ಕೊರೊನಾ ಕಾಲದಲ್ಲಿ ಕಂಡ ದುಡಿಮೆಯ ಅನಂತ ಸಾಧ್ಯತೆಗಳು; ‘ಧೃತಿಗೆಡೆದ ಹೆಜ್ಜೆಗಳು’ ಪುಸ್ತಕ ಮಂಗಳವಾರ ಬಿಡುಗಡೆ

33 ಮಹಿಳೆಯರ ಯಶಸ್ಸಿನ ಕಥೆಗಳನ್ನು ಒಳಗೊಂಡ ಪುಸ್ತಕ ‘ಧೃತಿಗೆಡದ ಹೆಜ್ಜೆಗಳು’ ಧೃತಿ ಮಹಿಳಾ ಮಾರುಕಟ್ಟೆಯಿಂದ ಪ್ರಕಟವಾಗುತ್ತಿದೆ. ಮಹಿಳಾ ದಿನಾಚರಣೆಯಂದು, ಮಾರ್ಚ್ 8, 2022, ಮಂಗಳವಾರ, ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳಲಿದೆ.

ಕೊರೊನಾ ಕಾಲದಲ್ಲಿ ಕಂಡ ದುಡಿಮೆಯ ಅನಂತ ಸಾಧ್ಯತೆಗಳು; ‘ಧೃತಿಗೆಡೆದ ಹೆಜ್ಜೆಗಳು’ ಪುಸ್ತಕ ಮಂಗಳವಾರ ಬಿಡುಗಡೆ
ಧೃತಿಗೆಡೆದ ಹೆಜ್ಜೆಗಳು
Follow us
TV9 Web
| Updated By: ganapathi bhat

Updated on:Mar 07, 2022 | 12:57 PM

ಬೆಂಗಳೂರು: ಮಹಿಳಾ ದಿನಾಚರಣೆಯಂದು ಧೃತಿ ಮಹಿಳಾ ಮಾರುಕಟ್ಟೆಯಿಂದ ‘ಧೃತಿಗೆಡೆದ ಹೆಜ್ಜೆಗಳು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕೊರೊನಾ ಕಾಲದಲ್ಲಿ ಬಹಳಷ್ಟು ಜನರ ಬದುಕು ಅತಂತ್ರವಾಗಿತ್ತು. ಸಾಕಷ್ಟು ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡರು. ಹಿಂದೆ ಮುಂದಿಲ್ಲದ ರೋಗವೊಂದು ಇದ್ದಕ್ಕಿದ್ದಂತೆ ಇಡೀ ಪ್ರಪಂಚವನ್ನೇ ತನ್ನ ಭಯದ ತೆಕ್ಕೆಗೆ ಬೀಳಿಸಿತ್ತು. ಆ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳ ಹೆಂಗಳೆಯರೂ ಬಲ ಒಗ್ಗೂಡಿಸಿ ಎದ್ದು ನಿಂತು, ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಲಿ, ದುಡಿಮೆಯ ಅನಂತ ಸಾಧ್ಯತೆಗಳನ್ನು ಗುರುತಿಸುವಂತಾಗಲಿ ಎನ್ನುವ ಧ್ಯೇಯದೊಂದಿದೆ ಮೇ 2020 ರಂದು ಹುಟ್ಟಿದ ಫೇಸ್ ಬುಕ್ ಗುಂಪು ‘ಧೃತಿ ಮಹಿಳಾ ಮಾರುಕಟ್ಟೆ’. ಇಂದು ಈ ಗ್ರೂಪಿನಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ.

