World Milk Day 2022: ನಮ್ಮ ಅವ್ವನಂತೂ ಆಕಳ ಮೊಲೆಯಿಂದ ನೇರವಾಗೇ ಹಾಲು ಕುಡಿದವಳು!

Cow : ಮೊದಲು ಕರುವನ್ನು ಕೆಚ್ಚಲಿಗೆ ಬಿಟ್ಟು ಅವು ಕೆಲ ಗುಟುಕು ಕುಡಿದ ನಂತರವೇ ಹಾಲು ಕರೆಯುವ ಪ್ರಕ್ರಿಯೆ. ಗುಂಡಿ ತುಂಬುತ್ತ ಬಂದಂತೆ ತಾಯಿ ಹೃದಯದ ತುಡಿತದ ಅರಿವಾಗಿ ಮತ್ತೆ ತಾಯಮೊಲೆಗೆ ಕರುವನ್ನು ತಂದು ಬಿಟ್ಟನಂತರ ಧಗಧಗ ಉರಿಯುವ ಒಲೆಯಲ್ಲಿ ಹಾಲು ಕಾಯಿಸಿ, ಮಕ್ಕಳಿಗೆಲ್ಲ ಹಾಲು ಹಂಚುವ ಸಂಭ್ರಮ.

World Milk Day 2022: ನಮ್ಮ ಅವ್ವನಂತೂ ಆಕಳ ಮೊಲೆಯಿಂದ ನೇರವಾಗೇ ಹಾಲು ಕುಡಿದವಳು!
ಲೇಖಕಿ ಮಾಲತಿ ಮುದಕವಿ ಮೊಮ್ಮಗಳೊಂದಿಗೆ
Follow us
ಶ್ರೀದೇವಿ ಕಳಸದ
|

Updated on:Jun 01, 2022 | 11:01 AM

World Milk Day 2022 : ‘‘ಅಜ್ಜೀ, ನಮ್ಮ ಶಾಲೆಯಲ್ಲಿ ಇವೊತ್ತು ಒಂದು ಕೌ ಬಂದಿತ್ತು… ನಮಗೆ ಮಿಲ್ಕ್ ಬಗ್ಗೆ ಲೆಸನ್ ಇದೆಯಲ್ಲ… ಅದಕ್ಕೇ ತಂದಿದ್ರು. ಅದನ್ನ ನಾ ಟಚ್ ಮಾಡ್ದೆ. ಹೌ ನೈಸ್! ನಮ್ಮ ಟೀಚರ್ ಹೇಳಿದ್ರು, ಇದು ನಮಗೆ ಹಾಲು ಕೊಡ್ತದಂತೆ! ಹೌದಾ? ನಾ ಇಷ್ಟು ದಿನ ಕಾಸ್ಕೋದಲ್ಲಿ ಸಿಗ್ತದೇಂತ ತಿಳ್ಕೊಂಡಿದ್ದೆ!’’ ಆರ್ಕೇಡಿಯಾದ ಶಾಲೆಯಲ್ಲಿ ಮೊದಲನೆ ಕ್ಲಾಸಿನಲ್ಲಿದ್ದ ನನ್ನ ಪುಟ್ಟ ಮೊಮ್ಮಗಳು ಅರೆಬರೆ ಕನ್ನಡದಲ್ಲಿ ಹೇಳಿದಾಗ ನನಗೆ ನಗೆ ಉಕ್ಕಿಬಂದಿತ್ತು. ಇದೇ ತಿಳಿವಳಿಕೆಯನ್ನೇ ನಮ್ಮ ಮೆಟ್ರೋ ಸಿಟಿಗಳಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲೂ ನಾವು ಕಾಣುತ್ತೇವೆ. ಹಾಲು ಎಲ್ಲಿಂದ ದೊರೆಯುತ್ತದೆ ಎಂದು ಕೇಳಿದರೆ ಮಕ್ಕಳು ನೇರವಾಗಿ ಹಾಲಿನ ಬೂತು ಎಂದೇ ಉತ್ತರಿಸುತ್ತಾರೆ! ‘ಇಂದು ವಿಶ್ವ ಹಾಲು ದಿನ. ಅದಕ್ಕೇ ಇವಳ ಶಾಲೆಗೆ ಹಸು ತಂದು ಪ್ರಾಕ್ಟಿಕಲ್ ಪಾಠ ಮಾಡಿದ್ದಾರೆ!’ ಎಂದು ಮಗಳು ಹೇಳಿದಾಗ ನನಗೆ ಬಾಲ್ಯದ ಆ ದಿನಗಳು ನೆನಪಾಗಿದ್ದವು. ಮಾಲತಿ ಮುದಕವಿ (Malati Mudakavi)

“ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು..”

