Theatre: ಅಂಕಪರದೆ; ನಮ್ಮ ಕ್ಯಾಂಟೀನ್ ದಾಮು ಪೋಡಿ ತಗೊಂಡು ಕೆಂಡೋನಿಯಾಕ್ಕೆ ಹೋದಮೇಲೆ ಏನಾಯ್ತಂತೆ?

Play : ಈ ನಾಟಕವು ನಗರೀಕರಣದ ನಿರುದ್ಯೋಗ, ಗ್ರಾಹಕೀಕರಣ, ಹಾಗೂ ಮಾರುಕಟ್ಟೆಯ ಆರ್ಥಿಕತೆಯ ಕರಾಳ ಮುಖಗಳನ್ನು ವಿಡಂಬನಾತ್ಮಕವಾಗಿ ಬಿಚ್ಚಿಡುತ್ತದೆ.

Theatre: ಅಂಕಪರದೆ; ನಮ್ಮ ಕ್ಯಾಂಟೀನ್ ದಾಮು ಪೋಡಿ ತಗೊಂಡು ಕೆಂಡೋನಿಯಾಕ್ಕೆ ಹೋದಮೇಲೆ ಏನಾಯ್ತಂತೆ?
ಕೆಂಡೋನಿಯನ್ಸ್​ ನಾಟಕದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Feb 27, 2022 | 4:06 PM

ಅಂಕಪರದೆ | Ankaparade : ಸಮಷ್ಟಿ ರಂಗತಂಡವು ಮಾರ್ಚ್ 4 ರಿಂದ ಮೂರು ದಿನಗಳ ನಾಟಕೋತ್ಸವವನ್ನು ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಆಯೋಜಿಸಿದೆ (Samashti Theatre Festival 2022). ಸಮಷ್ಟಿ ತಂಡವು ಕಳೆದ 21 ವರ್ಷಗಳಿಂದ ನಿರಂತರ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ 3 ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ. ಇದು ರಾಜ್ಯಮಟ್ಟದ ನಾಟಕೋತ್ಸವವಾಗಿದ್ದು, ಮಂಗಳೂರು, ಮಣಿಪಾಲ ಮತ್ತು ಹಾವೇರಿಯಿಂದ ರಂಗತಂಡಗಳು ಬಂದು ನಾಟಕಗಳನ್ನು ಪ್ರದರ್ಶಿಸಲಿವೆ. ಬೆಂಗಳೂರಿನ ಪ್ರೇಕ್ಷಕರಿಗೆ ಬೆಂಗಳೂರೇತರ ತಂಡಗಳ ಹೊಸ ನಾಟಕಗಳನ್ನು ಪ್ರದರ್ಶಿಸುವ ಗುರಿ ತಂಡದ್ದಾಗಿದೆ. ಈ ಉತ್ಸವದಲ್ಲಿ ಎರಡು ನಾಟಕಗಳು ರಾಷ್ಟ್ರೀಯ ನಾಟಕ ಶಾಲೆ (NSD) ಆಯೋಜಿಸಿದ್ದ ಅಂತಾರಾಷ್ಟ್ರೀಯ ನಾಟಕೋತ್ಸವ, ಭಾರತ ರಂಗಮಹೋತ್ಸವಕ್ಕೆ ಆಯ್ಕೆಯಾಗಿದ್ದರೆ, ಇನ್ನೊಂದು ನಾಟಕ ಜನಪ್ರಿಯ ನಾಟಕವಾಗಿದೆ. ರವೀಂದ್ರ ಪೂಜಾರಿ, ಆಯೋಜಕರು, ಸಮಷ್ಟಿ ರಂಗತಂಡ

*

(ಭಾಗ 1)

