Theatre: ಅಂಕಪರದೆ; ವೈಚಾರಿಕನು ಭಾವುಕನೊಳಗೆ, ಭಾವುಕನು ವೈಚಾರಿಕನೊಳಗೆ ಕುಳಿತು ತಳಮಳಿಸುವ ಹೊತ್ತಿನಲ್ಲಿ

Play : ವಾಲ್ಮೀಕಿ ರಾಮಾಯಣದ ದುಷ್ಟ ವಾಲಿಯನ್ನು ಕುವೆಂಪು ಇಲ್ಲಿ ಪ್ರೀತಿಗಾಗಿ ಹಂಬಲಿಸಿ ದುಡಿಯವ, ತನ್ನ ಅಹಂಕಾರಕ್ಕೆ ತಾನೇ ನಾಚಿ ಪಶ್ಚಾತ್ತಾಪ ಪಡುವ ವಿವೇಕದೊಂದಿಗಿನ ಪ್ರೇಮದ ಬದುಕನ್ನು ಇಚ್ಛಿಸುವ ಅಣ್ಣನನ್ನಾಗಿ ಚಿತ್ರಿಸಿದ್ದಾರೆ.

Theatre: ಅಂಕಪರದೆ; ವೈಚಾರಿಕನು ಭಾವುಕನೊಳಗೆ, ಭಾವುಕನು ವೈಚಾರಿಕನೊಳಗೆ ಕುಳಿತು ತಳಮಳಿಸುವ ಹೊತ್ತಿನಲ್ಲಿ
ವಾಲಿವಧೆ ನಾಟಕದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Feb 27, 2022 | 4:41 PM

ಅಂಕರಪರದೆ | Ankaparade : ಕುವೆಂಪು ಅವರ ಶ್ರೀ ರಾಮಾಯಣದರ್ಶನಂದಿಂದ ‘ಪೂಣ್ಥೇನಗ್ನಿಸಾಕ್ಷಿ’ ಮತ್ತು ‘ನೀಂ ಸತ್ಯವ್ರತ ನೇದಿಟಂ’ ಎಂಬೆರಡು ಕಾವ್ಯ ಭಾಗವನ್ನು ಆಧರಿಸಿ ಈ ನಾಟಕವನ್ನು ರಚಿಸಲಾಗಿದೆ. ಇಂಗ್ಲಿಷ್, ಮುಖ್ಯವಾಹಿನಿಯಾಗಿ ಹರಿಯುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡದ ಘಟ್ಟಕಾವ್ಯ ಒಂದರ ರುಚಿಯನ್ನು ಇಂದಿನ ತಲೆಮಾರಿಗೆ ಮುಟ್ಟಿಸುವುದಕ್ಕಾಗಿ ಮತ್ತು ಸಂಬಂಧಗಳು ಪಲ್ಲಟಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರೀತಿಯ ರೂಪಕವಾಗಿ “ವಾಲಿವಧೆ” ಒದಗಿ ಬಂದಿದೆ. ವಾಲ್ಮೀಕಿ ರಾಮಾಯಣದ ದುಷ್ಟ ವಾಲಿಯನ್ನು ಕುವೆಂಪು ಇಲ್ಲಿ ಅವನ ಸಾಯುವ ಕೊನೆಯ ಘಟ್ಟದಲ್ಲಿ ಪ್ರೀತಿಗಾಗಿ ಹಂಬಲಿಸಿ ದುಡಿಯವ, ತನ್ನ ಅಹಂಕಾರಕ್ಕೆ ತಾನೇ ನಾಚಿ ಪಶ್ಚಾತ್ತಾಪ ಪಡುವ ವಿವೇಕದೊಂದಿಗಿನ ಪ್ರೇಮದ ಬದುಕನ್ನು ಇಚ್ಛಿಸುವ ಅಣ್ಣನನ್ನಾಗಿ ಚಿತ್ರಿಸಿದ್ದಾರೆ. ಯಕ್ಷಗಾನ, ಕಳರಿ ಮತ್ತು ಮಣಿಪುರಿಕಲೆಯ ಕೆಲ ಪಟ್ಟುಗಳನ್ನು ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದೊಂದು ಸಂಗೀತ ಪ್ರಧಾನ ನಾಟಕ, ವೈಚಾರಿಕನು-ಭಾವುಕನೊಳಗೆ, ಭಾವುಕನು- ವೈಚಾರಿಕನೊಳಗೆ ಕುಳಿತು ತಳಮಳಿಸುತ್ತಿರುವಾಗ ಇಂಡಿಯಾದ ಹಳೇ ಕಥೆಯೊಂದು ಕೇವಲ ಆಳದ ಪ್ರೀತಿಯ ಸಲುವಾಗಿ ಇಲ್ಲಿ ನಾಟಕವಾಗಿದೆ. ಎಂ. ಗಣೇಶ್, ರಂಗ ನಿರ್ದೇಶಕ

