Sign In

By signing in or creating an account, you agree with Associated Broadcasting Company's Terms & Conditions and Privacy Policy.

Women‘s Day 2022: ಶೆಲ್ಫಿಗೇರುವ ಮುನ್ನ: ‘ಧೃತಿಗೆಡದ ಹೆಜ್ಜೆಗಳು’ ಧೃತಿ ಮಹಿಳಾ ಮಾರುಕಟ್ಟೆಯ ಯಶೋಗಾಥೆ

Women's empowerment : ‘ನನ್ನ ತಂಗಿಗೆ ಶ್ರವಣದೋಷವಿದೆ. ಆದರೆ ಆಕೆಯನ್ನು ಸ್ವಾವಲಂಬಿಯನ್ನಾಗಿಸುವುದು ನಮ್ಮ ಗುರಿಯಾಗಿತ್ತು. ಯೂಟ್ಯೂಬ್ ನೋಡಿಕೊಂಡು ಕೃತಕ ಮೊಗ್ಗಿನ ಜಡೆ ಮಾಡುವುದನ್ನು ಕಲಿತಳು. ಮೊದಲು ಪುಕ್ಕಟೆಯಾಗಿ ಹಂಚಿದೆವು. ನಂತರ ಆನ್​ಲೈನ್​ ಮೂಲಕ ದೊಡ್ಡ ತಿರುವೇ ಸಿಕ್ಕಿತು.’

Women‘s Day 2022: ಶೆಲ್ಫಿಗೇರುವ ಮುನ್ನ: ‘ಧೃತಿಗೆಡದ ಹೆಜ್ಜೆಗಳು’ ಧೃತಿ ಮಹಿಳಾ ಮಾರುಕಟ್ಟೆಯ ಯಶೋಗಾಥೆ
ರಾಯಚೂರಿನ ಶ್ರೀದೇವಿ ಕೃತಕ ಮೊಗ್ಗಿನಜಡೆ ಹೆಣೆಯುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Mar 08, 2022 | 3:47 PM

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

ಕೃತಿ: ಧೃತಿಗೆಡದ ಹೆಜ್ಜೆಗಳು (ಸಾಧಕಿಯರ ಪರಿಚಯ) ನಿರೂಪಣೆ: ಶೋಭಾ ರಾವ್ ಪುಟ: 178 ಬೆಲೆ: ರೂ. 150 ಪ್ರಕಾಶನ: ಧೃತಿ ಮಹಿಳಾ ಮಾರುಕಟ್ಟೆ, ಬೆಂಗಳೂರು

ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ಕೃತಿ ಬಿಡುಗಡೆಯಾಗಲಿದೆ.  

