Book Release: ಶೆಲ್ಫಿಗೇರುವ ಮುನ್ನ; ‘ಚಿಮ್ಮಿದ ರಕ್ತ’ ಇಂದು ಉಮರ್ ಫಾರೂಕ್ ಪುಸ್ತಕ ಬಿಡುಗಡೆ

Writer : ‘ಅಧ್ಯಯನಶೀಲತೆ, ಸಾಮಾಜಿಕ ವಿದ್ಯಮಾನಗಳ ಬಗೆಗಿನ ಅರಿವು ಮತ್ತು ಅವುಗಳ ಅನ್ಯಾಯದ ವಿರುದ್ಧ ದನಿಯೆತ್ತಬೇಕೆಂಬ ಕಾಳಜಿಯಿಂದಾಗಿ ಉಮರ್ ಫಾರೂಕ್ ಗಮನಾರ್ಹ ಉದಯೋನ್ಮುಖ ತರುಣ ಲೇಖಕರಾಗಿದ್ದಾರೆ.’ ಡಾ. ಬಂಜಗೆರೆ ಜಯಪ್ರಕಾಶ್

Book Release: ಶೆಲ್ಫಿಗೇರುವ ಮುನ್ನ; ‘ಚಿಮ್ಮಿದ ರಕ್ತ’ ಇಂದು ಉಮರ್ ಫಾರೂಕ್ ಪುಸ್ತಕ ಬಿಡುಗಡೆ
Follow us
ಶ್ರೀದೇವಿ ಕಳಸದ
|

Updated on:Feb 27, 2022 | 12:41 PM

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

ಕೃತಿ : ಚಿಮ್ಮಿದ ರಕ್ತ ಪುಟ : 176 ಬೆಲೆ : ರೂ. 200 ಮುಖಪುಟ ವಿನ್ಯಾಸ : ಚಂದ್ರಮೋಹನ ಪ್ರಕಾಶನ : ನಿರಂಕುಶ ಪ್ರಕಾಶನ, ಬೆಂಗಳೂರು

*

ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಜೈಭೀಮ್ ಭವನದಲ್ಲಿ ಇಂದು ಸಂಜೆ 5.30ಕ್ಕೆ ನಟ, ಹೋರಾಟಗಾರ ಚೇತನ್ ಅಹಿಂಸಾ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

*

ಉಮರ್‌ ಫಾರೂಕ್ ಬರೆದಿರುವ ಲೇಖನಗಳ ಸಂಗ್ರಹ “ಚಿಮ್ಮಿದ ರಕ್ತ” ಮಾಹಿತಿಪೂರ್ಣವಾದ ವಿಚಾರಾರ್ಹವಾದ ಕೃತಿ. ವೃತ್ತಿಯಲ್ಲಿ ಕೃಷಿಕನಾಗಿ, ಪ್ರವೃತ್ತಿಯಲ್ಲಿ ಸಾಮಾಜಿಕ ನ್ಯಾಯದ ಹೋರಾಟಗಾರನಾಗಿರುವ ಉಮರ್‌ಫಾರೂಕ್ ಖಚಿತ ಅಂಕಿಅಂಶಗಳೊಂದಿಗೆ ತಮ್ಮ ಚಿಂತನೆ ನಡೆಸಿದ್ದಾರೆ. ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಲೇಖನಗಳಲ್ಲಿ ಕಾಣಿಸಿದ್ದಾರೆ. ಅವರ ಅಧ್ಯಯನಶೀಲತೆ, ಸಾಮಾಜಿಕ ವಿದ್ಯಮಾನಗಳ ಬಗೆಗಿನ ಅರಿವು ಮತ್ತು ಅವುಗಳ ಅನ್ಯಾಯದ ವಿರುದ್ಧ ದನಿಯೆತ್ತಬೇಕೆಂಬ ಕಾಳಜಿಯಿಂದಾಗಿ ಅವರೊಬ್ಬ ಗಮನಾರ್ಹ ಉದಯೋನ್ಮುಖ ತರುಣ ಲೇಖಕರಾಗಿದ್ದಾರೆ. ಡಾ. ಬಂಜಗೆರೆ ಜಯಪ್ರಕಾಶ, ವಿಮರ್ಶಕ

