಲ್ಲಿ ಆಕೃತಿಯನ್ನು ಪಡೆದಿದೆ. ಈ ಹಾದಿಯ ಸಂಕೀರ್ಣತೆಗಳೇ ಅವರ ಅಭಿವ್ಯಕ್ತಿಗೆ ರೂಪ ನೀಡುತ್ತವೆ. ಕವಿತೆಯನ್ನು ಕಲಾತ್ಮಕಗೊಳಿಸುವ ಹಂಬಲದ ಶಾಬ್ದಿಕ ಕುಸುರಿಯ ಅತ್ಯಾಸಕ್ತಿಯಲ್ಲಿ ನಾಗರಾಜ್ ತಮ್ಮ ಕಾವ್ಯದ ತಿರುಳಿಗಿಂತ ತೊಗಟೆಯನ್ನು ಬಲಗೊಳಿಸುತ್ತಾರೆ. ಇವರ ಚಿತ್ತದಲ್ಲಿ ಕಿಕ್ಕಿರಿದ ಚಿತ್ರ -ಪಾತ್ರಗಳು ಅಭಿವ್ಯಕ್ತಿಯ ಇಕ್ಕಟ್ಟಿನಿಂದ ಹೊರ ನೆಗೆವ ಹಂಬಲದಲ್ಲಿ ಅಂಬೆಗಾಲಿಟ್ಟು ಓಡುತ್ತವೆ. ಬಿ. ಪೀರ್ ಬಾಷ, ಕವಿ

*

ಪ್ರತಿಕ್ರಿಯೆಗಾಗಿ : tv9kannadadigital@gmail.com

*

ಶ್ರೀದೇವಿ ಕೆರೆಮನೆ ಕವನಗಳನ್ನೂ ಓದಿ : Poetry : ಅವಿತಕವಿತೆ; ಪ್ರೇಮವೊಂದೇ ಪ್ರಜ್ವಲಿಸುವ ಈ ಹೊತ್ತಿನಲ್ಲಿ ಯಾವ ಯೋನಿ ಹೆತ್ತು ಪಾವನವಾಯಿತೋ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