ಉತ್ತರ ಕನ್ನಡ ಜಿಲ್ಲೆಯ ನನ್ನ ಸಂಪರ್ಕ ದಶಕಗಳದ್ದು. ನಿಧಾನಪ್ರಿಯ, ಮುಜುಗರವೇ ಮೈವೆತ್ತ, ಚಿಪ್ಪಿನೊಳಗೆ ಅವಿತುಕೊಳ್ಳುವ ಮಂದಿ ಅಲ್ಲಿನವರು. ಅಂಥವರೆಡೆಯ ಗೃಹಿಣಿಯರನ್ನೂ ‘ಧೃತಿ’ ಆನ್​ಲೈನ್​ ಮಾರ್ಕೆಟಿಂಗ್ ಕ್ಷೇತ್ರ ಅರಳಿಸಿದೆ. ಕೈಹಿಡಿದು, ಹುಮ್ಮಸ್ಸಿನ ಆಮ್ಲಜನಕ ತುಂಬಿ, ಉಪವೃತ್ತಿಯ ಏಣಿಯನ್ನೇರಿಸಿದೆ. ‘‘ಎರಡು ವರ್ಷ ಹಿಂದೆ ಏನೂ ಗೊತ್ತಿಲ್ಲದ, ಮಹಾನ್ ಕನಸೂ ಇಲ್ಲದ ನಾನು ಉದ್ಯಮಿಯಾಗಿ ಬೆಳೆಯುತ್ತಿರುವ ಪರಿ ಅಚ್ಚರಿದಾಯಕ” ಶಿರಸಿಯ ವಸುಂಧರಾ ಹೆಗಡೆಯವರ ಈ ಮಾತು ಅವರದು ಮಾತ್ರವಲ್ಲ. ಅವರಂಥ ಎಲ್ಲರದೂ. ಕೊರೊನಾ ಸಂಕಟದ ಮೂಸೆಯ ಕೂಸಿದು. ಬದುಕಿನ ಕೈಮರ. ಕಂಗಳಿಗೆ ಕಾಣಿಸದ ನವಮಾಧ್ಯಮ ಮಾರುಕಟ್ಟೆ ವೇದಿಕೆ. ಈಗ ಅದರ ಸಾಧನೆ ಎಲ್ಲರಿಗೂ ಕಾಣಿಸುವಂಥದ್ದು. ಈ ವಿಶಾಲ ಹೃದಯಿಗಳ ಸಂಪರ್ಕವಾಗದಿದ್ದರೆ, ಇಂಥ ಫಲಾನುಭವಿಗಳೆಲ್ಲಾ ಕತ್ತಲಲ್ಲೇ ಇರುತ್ತಿದ್ದರು. ಶ್ರೀ ಪಡ್ರೆ, ಜಲತಜ್ಞ, ಲೇಖಕ

*

(ಆಯ್ದ ಭಾಗ)

ಕೃತಕ ಮೊಗ್ಗಿನ ಜಡೆ ಕುಶಲಿ ಶ್ರೀದೇವಿಯ ಬಗ್ಗೆ ಅವರ ಅಕ್ಕ ವಿದ್ಯಾ ಬಳಿಗಾರ;

“ನನ್ನ ತಂಗಿ ಹುಟ್ಟುತ್ತಲೇ ನ್ಯೂನ್ಯತೆ ಹೊತ್ತು ಬಂದಿದ್ದಳು. ಅವಳಿಗೆ ಕಿವಿ ಕೇಳಿಸುತ್ತಿರಲಿಲ್ಲ, ಹಾಗಾಗಿ ಮಾತು ಬರಲಿಲ್ಲ. ಒಂದು ಹಂತದವರೆಗೆ ವಿದ್ಯಾಭ್ಯಾಸ ಸಾಗಿದರೂ ಅವಳಿಗೆ ನಮ್ಮ ಹಾಗೆ ಮುಂದಕ್ಕೆ ಓದುವ ಮನಸ್ಸು ಇತ್ತು. ಅದು ಸಾಧ್ಯವಾಗದೆ ಹೋಗಿದ್ದಕ್ಕೆ ತೀರದ ವಿಷಾದವಿತ್ತು. ಆ ಬೇಸರ ಸಂಕಟ ಒಳಗೆ ಇಟ್ಟುಕೊಳ್ಳಲು ಆಗದೆ ಹೊರಗೆ ಹಾಕುತ್ತಿದ್ದಳು, ಅಳುತ್ತಿದ್ದಳು. ಅದನ್ನು ನೋಡಿ ನಮಗೆ ಸಹಿಸಲು ಆಗುತ್ತಿರಲಿಲ್ಲ, ಪರಿಹಾರವೂ ಸಿಕ್ಕಿರಲಿಲ್ಲ. ಇವಳು ಹೀಗೆ ಉಳಿದರೆ ಮುಂದೆ ಕಷ್ಟವಾಗಬಹುದು, ಈ ಮನಸ್ಥಿತಿಯಿಂದ ಅವಳನ್ನು ಹೊರಗೆ ತರಲು ಏನಾದರೂ ಮಾಡಬೇಕು ಎಂದು ನಾವೆಲ್ಲರೂ ನಿರ್ಧರಿಸಿದೆವು. ಅವಳಲ್ಲಿ ಕ್ರಿಯೇಟಿವಿಟಿ ಇದ್ದುದ್ದರಿಂದ ಮೊಗ್ಗಿನ ಜಡೆ ಮಾಡುವುದು ಹೇಗೆ ಎಂದು ಕಲಿಸಲು ನಿರ್ಧರಿಸಿದೆವು.