ಆತ್ಮಸಂತೋಷಕ್ಕಾಗಿ ಬರವಣಿಗೆಯನ್ನು ಹವ್ಯಾಸವಾಗಿ ಆಯ್ದುಕೊಂಡಿರುವ ನನಗೀಗ ಇಪ್ಪತ್ತೆರಡು ವರ್ಷ.  ಇಲಕಲ್ ತಾಲೂಕಿನ ಇಸ್ಲಾಂಪುರ ನಮ್ಮೂರು. ಬಾಲ್ಯದಿಂದಲೂ ನಾನು ಸೌಮ್ಯ ಸ್ವಭಾವದವನಾಗಿಯೇ ಬೆಳೆಯಬೇಕೆಂದುಕೊಂಡವರು ನನ್ನ ತಂದೆ. ಅದಕ್ಕಾಗಿ ನನ್ನ ಕೈಗಿಟ್ಟಿದ್ದು ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಮರಂಥವರ ಪುಸ್ತಕಗಳನ್ನು ಮಾತ್ರ. ಬಿಜಾಪುರದ ಕೃಷಿ ಮಹಾವಿದ್ಯಾಲಯದಲ್ಲಿ ಓದುವಾಗ ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಓದುತ್ತಲೇ ನನಗರಿವಿಲ್ಲದಂತೆ ಕ್ರಾಂತಿಯಡೆ ಹಾರಿದೆ.  ಓದಿದ್ದನ್ನು ನಾಲ್ಕಾರು ಜನರೊಂದಿಗೆ ಹಂಚಿಕೊಳ್ಳಲು ಸಾಮಾಜಿಕ ಜಾಲತಾಣ ವೇದಿಕೆಯಾಗಿ ಸಿಕ್ಕಿತು.

ದಲಿತರ ಮೇಲಾದ ಹತ್ಯಾಕಾಂಡಗಳ ಕುರಿತು ತಿಳಿದುಕೊಂಡೆ. ಈ ಹತ್ಯಾಕಾಂಡಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನ ದಲಿತ ಸಹೋದರರಲ್ಲಿ, ಬಹುಜನ ಚಳುವಳಿಯ ಮಿತ್ರರಲ್ಲಿ ಕೇಳಿದಾಗ ಬಹುತೇಕ ಜನರಿಗೆ ಈ ಹತ್ಯಾಕಾಂಡಗಳ ಕುರಿತು ಮಾಹಿತಿ ಇರಲಿಲ್ಲ. ಅಷ್ಟೇ ಏಕೆ, ಬತಾನಿ ತೋಲಾ, ಕಿಲ್ವೆನ್ಮನಿ, ಚುಂಡೂರು, ಮೆಲವಲವು, ಬೆಲ್ಚಿ ಎಂಬ ಊರುಗಳ ಹೆಸರು ಸಹ ಗೊತ್ತಿರಲಿಲ್ಲ. ಮುಸ್ಲಿಂ ಸಹೋದರರಲ್ಲಿಯೂ ಅಷ್ಟೇ. ಬಹುತೇಕರು ನೆಲ್ಲಿ, ಹಾಶಿಂಪುರ, ಭಾಗಲ್ಪುರ್ ಎನ್ನುವ ಊರುಗಳ ಹೆಸರೂ ಸಹ ಕೇಳಿರಲಿಲ್ಲ. ಹಾಗಾಗಿ ಇತಿಹಾಸ ಮರೆಯಾಗಬಾರದೆನ್ನುವ ಕಾರಣಕ್ಕೆ, ಮತ್ತೊಮ್ಮೆ ನೆನಪಿಸಬೇಕೆಂಬ ನನ್ನದೊಂದು ನಿರ್ಣಯ, ಅಚಲ ಬದ್ಧತೆಯಾಗಿ ರೂಪುಗೊಂಡಿತ್ತು. ಹೊಟ್ಟೆಯಲ್ಲಿ ಆಕ್ರೋಶ, ಕಣ್ಣಿನಲ್ಲಿ ನೀರು ತುಂಬಿಕೊಂಡು ಪುಸ್ತಕ ಬರೆಯುವ ಸಾಹಸಕ್ಕೆ ಕೈ ಹಾಕಿದೆ ಉಮರ್ ಫಾರೂಕ್, ಎಚ್. ಎಲ್, ಲೇಖಕ