ಹಾಲು ಎಂದಾಗಲೊಮ್ಮೆ ನಮಗೆ ನೆನಪಾಗುವುದು ಈ ಗೀತೆ, ಈ ಗೀತೆಯೊಂದಿಗೆ ಬೆಸೆದ ಆ ಚಿತ್ರ! ನೂರಾರು ಹಸುಗಳು… ಅವು ಮನೆಗೆ ಬರುವಾಗಿನ ಆ ಗಂಟೆಗಳ ಕೋರಸ್ ನಿನಾದ.. ಅವುಗಳ ಗೊರಸಿನಿಂದ ಮುಗಿಲು ಮುಟ್ಟುವ ಧೂಳು. ಅಂಬಾ… ಎಂಬ ಆ ಕರೆ. ತಮ್ಮ ತಮ್ಮ ಮನೆಗಳು ಬಂದುದನ್ನು ಗುರುತಿಸಿ ಅಲ್ಲಿಗೇ ನೇರವಾಗಿ ಹೋಗುವ ದೃಶ್ಶವು ಎಂಥ ಸುಂದರ! ಥೇಟು ಶಾಲೆ ಮುಗಿದ ನಂತರದ ಮಗು ಮನೆಗೆ ಬರುವ ಸಂಭ್ರಮದಂತೆಯೇ. ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಗೋಶಾಲೆಗೆ ಹೋಗಿ ಹಸುಗಳನ್ನು ಹೆಸರುಗೊಂಡು ಕರೆಯುತ್ತ ಅವುಗಳ ಗಂಗೆದೊಗಲನ್ನು ನೀವುತ್ತ ಅಚ್ಛೆ ಮಾಡಿ, ನಂತರ ಸಗಣಿ ಕಸ ಬಳೆದು, ಅವುಗಳಿಗೆ ಮೇವು ಹಾಕಿ, ನೀರು ಇಟ್ಟು, ನಂತರ ಅವುಗಳ ಕೆಚ್ಚಲು ತೊಳೆದು ಸ್ವಚ್ಛವಾಗಿ ತೊಳೆದ ಮಿರಿ ಮಿರಿ ಮಿಂಚುವ ದೊಡ್ಡ ಹಿತ್ತಾಳೆಯ ಗುಂಡಿಯಲ್ಲಿ ಹಾಲು ಹಿಂಡುವ ಸಂಭ್ರಮಕ್ಕೆ ಅಣಿಯಾಗುವ ಹೆಣ್ಣುಮಕ್ಕಳು…

ಇದನ್ನೂ ಓದಿ
Image
National Paper Airplane Day: ಚೆಕ್ಇನ್ ಸೆಕ್ಯೂರಿಟಿ ವೀಸಾ ಹಂಗಿಲ್ಲದ ಈ ಮಧುರವಿಮಾನಕ್ಕಾಗಿ ಕಾಯುತ್ತಾ
Image
National Paper Airplane Day 2022: ಆಟಿಕೆ ಕೊಡಿಸದ ನನ್ನಮ್ಮನೆಂಬ ‘ಮುದ್ದುರಾಕ್ಷಸಿ’ಯೇ
Image
National Wine Day: ಮೈಲ್ಸ್‌ ವೈನ್‌ ಮಾಯಾ ವೈನ್‌ ಮತ್ತು ಕಾರೇಹಣ್ಣಿನ ಮಧು ವೈಎನ್
Image
Literature: ಅನುಸಂಧಾನ; ಸಂಪಾದಕರು ಕೊಟ್ಟ ಒಂದು ಶಬ್ದ, ಪ್ರಶ್ನೆಯಿಂದ ಎಲೆನಾ ಅಂಕಣ ಸಿದ್ಧವಾಗುತ್ತಿತ್ತು

ಮಾಲತಿ ಮುದಕವಿ ಬರೆದ ಇದನ್ನೂ ಓದಿ : Love : ಏಸೊಂದು ಮುದವಿತ್ತು ; ಮಾಮಾ ಮಾಮಿ ಸಕ್ಕಾಸರಿಗೀ ಹಗ್ಗಾಮುರಿಗೀ

ಮೊದಲು ಕರುವನ್ನು ಕೆಚ್ಚಲಿಗೆ ಬಿಟ್ಟು ಅವು ಕೆಲ ಗುಟುಕು ಕುಡಿದ ನಂತರವೇ ಹಾಲು ಕರೆಯುವ ಪ್ರಕ್ರಿಯೆ. ಗುಂಡಿ ತುಂಬುತ್ತ ಬಂದಂತೆ ತಾಯಿ ಹೃದಯದ ತುಡಿತದ ಅರಿವಾಗಿ ಮತ್ತೆ ತಾಯ ಮೊಲೆಗೆ ಕರುವನ್ನು ತಂದು ಬಿಟ್ಟನಂತರ ದಗದಗ ಉರಿಯುವ ಒಲೆಯಲ್ಲಿ ಹಾಲು ಕಾಯಿಸಿ, ಮನೆಯ ಮಕ್ಕಳಿಗೆಲ್ಲ ಹಾಲು ಹಂಚುವ ಸಂಭ್ರಮ. ಹಿರಿಯರೆಲ್ಲ ದೊಡ್ಡ ದೊಡ್ಡ ಹಿತ್ತಾಳೆಯ ಲೋಟದ ತುಂಬಾ ಬೆಲ್ಲದ ಚಹಾ ಕುಡಿಯುತ್ತ ಸುಪ್ರಭಾತವನ್ನು ಆಹ್ವಾನಿಸುತ್ತ ಮುಂದಿನ ಕಾಯಕಗಳಿಗೆ ಅಣಿಯಾಗುತ್ತಿದ್ದರು. ಅಂಥ ಕೂಡು ಕುಟುಂಬಗಳು ಈಗೆಲ್ಲಿ? ನಮ್ಮ ಅವ್ವನಂತೂ ಆಕಳ ಮೊಲೆಯಿಂದ ನೇರವಾಗೇ ಹಾಲು ಕುಡಿದವಳು! ನಾವು ತಂಬಿಗೆಯಿಂದ, ನಮ್ಮ ಮಕ್ಕಳು ಲೋಟದಿಂದ, ಮೊಮ್ಮಕ್ಕಳು? ಮತ್ತೆ ಹೇಳಬೇಕಿಲ್ಲ.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 10:32 am, Wed, 1 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