*

(ಭಾಗ 3)

ನಿರ್ದೇಶಕ ಎಂ. ಗಣೇಶ್ ಮೂಲತ: ಉಡುಪಿಯವರಾದ ಇವರು ಯಕ್ಷಗಾನದ ಕಲಾವಿದರು. ನೀನಾಸಂ ಪದವಿ ಪಡೆದು ಜನಮನದಾಟ, ಆಟಮಾಟ, ನೀನಾಸಂ ಮರು ತಿರುಗಾಟಗಳಲ್ಲಿ ನಟರಾಗಿ, ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ರಂಗಾಯಣ ಮೈಸೂರಿನ ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿದ್ದರು. ಚೋಮನ ದುಡಿ, ಪಂಚವಟಿ, ನೆರೆ, ಸತ್ರು ಅಂದ್ರೆ ಸಾಯ್ತಾರಾ?, ಆಲಿವರ, ರಾಮಧ್ಯಾನ ಚರಿತೆ, ಏ ತಾಯೇ ನೆಲದವ್ವ, ನಳ ದಮಯಂತಿ, ಸತ್ಯ ಹರಿಶ್ಚಂದ್ರಗಳನ್ನು ನಿರ್ದೇಶಿಸಿದ್ದಾರೆ. ಹಳೆಗನ್ನಡ ಮರೆಯಾಗಿರುವ ಕಾಲದಲ್ಲಿ ಹಳೆಗನ್ನಡದಲ್ಲಿ ನಾಟಕ ನಿರ್ದೇಶಿಸಿ ನಾಟಕ ಪ್ರೀತಿ ಬೆಳೆಸಿದ್ದು ಮತ್ತು ಇದೇ ನಾಟಕವನ್ನು ತುಳುವಿನಲ್ಲೂ ನಿರ್ದೇಶಿಸಿ ಮೆಚ್ಚುಗೆ ಗಳಿಸಿರುವುದು ಇವರ ಹೆಗ್ಗಳಿಕೆ.

ಸಮಷ್ಟಿ ತಂಡ : ಸಮಷ್ಟಿ ತಂಡವು 2000ದಲ್ಲಿ ಹುಟ್ಟಿಕೊಂಡ ರಂಗತಂಡ. ಹೊಸ ಪ್ರತಿಭೆಗಳನ್ನು ಹುಡುಕಿ, ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸಿ, ನಿರಂತರ ರಂಗ ಚಟುವಟಿಕೆಗಳನ್ನು ನಡೆಸುವುದು ಇದರ ಮುಖ್ಯ ಉದ್ದೇಶ. ಈವರೆಗೆ ತಂಡವು 22 ನಾಟಕಗಳನ್ನು ತಯಾರಿಸಿ ಪ್ರದರ್ಶಿಸಿದೆ. ಇವುಗಳಲ್ಲಿ ಮುಖ್ಯವಾದವು, “ಕಂತು”, “ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ”, ನೀರು ಕುಡಿಸಿದ ನೀರೆಯರು”, “ಚಿತ್ರಪಟ”, “ಪ್ರಮೀಳಾರ್ಜುನೀಯಂ”, “ವಿಶಾಕೆ”, “ಚಿರಕುಮಾರ ಸಭಾ”, “ನಾಯೀಕತೆ”, “ಮಿಸ್ ಸದಾರಮೆ”, “ಕತೆ ಹೇಳತೀವಿ”, “ಆವಾಂತರ”, “ಕಥನ”, “ಪ್ರೀತಿ”, “ಶಾಂಡಿಲ್ಯ ಪ್ರಹಸನ”, “ಸಾಫಲ್ಯ”, “ಅಲೆಗಳಲ್ಲಿ ರಾಜಹಂಸಗಳು”, “ಮೃಚ್ಛಕಟಿಕ” ಮತ್ತು “ಹರಿಣಾಭಿಸರಣ”.