ಈ ಆನ್ ಲೈನ್ ಮಹಿಳಾ ಮಾರುಕಟ್ಟೆಯ ಮೂಲಕ, ಎರಡು ವರ್ಷಗಳ ಅವಧಿಯಲ್ಲೇ ನೂರಾರು ಮಹಿಳೆಯರು ತಮ್ಮನ್ನು ಗುರುತಿಸಿಕೊಂಡು ,ತಮ್ಮ ಕೌಶಲ್ಯಗಳನ್ನು ಪರೀಕ್ಷೆಗೊಡ್ಡಿ ತಮ್ಮ ಮತ್ತು ತಮ್ಮವರ ಬದುಕನ್ನು ಇನ್ನಷ್ಟು ಹಸನಾಗಿಸಲು ಸಮರ್ಥರಾದರು. ಮನೆಯಲ್ಲೇ ಕೂತು ತಯಾರಿಸಿದ ವಸ್ತುಗಳನ್ನು, ಆಹಾರ ಪದಾರ್ಥಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡಿ ಯಶಸ್ಸು ಗಳಿಸಿದರು. ಬದುಕಲ್ಲೇ ಒಂದು ಬಾರಿಯೂ ಇಂಟರ್ ನೆಟ್ ಮುಖ ನೋಡದವರೂ ಈ ಮಾರುಕಟ್ಟೆಯ ಸಹಾಯದಿಂದ ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ಮಾಡಿದರು.

33 ಮಹಿಳೆಯರ ಯಶಸ್ಸಿನ ಕಥೆಗಳನ್ನು ಒಳಗೊಂಡ ಪುಸ್ತಕ

ಈಗ, ಇವರಲ್ಲಿ ಆಯ್ದ 33 ಮಹಿಳೆಯರ ಯಶಸ್ಸಿನ ಕಥೆಗಳನ್ನು ಒಳಗೊಂಡ ಪುಸ್ತಕ ‘ಧೃತಿಗೆಡದ ಹೆಜ್ಜೆಗಳು’ ಧೃತಿ ಮಹಿಳಾ ಮಾರುಕಟ್ಟೆಯಿಂದ ಪ್ರಕಟವಾಗುತ್ತಿದೆ. ಮಹಿಳಾ ದಿನಾಚರಣೆಯಂದು, ಮಾರ್ಚ್ 8, 2022, ಮಂಗಳವಾರ, ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳಲಿದೆ.

ಪ್ರಸಿದ್ಧ ಅಂಕಣಕಾರ, ವಾಗ್ಮಿಯಾದ ರಮಣಶ್ರೀ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಶ್ರೀ ಎಸ್. ಷಡಕ್ಷರಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕ್ವಿಇನ್ ಫ್ರಾ ಸೊಲ್ಯೂಶನ್ಸ್ ನ ಡೈರೆಕ್ಟರ್ ಆಗಿರುವ ಕಿರಣ್ ಪ್ರಸಾದ್ ರಾಜನಹಳ್ಳಿ, ಸುಕೋ ಬ್ಯಾಂಕ್ ನಿರ್ದೇಶಕರು, ಮಲೆನಾಡು ನಟ್ಸ್ ಅಂಡ್ ಸ್ಪೈಸ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರೂ ಆಗಿರುವ ಮನೋಹರ ಮಸ್ಕಿ, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರೂಪಕರಾದ ಆರತಿ ಹೆಚ್.ಎನ್, ಎಂಡಿಪಿ ಕಾಫೀ ಹೌಸ್ ನ ಮುಖ್ಯಸ್ಥರಾದ ಮಹದೇವ ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರೂಪಾ ಗುರುರಾಜ್, ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಕೃತಿ: ಧೃತಿಗೆಡದ ಹೆಜ್ಜೆಗಳು ಬಿಡುಗಡೆ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ ದಿನಾಂಕ: 08.03.2022, ಮಂಗಳವಾರ ಸಮಯ: 4.30 PM ಪ್ರಕಾಶನ: ಧೃತಿ ಮಹಿಳಾ ಮಾರುಕಟ್ಟೆ,ಬೆಂಗಳೂರು ಪುಟಗಳು: 172 ಬೆಲೆ: ರೂ. 150 ಮುಂಗಡ ಖರೀದಿಗೆ ಸಂಪರ್ಕಿಸಿ: 8197759806

ಇದನ್ನೂ ಓದಿ: Book Reading Practice: ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಕೆಲ ಸರಳ ವಿಧಾನಗಳು ಇಲ್ಲಿವೆ

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

Published On - 12:01 pm, Mon, 7 March 22

Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?