*

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ, ಶಿರಾಳದಿಂದ 7 ಕಿಲೋಮೀಟರ್ ದೂರದಲ್ಲಿ ಕರಂಚೇಡು ಎಂಬ ಗ್ರಾಮವಿದೆ. ಈ ಊರಿನಲ್ಲಿ ನಡೆದ ದಲಿತರ ಹತ್ಯಾಕಾಂಡದಲ್ಲಿ 8 ಜನ ದಲಿತರನ್ನು ಕಗ್ಗೊಲೆ ಮಾಡಲಾಯಿತು. ಶತ್ರು ದೇಶವನ್ನು ನಾಶ ಮಾಡಲು ಹೋಗುವ ಸೇನೆಯಂತೆ 1985 ಜುಲೈ 15 ರಂದು ಬೆಳಗ್ಗೆ ಕರಂಚೇಡು ಗ್ರಾಮದ ಸವರ್ಣೀಯರು (ಖಮ್ಮ ಜಾತಿಯವರು) ಮತ್ತು ಅವರೊಂದಿಗೆ ಸುತ್ತಮುತ್ತಲಿನ 7 ಗ್ರಾಮದ ಸವರ್ಣೀಯರು ಒಕ್ಕೂಟದ ರೀತಿ ಮಾಡಿಕೊಂಡು ಕರಂಚೇಡು ದಲಿತರ ಮೇಲೆ ದಾಳಿ ಮಾಡಿದರು.

ರಕ್ತಪಿಶಾಚಿ ಸವರ್ಣೀಯರು ಕತ್ತಿ, ಕೊಡಲಿ, ತಲವಾರು ಮುಂತಾದ ಹರಿತವಾದ ಆಯುಧಗಳನ್ನು ಕೈಯಲ್ಲಿ ಹಿಡಿದು 7 ಕಿಲೋ ಮೀಟರ್ ದೂರದವರೆಗೆ ದಲಿತರನ್ನು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಚ್ಚಿ ಹಾಕಿದರು. ಈ ಬೀಭತ್ಸ ಕಗ್ಗೊಲೆಯಲ್ಲಿ 8 ಜನ ದಲಿತ ಜೀವಗಳು ಆಹುತಿಯಾದವು. ಹಾಗೂ ಅಸಂಖ್ಯಾತ ದಲಿತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಯಿತು.