ಕಿವಿ ಕೇಳದೆ ಇರುವುದು ಬಹಳಷ್ಟು ತೊಂದರೆ ಕೊಟ್ಟರೂ ಅವಳು ಛಲ ಬಿಡದೆ ಅದನ್ನು ಕಲಿತಳು. ಯೂ ಟ್ಯೂಬ್ ನೋಡಿಕೊಂಡು ಹೊಸ ಹೊಸ ರೀತಿ ವಿನ್ಯಾಸಗಳನ್ನು ಮಾಡುವುದು ಕಲಿಯಲು ಆರಂಭಿಸಿದಳು. ಮೊದಲಿಗೆ ಅವಳು ಮಾಡುತ್ತಿದ್ದ ಜಡೆಗಳನ್ನು ಜನರಿಗೆ ಪರಿಚಯವಾಗಲಿ ಎನ್ನುವ ಕಾರಣದಿಂದ ಫ್ರೀ ಆಗಿಯೇ ಕೊಡುತ್ತಿದ್ದೆವು. ಆಮೇಲೆ ನಿಧಾನವಾಗಿ ಆರ್ಡರ್ ಬರಲು ಶುರುವಾಗುವ ಹೊತ್ತಿಗೆ ಕರೋನಾ ಬಂದು ಎಲ್ಲವೂ ಸ್ತಬ್ಧವಾಗುವ ಹಾಗಾಯಿತು. ನಮಗೆ ತಂಗಿಯ ಬಗ್ಗೆ ಆತಂಕ ಶುರುವಾಯಿತು. ಮುಂದೇನು ದಾರಿ ಎಂದು ಯೋಚಿಸುವಾಗ ಧೃತಿ ಮಹಿಳಾ ಮಾರುಕಟ್ಟೆಯ ಪರಿಚಯವಾಯಿತು. ಬದುಕಿಗೆ ಒಂದು ಮಹತ್ತರ ತಿರುವು ಸಿಕ್ಕಿತು.”

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ

ಧೃತಿಗೆಡುವ ಸಂದರ್ಭ ಪ್ರತಿಯೊಬ್ಬರ ಬದುಕಿನಲ್ಲೂ ಒಂದಲ್ಲಾ ಒಂದು ಸಲ ಬರಬಹುದು. ಆದರೆ ಇಡೀ ಜಗತ್ತಿಗೆ ಅಂತಹ ಸಂದರ್ಭ ಬಂದಿದ್ದು ಮಾತ್ರ ಕರೋನಾದ ಮೂಲಕ. ರೋಗದ ಬಗ್ಗೆ ಕಿಂಚಿತ್ತೂ ಕಲ್ಪನೆಯಿಲ್ಲದೆ, ಅದಕ್ಕೆ ಯಾವ ಔಷಧಿ ತಿಳಿಯದೆ ಕಕ್ಕಾಬಿಕ್ಕಿಯಾಗುವ ಸನ್ನಿವೇಶ ಒಂದು ಕಡೆಯಾದರೆ, ಇನ್ನೊಂದು ಕಡೆ ಇಡೀ ಜಗತ್ತೇ ಬೀಗ ಹಾಕಿಕೊಂಡು ತನಗೆ ತಾನೇ ದಿಗ್ಬಂಧನ ವಿಧಿಸಿಕೊಳ್ಳುವ ಶಿಕ್ಷೆ. ಎಲ್ಲಾ ಕಡೆಯಲ್ಲೂ ಕತ್ತಲು. ಹಾಗೆಂದು ಸುಮ್ಮನೆ ಕೂರುವ ಹಾಗಿಲ್ಲ. ಬದುಕಿನ ಬಂಡಿ ನಡೆಯಬೇಕು. ಆ ಕತ್ತಲೆಯಲ್ಲಿ ತಡಕಾಡುತ್ತಲೇ ಬೆಳಕಿನ ಕಿಂಡಿ ಹುಡುಕಿಕೊಳ್ಳಬೇಕು. ಅಂತಹ ಹೊತ್ತಿನಲ್ಲಿ ಹುಟ್ಟಿದ್ದು ‘ಧೃತಿ ಮಹಿಳಾ ಮಾರುಕಟ್ಟ’.

