Theatre: ಅಂಕಪರದೆ; ಅವರು ‘ವೀ ಟೀಚ್ ಲೈಫ್ ಸರ್’ ಎನ್ನುತ್ತಿದ್ದಾರೆ, ನೀವು ಆ ದಿನ ಅಲ್ಲಿರುತ್ತೀರಲ್ಲ?

Play : ಈ ಪಠ್ಯ ಕೇವಲ ಯುದ್ಧದ ಪರಿಣಾಮ ಅಥವಾ ರೋದನೆಯಾಗದೆ ಯುದ್ಧದ ಅನಿವಾರ್ಯತೆಯ ಒತ್ತಡವೂ ಆಗಿದೆ. ಕಥನ-ಕಾವ್ಯ-ರೂಪಕವೇ ಈ ರಂಗ ಪ್ರಯೋಗದ ಮೂಲ.

Theatre: ಅಂಕಪರದೆ; ಅವರು ‘ವೀ ಟೀಚ್ ಲೈಫ್ ಸರ್’ ಎನ್ನುತ್ತಿದ್ದಾರೆ, ನೀವು ಆ ದಿನ ಅಲ್ಲಿರುತ್ತೀರಲ್ಲ?
‘ವಿ ಟೀಚ್ ಲೈಫ್ ಸರ್’ ನಾಟಕದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on: Feb 27, 2022 | 3:57 PM

ಅಂಕಪರದೆ | Ankaparade : ‘ವೀ ಟೀಚ್ ಲೈಫ್ ಸರ್’ ಇದು ಯುದ್ಧದ ಕುರಿತಾಗಿ ಒಂದು ಪ್ರಯೋಗಾತ್ಮಕ ರಂಗಪಠ್ಯ. ಪ್ಯಾಲೆಸ್ತೈನ್ ಯುದ್ಧದ ಕಥೆಗಳು ಮತ್ತು ಕಾವ್ಯಗಳನ್ನು ಇಲ್ಲಿ ಪಠ್ಯೀಕರಿಸಲಾಗಿದೆ. ಈ ಪಠ್ಯ ಕೇವಲ ಯುದ್ಧದ ಪರಿಣಾಮ ಅಥವಾ ರೋದನೆಯಾಗದೆ ಯುದ್ಧದ ಅನಿವಾರ್ಯತೆಯ ಒತ್ತಡವೂ ಆಗಿದೆ. ಕಥನ-ಕಾವ್ಯ-ರೂಪಕವೇ ಈ ರಂಗ ಪ್ರಯೋಗದ ಮೂಲ. ಆದ್ದರಿಂದಲೇ ಇದು ಕೇವಲ ವಾಚ್ಯವಾಗದೆ, ದೃಶ್ಯ ಹಾಗೂ ಆಂಗಿಕವಾಗಿಯೇ ರೂಪುಗೊಳ್ಳುತ್ತದೆ. ಈ ನಾಟಕವು ಭಾರತ ರಂಗ ಮಹೋತ್ಸವಕ್ಕೆ ಆಯ್ಕೆಯಾಗಿರುತ್ತದೆ. ಈ ನಾಟಕಕ್ಕೆ ರಫೀಫ್ ಜಿಯಾದ್ ಅವರ ‘Poetry Performance’ ಕಾವ್ಯವನ್ನು ಪಠ್ಯದಲ್ಲಿ ನಾಂದಿಯಾಗಿಸಿದ್ದೇವೆ. ಸಾದತ್ ಹಾಸನ್ ಮಾಂಟೋ ಬರೆದ ‘Kingdom’s End And Other Stories’  ಕಥಾಸಂಕಲನದಿಂದ ಆಯ್ದ ‘The Dog of Titwal’ ಕತೆಯ ಪ್ರಸ್ತುತಿಯಾಗಿದೆ. ಪ್ರಶಾಂತ್ ಉದ್ಯಾವರ, ರಂಗನಿರ್ದೇಶಕ

*

(ಭಾಗ 2)

ಈ ನಾಟಕದೊಳಗೆ ‘Frozen Rose’ ಇರಾನಿ ಕತೆಯನ್ನೂ ಅಳವಡಿಸಿಕೊಳ್ಳಲಾಗಿದೆ. ಯುದ್ಧದ ಭೀಕರತೆಯನ್ನು ವಿಜೃಂಭಿಸದೆ ತಾಯಿ-ಮಗಳ ಮುಖೇನ ಯುದ್ಧದ ಪರಿಣಾಮವನ್ನು ಅತ್ಯಂತ ಸೂಕ್ಷ್ಮವಾಗಿ, ತೀವ್ರವಾಗಿ ಹೇಳುವ ಕತೆ ಇದು. ‘ಪ್ಯಾಲೆಸ್ತೈನ್ ಮಗುವಿಗೆ ಲಾಲಿ’ – ಫೈಜ್ ಅಹಮ್ಮದ್ ಫೈಜ್ ಅವರ ಈ ಕವಿತೆ Frozen Rose ನ ಮಗುವಿನ ಮುಂದುವರಿಕೆಯ ಭಾಗವೇ ಆಗಿದೆ. ಗಡಿ, ಯುದ್ಧ ನಾಡಲ್ಲಿ ಅರಳಿದ ಸುಂದರ ಪ್ರೇಮಕತೆ, ಇಸ್ರೇಲ್ ಹುಡುಗ ಹಾಗೂ ಪ್ಯಾಲೆಸ್ತೈನ್ ಹುಡುಗಿಯ ಪ್ರೀತಿ, ಒಂದು ರಾಜಕೀಯ ಸಮಾಜ (ಅಧಿಕಾರ ಮತ್ತು ಯುದ್ಧ)ದಲ್ಲಿ ಹುಟ್ಟಿಸುವ ತಲ್ಲಣ, ತನ್ಮೂಲಕ ಬಲಿಯಾಗುವ ಒಂದು ಸಂಬಂಧದ ಕತೆ.