ಕರಂಚೇಡು ಗ್ರಾಮದಲ್ಲಿ ಖಮ್ಮ ಜಾತಿಯವರು ಬಹುಸಂಖ್ಯಾತರಾಗಿದ್ದರು. ಈ ಗ್ರಾಮವು ದೊಡ್ಡ ಗ್ರಾಮ ಪಂಚಾಯತ್ ಕೇಂದ್ರವೇ ಆಗಿತ್ತು. ಒಟ್ಟು 18 ಜನ ಗ್ರಾಮ ಪಂಚಾಯತ್ ಸದಸ್ಯರಲ್ಲಿ 8 ಜನ ಸದಸ್ಯರು ಖಮ್ಮ ಜಾತಿಯವರಿರುತ್ತಿದ್ದರು. ಉಳಿದ ವಾರ್ಡ್‌ಗಳಲ್ಲಿ ಹಿಂದುಳಿದ ಜಾತಿಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿರುತ್ತಿದ್ದರು. ಖಮ್ಮ ಜಾತಿಯವರು ಭೂಮಾಲಕರಾಗಿದ್ದರು. ಹತ್ತಿ, ತಂಬಾಕು, ಮುಂತಾದ ವಾಣಿಜ್ಯ ಬೆಳೆಗಳೊಂದಿಗೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದರು. ಇದನ್ನು ಹೊರತುಪಡಿಸಿ ಬಡ್ಡಿ ವ್ಯವಹಾರ, ಇತರೆ ವ್ಯಾಪಾರಗಳು, ಸಿನೆಮಾ ಈ ರೀತಿ ಎಲ್ಲರಂಗಗಳಲ್ಲಿ ತಮ್ಮ ಹಿಡಿತವನ್ನು ಸಾಧಿಸಿರುವ ಖಮ್ಮಗಳು ಜೊತೆಗೆ ರಾಜಕೀಯ ಪ್ರಭಾವವನ್ನು ಹೊಂದಿದ್ದರು. ಅಹಂಕಾರ, ದರ್ಪದಿಂದ ಮೆರೆದು ದೌರ್ಜನ್ಯ ನಡೆಸಲು ಇಷ್ಟು ಸವಲತ್ತು ಸಾಕಲ್ಲವೇ?

ಉಮರ್ ಫಾರೂಕರ ಈ ಬರಹವನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಆಶಾತಾಯಂದಿರ ಎದೀಗೆ ಹೊಟ್ಟೀಗೆ ಬೇಕಾಗಿರೂದು ಚಪ್ಪಾಳಿ, ಘಂಟಿ ಸಪ್ಪಳಲ್ರೀ

ಖಮ್ಮ ಜಾತಿಯವರು ಬಹಳ ಶ್ರೀಮಂತರು ಹಾಗೂ ಇತರೆ ಜಾತಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ ಕೊಬ್ಬಿದ ಕೋಣಗಳಾಗಿದ್ದ ಅವರು ಊಳಿಗಮಾನ್ಯ ಸಂಸ್ಕೃತಿಯೊಂದಿಗೆ ಬಡ ರೈತಾಪಿ, ಕೂಲಿ ಕಾರ್ಮಿಕ ವರ್ಗದ ಮೇಲೆ ಸವಾರಿ ಮಾಡುತ್ತಿದ್ದರು. ಇದರಿಂದಾಗಿ ಗ್ರಾಮದಲ್ಲಿ ಆಧುನಿಕ ಮತ್ತು ಪ್ರಗತಿಪರ ವಿಚಾರಗಳಿಗೆ ಸ್ಥಾನವಿರಲಿಲ್ಲ. ಗ್ರಾಮದಲ್ಲಿ ಅಧ್ಯಕ್ಷತೆ ವಹಿಸುತ್ತಿದ್ದ ಖಮ್ಮ ಜಾತಿಯವರು ಗ್ರಾಮದ ಎಲ್ಲಾ ವ್ಯವಹಾರಗಳನ್ನು ತಾವೇ ನಿರ್ಧರಿಸುತ್ತಿದ್ದರು. ಸರ್ವಾಧಿಕಾರತ್ವದ ವಾಡಿಕೆಯಂತೆ ತಮ್ಮ ಮನೆ, ಹೊಲಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು, ಅವಮಾನಿಸುವುದು, ದೈಹಿಕ ಹಲ್ಲೆ ಮಾಡುವುದು ಅಷ್ಟೇ ಅಲ್ಲ ಕೊಲೆಯೂ ಸಹ ಮಾಡಿದ್ದುಂಟು. ಮುಖ್ಯವಾಗಿ ಕರಂಚೇಡು ಗ್ರಾಮದಲ್ಲಿರುವ ಖಮ್ಮ ಜಾತಿಯವರು ಜಸ್ಟೀಸ್ ಪಕ್ಷದ ನಾಯಕರಾದ ಕುಪ್ಪುಸ್ವಾಮಿ ಮತ್ತು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಬೆಂಬಲ ಹೊಂದಿದ್ದರು. ಈ ಜಾತಿಯವರು ಭಿನ್ನ ರಾಜಕೀಯ ಪಕ್ಷದಲ್ಲಿದ್ದರೂ ತಮ್ಮ ಜಾತಿಯ ಅಧಿಪತ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ರಾಜಕೀಯವನ್ನು ಬದಿಗಿಟ್ಟು ಒಂದಾಗುತ್ತಿದ್ದರು.