ಯಾವುದೇ ಸನ್ನಿವೇಶವಾದರೂ ಬಹು ಬೇಗ ಅರ್ಥಮಾಡಿಕೊಂಡು ವಾಸ್ತವಕ್ಕೆ ಮನಸ್ಸು ಸಿದ್ಧ ಮಾಡಿಕೊಂಡು ಹೋರಾಟಕ್ಕೆ ಹೊರಡುವ ಅಂತಃಶಕ್ತಿ ಹೆಣ್ಣಿಗೆ ಜಾಸ್ತಿ ಅನ್ನಬಹುದು. ಭಾವುಕತೆಯ ನಡುವೆಯೂ ವಾಸ್ತವಿಕ ಪ್ರಜ್ಞೆ ಕಾಪಾಡಿಕೊಂಡು ಮುನ್ನುಗ್ಗುವ ಛಲ ಮೈಗೂಡಿಸಿಕೊಳ್ಳಬಲ್ಲಳು, ಕಷ್ಟದಲ್ಲೂ ಕಾಲೂರಿ ನಿಲ್ಲುವ ಪ್ರಯತ್ನ ಮಾಡಬಲ್ಲಳು.

ತಮಗೆ ತಿಳಿದ ವಿದ್ಯೆ, ಕಲೆ ಉಪಯೋಗಿಸಿಕೊಂಡು, ಕತ್ತಲಿನಲ್ಲಿ ಬೆಳಕಿನ ಗೆರೆ ಹುಡುಕಿಕೊಂಡು ಹೊರಟವರು ತಾವೇ ಬೆಳಕಾಗಿ ಬದಲಾಗುತ್ತಿರುವ ಕತೆಗಳು ಇಲ್ಲಿವೆ. ಇದು ಅನುಭವ, ಕನಸು ನನಸಾಗಿಸಿಕೊಂಡ ಛಲ, ಗುರಿಯ ಬೆಂಬತ್ತಿ ಹೋದ ಪಯಣದ ವಿವರ. ಎಲ್ಲದಕ್ಕಿಂತ ಮುಖ್ಯವಾಗಿ ಧೃತಿಗೆಡದೆ ಮುಂದೆ ಹೆಜ್ಜೆಯಿಟ್ಟ ಫಲ. ಏನೋ ಮಹತ್ತರವಾದುದು ಘಟಿಸುವುದು ಮಾತ್ರ ಸಾಧನೆಯಲ್ಲ. ಇದ್ದ ಜಾಗದಿಂದ ಒಂದು ಹೆಜ್ಜೆ ಮುಂದಿಟ್ಟರೂ, ನೆಲೆ ಕೊಂಚ ವಿಸ್ತರಿಸಿಕೊಂಡರೂ, ಕನಸು ನನಸಾಗಿಸಿಕೊಂಡರೂ ಅದು ಸಾಧನೆಯೇ. ಇದು ಅಂತ ಯಶೋಗಾಥೆಗಳ ಗುಚ್ಛ.

ಖರೀದಿಗೆ ಸಂಪರ್ಕಿಸಿ: 8197759806

ಇದನ್ನೂ ಓದಿ : ಕೊರೊನಾ ಕಾಲದಲ್ಲಿ ಕಂಡ ದುಡಿಮೆಯ ಅನಂತ ಸಾಧ್ಯತೆಗಳು; ‘ಧೃತಿಗೆಡದ ಹೆಜ್ಜೆಗಳು’ ಪುಸ್ತಕ ಮಂಗಳವಾರ ಬಿಡುಗಡೆ

Published On - 3:40 pm, Tue, 8 March 22

ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