ಸಮಷ್ಟಿ ನಾಟಕೋತ್ಸವದ ಈ ನಾಟಕದ ಬಗ್ಗೆಯೂ ಓದಿ : Theatre: ಅಂಕಪರದೆ; ನಮ್ಮ ಕ್ಯಾಂಟೀನ್ ದಾಮು ಪೋಡಿ ತಗೊಂಡು ಕೆಂಡೋನಿಯಾಕ್ಕೆ ಹೋದಮೇಲೆ ಏನಾಯ್ತಂತೆ?

Ankaparade Samashri Theatre Festival 2022 Vaalivadhe Play Directed By M Ganesh

ನಿರ್ದೇಶಕ ಎಂ. ಗಣೇಶ್

ಸಮಷ್ಟಿಯ “ಚಿತ್ರಪಟ” ನಾಟಕವು ಮೂರು META ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, 2015 ರಲ್ಲಿ ಅಂತರ ರಾಷ್ಟ್ರೀಯ ನಾಟಕೋತ್ಸವ, ಭಾರತ ರಂಗಮಹೋತ್ಸವಕ್ಕೆ ಮತ್ತು ಬಹುರೂಪಿ ಉತ್ಸವಕ್ಕೆ ಆಯ್ಕೆಯಾಗಿತ್ತು. ಉಡುಪಿಯ ರಂಗಭೂಮಿ (ರಿ) ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಇದುವರೆಗೆ ತಂಡವು 3 ಭಾರಿ ಪ್ರಥಮ, 2 ಭಾರಿ ದ್ವಿತೀಯ ಮತ್ತು 1 ಭಾರಿ ತೃತೀಯ ಸ್ಥಾನವನ್ನು ಪಡೆದುಕೊಡಿರುತ್ತದೆ. BIAS ಮತ್ತು ART MANTRAM ಆಯೋಜಿಸಿದ್ದ ಯುವ ನಿರ್ದೇಶಕರ ನಾಟಕೋತ್ಸವದಲ್ಲಿ ತಂಡದ “ಹರಿಣಾಭಿಸರಣ” ನಾಟಕವು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ.

ನಾಟಕ : ವಾಲಿವಧೆ | ಪ್ರದರ್ಶನ : ಮಾರ್ಚ್ 6, ಸ್ಥಳ : ಎ.ಡಿ.ಎ ರಂಗಮಂದಿರ, ಬೆಂಗಳೂರು | ಸಮಯ : ಸಂಜೆ 7. ಟಿಕೆಟ್ : 98451 63380

(ಮುಗಿಯಿತು)

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

*

ಸಮಷ್ಟಿ ನಾಟಕೋತ್ಸವದಲ್ಲಿ ನಡೆಯುವ ಈ ನಾಟಕದ ಬಗ್ಗೆಯೂ ಓದಿ : Theatre: ಅಂಕಪರದೆ; ಅವರು ‘ವೀ ಟೀಚ್ ಲೈಫ್ ಸರ್’ ಎನ್ನುತ್ತಿದ್ದಾರೆ, ನೀವು ಆ ದಿನ ಅಲ್ಲಿರುತ್ತೀರಲ್ಲ?

Published On - 4:40 pm, Sun, 27 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