ಹೀಗಿರುವಾಗ ಕಾಂಗ್ರೆಸ್ಸಿನಲ್ಲಿದ್ದ ರೆಡ್ಡಿಗಳ ರಾಜಕೀಯಕ್ಕೆ ಸವಾಲಾಗಿ ಎನ್.ಟಿ. ರಾಮರಾವ್ ಸ್ಥಾಪಿಸಿದ ತೆಲುಗು ದೇಶಂ ಪಕ್ಷ ಹುಟ್ಟಿಕೊಂಡಿತು. ಎನ್. ಟಿ. ರಾಮರಾವ್ ಕೂಡ ಖಮ್ಮ ಜಾತಿಗೆ ಸೇರಿದವರು. ಆದಕಾರಣ ತೆಲುಗು ದೇಶಂ ಸ್ಥಾಪನೆಯಾದ ತಕ್ಷಣವೇ ಕರಂಚೇಡಿನ ಖಮ್ಮ ಜಾತಿಯವರು ತೆಲುಗು ದೇಶಂ ಪಕ್ಷವನ್ನು ಬೆಂಬಲಿಸತೊಡಗಿದರು. ಕಾಲ ಕಳೆದಂತೆ ತೆಲುಗು ದೇಶಂ ಪಕ್ಷವು ಆಂಧ್ರ ಪ್ರದೇಶದಲ್ಲಿ ರಾಜಕೀಯ ಅಧಿಕಾರ ಹಿಡಿದಿದ್ದು ಖಮ್ಮ ಜಾತಿಯ ರಾಜಕೀಯ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿತು ಮತ್ತು ಎನ್.ಟಿ. ರಾಮರಾವ್ ತನ್ನ ಮಗಳು ಪುರಂದರೇಶ್ವರಿಯವರನ್ನು ಇದೇ ಗ್ರಾಮದ ದಗ್ಗುಬಾಟಿ ಸೆಂಚುರಾಮಯ್ಯನ ಮಗನಿಗೆ ಮದುವೆ ಮಾಡಿ ಕೊಟ್ಟಿರುವುದು ಮತ್ತೊಂದು ವಿಶೇಷ. ಖಮ್ಮ ಜಾತಿಗೆ ಸೇರಿದ ಇದೇ ದಗ್ಗುಬಾಟಿ ಸೆಂಚುರಾಮಯ್ಯ ಈ ಗ್ರಾಮದ ಅತೀ ಕ್ರೂರ ಭೂಮಾಲಕನಾಗಿದ್ದುದು ಇಲ್ಲಿ ಗಮನಿಸಬೇಕಾದ ವಿಚಾರ.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 8123260454)

ಇದನ್ನೂ ಓದಿ : Journalist : ಶೆಲ್ಫಿಗೇರುವ ಮುನ್ನ; ‘ಪತ್ರಿಕೋದ್ಯಮ ಪ್ರವೇಶ’ ಸಿಬಂತಿ ಪದ್ಮನಾಭರ ಕೃತಿ ನಾಳೆಯಿಂದ ಓದಿಗೆ

Published On - 12:29 pm, Sun, 27 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