ಕೆಂಡೋನಿಯನ್ಸ್​ ನಾಟಕದಲ್ಲಿ ಹಳ್ಳಿಯ ಒಂದು ಸಾಮಾನ್ಯ ಕ್ಯಾಂಟೀನಿನ ಮಾಲೀಕನಾದ ದಾಮು, ಹೆಂಡತಿ ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಸಂತೃಪ್ತ ಜೀವನ ನಡೆಸುತ್ತಿರುತ್ತಾನೆ. ಅವನು ತನ್ನ ಗ್ರಾಹಕರೊಂದಿಗೆ ಹಾಗೂ ಊರಿನವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾನೆ. ಅವನು ಸಿದ್ಧಪಡಿಸಿದ ಸವಿಯಾದ ತಿಂಡಿ, ಪೋಡಿ (ಪಕೋಡ) ಎಲ್ಲರಿಗೂ ಅಚ್ಚುಮೆಚ್ಚು. ಇತರರಂತೆ ಅವನೂ ಸಿಪ್ರಿ ಎಂಬ ವೀಸಾ ಏಜೆಂಟನ ಮಾತು ಕೇಳಿ ಕೆಂಡೋನಿಯಾ ಎಂಬ ದೇಶಕ್ಕೆ ಹೋಗುತ್ತಾನೆ. ಹಿಂಜರಿಕೆಯಿಂದಲೇ ತನ್ನ ಊರನ್ನು ಬಿಟ್ಟುಬಂದ ದಾಮುವಿಗೆ ಕೆಂಡೋನಿಯಾದಲ್ಲಿ ಏನಾಗುತ್ತದೆ? ಅವನಿಗೆ ಯಾವ ಕೆಲಸ ಸಿಗುತ್ತದೆ? ಅವನು ಯಾರನ್ನೆಲ್ಲಾ ಭೇಟಿಯಾಗುತ್ತಾನೆ? ಅವನು ಸಿದ್ದಪಡಿಸುವ ‘ಪೋಡಿ’ಗೆ ಏನಾಗುತ್ತದೆ? ಎಂಬುದೇ ಈ ನಾಟಕದ ಕಥಾವಸ್ತು. ಈ ನಾಟಕವು ನಗರೀಕರಣದ ನಿರುದ್ಯೋಗ, ಗ್ರಾಹಕೀಕರಣ, ಹಾಗೂ ಮಾರುಕಟ್ಟೆಯ ಆರ್ಥಿಕತೆಯ ಕರಾಳ ಮುಖಗಳನ್ನು ವಿಡಂಬನಾತ್ಮಕವಾಗಿ ಬಿಚ್ಚಿಡುತ್ತದೆ. ಈ ನಾಟಕವು ಭಾರತ ರಂಗ ಮಹೋತ್ಸವಕ್ಕೆ ಆಯ್ಕೆಯಾಗಿರುತ್ತದೆ.

ಇದನ್ನೂ ಓದಿ : Theatre: ಅಂಕಪರದೆ; ಭಿಕ್ಷಾಟನೆಯಿಂದ ಹೋರಾಟದವರೆಗೆ, ಇದು ‘ಅಕ್ಕಯ್’ ನಡೆದ ಹಾದಿ

Ankaparade Samashti Theatre Festival 2022 Ravindra Poojary

ನಾಟಕೋತ್ಸವದ ಆಯೋಜಕರಾದ ರವೀಂದ್ರ ಪೂಜಾರಿ

ಈ ನಾಟಕದ ನಿರ್ದೇಶಕ ಅರುಣ್ ಲಾಲ್ ಕಳೆದ 20ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ದೇಶ ವಿದೇಶಗಳಲ್ಲಿ ರಂಗತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ. ಇವರಿಗೆ ‘ಕೇರಳ ಸಂಗೀತ ನಾಟಕ ಅಕಾಡೆಮಿ’ಯ ಹವ್ಯಾಸಿ ನಾಟಕೋತ್ಸವದಲ್ಲಿ ‘ಅತ್ಯುತ್ತಮ ನಿರ್ದೇಶಕ-2015’ ಪ್ರಶಸ್ತಿ ದೊರಕಿದೆ. ಇವರು ನಿರ್ದೇಶಿಸದ ನಾಟಕಗಳು BRM, ಜಶ್ನೆ ಬಚ್ಪನ್, ITFOK, META ಮುಂತಾದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಪ್ರಸ್ತುತ ಇವರು ಕೇರಳದ ‘ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್’ನ ಕಲಾತ್ಮಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾಟಕ : ಕೆಂಡೋನಿಯನ್ಸ್ | ನಿರ್ದೇಶನ : ಅರುಣ್ ಲಾಲ್ | ಪ್ರದರ್ಶನ : ಮಾರ್ಚ್ 4, ಶುಕ್ರವಾರ | ಸ್ಥಳ : ಎ.ಡಿ.ಎ ರಂಗಮಂದಿರ | ಸಮಯ : ಸಂಜೆ 7ಕ್ಕೆ. ಟಿಕೆಟ್​ : 98451 63380

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ: ವಿ ಟೀಚ್ ಲೈಫ್ ಸರ್) 

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

*

ಇದನ್ನೂ ಓದಿ : Theatre : ಅಂಕಪರದೆ; ‘ಅಕ್ಕಯ್’ ನೋಡಲು ಮಾರ್ಚ್ 6ಕ್ಕೆ ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ

Published On - 3:03 pm, Sun, 27 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್