‘Shades of Anger’ ರಫೀಫ್ ಜಿಯಾದರ ‘ಗಡಿ’ ಕತೆಯ ಹುಡುಗಿಯ ನೋವಿನ ಆರ್ದ್ರತೆಯ – ಭಾಗವಾಗಿಯೇ ಈ ಕಾವ್ಯ ಪ್ರಸ್ತುತಗೊಳ್ಳುತ್ತದೆ. ಈ ಇಷ್ಟು ಕಾವ್ಯ ಮತ್ತು ಕತೆಗಳು ದೃಶ್ಯ ಹಾಗೂ ರೂಪಕವಾಗಿದೆ. ಸಮಕಾಲೀನ ನೃತ್ಯ ಮತ್ತು ಸಮಕಾಲೀನ ರಂಗಭೂಮಿ ಈ ಎರಡನ್ನೂ ಒಳಗೊಂಡ ರಂಗಪ್ರಯೋಗವಿದು.

Ankaparade Samashti Theatre Festival 2022 We Teach Life Sir

ನಿರ್ದೇಶಕ ಪ್ರಶಾಂತ್ ಉದ್ಯಾವರ

ಪ್ರಶಾಂತ್ ಉದ್ಯಾವರ ಈ ನಾಟಕದ ನಿರ್ದೇಶಕರು. ಇವರು ಕಳೆದ 10 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಇವರು ಸದ್ಯ ಸಂಗಮ ಕಲಾವಿದರ ತಂಡದಲ್ಲಿ ನಟ, ನಿರ್ದೇಶಕ ಮತ್ತು ತಾಂತ್ರಿಕ ತಜ್ಞನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗಾಗಿ ಇವರು, “ಬೆಳಕಿನೊಂದು ಕಿರಣ – ಮೇರಿ ಕ್ಯೂರಿ”, “ಜೀವಯಾನ ಮಾತು”, “ಚದುರಿದ ಚಿತ್ರಗಳು” ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗಶಂಕರ ಆಯೋಜಿಸಿದ್ದ “Making Theatre – Preparing Young Directors 2017” ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಇವರು ಈ ಯೋಜನೆಯಡಿಯಲ್ಲೇ “ವಿ ಟೀಚ್ ಲೈಫ್ ಸರ್!” ನಾಟಕವನ್ನು ನಿರ್ದೇಶಿಸಿರುತ್ತಾರೆ. ನೃತ್ಯ ಮತ್ತು ಚಿತ್ರಕಲೆಯಲ್ಲಿ ಪ್ರವೀಣರಾಗಿರುವ ಇವರು ಅದೇ ಮಾಧ್ಯಮವನ್ನು ತಮ್ಮ ನಾಟಕದಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡಿರುತ್ತಾರೆ. ನೃತ್ಯ ಮತ್ತು ಚಿತ್ರಕಲೆಗೆ ಸಂಬಂಧಿಸಿದಂತೆ ಇವರು “ಯಾನ ಡ್ಯಾನ್ಸ್ ಥಿಯೇಟರ್” ಎನ್ನುವ ಶಾಲೆಯನ್ನು ಸ್ಥಾಪಿಸಿದ್ದಾರೆ. ಇವರು ಇತ್ತೀಚೆಗೆ ನಿರ್ದೇಶಿದ ನಾಟಕ, ಗಿರೀಶ್ ಕಾರ್ನಾಡರ “ರಕ್ಕಸ ತಂಗಡಿ”.

ನಾಟಕ : ವೀ ಟೀಚ್ ಲೈಫ್ ಸರ್ | ನಿರ್ದೇಶನ: ಪ್ರಶಾಂತ್ ಉದ್ಯಾವರ | ಪ್ರದರ್ಶನ : ಮಾರ್ಚ್ 5, ಸ್ಥಳ : ಎ.ಡಿ.ಎ. ರಂಗಮಂದಿರ, ಬೆಂಗಳೂರು | ಸಮಯ : ಸಂಜೆ 7 | ಟಿಕೆಟ್ : 98451 63380

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ : ವಾಲಿವಧೆ)

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

*

ಸಮಷ್ಟಿ ನಾಟಕೋತ್ಸವದ ಈ ನಾಟಕದ ಬಗ್ಗೆಯೂ ಓದಿ : Theatre: ಅಂಕಪರದೆ; ನಮ್ಮ ಕ್ಯಾಂಟೀನ್ ದಾಮು ಪೋಡಿ ತಗೊಂಡು ಕೆಂಡೋನಿಯಾಕ್ಕೆ ಹೋದಮೇಲೆ ಏನಾಯ್ತಂತೆ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್