National Wine Day: ಮೈಲ್ಸ್‌ ವೈನ್‌ ಮಾಯಾ ವೈನ್‌ ಮತ್ತು ಕಾರೇಹಣ್ಣಿನ ಮಧು ವೈಎನ್

Miles Wine : ಅದೇನೊ ಗೊತ್ತಿಲ್ಲ. ಅದೊಂಥರ ತೆಳು ಸಿಪ್ಪೆಯ, ಭಾವಾತಿರೇಕದ, ಬೇಗ ಹಣ್ಣಾಗುವ ಆದಾಗ್ಯೂ ಗಟ್ಟಿಯಾಗಿರುವ ದ್ರಾಕ್ಷಿ. ಅದು ಕೆಬರ್​ನೆಟ್ ದ್ರಾಕ್ಷಿ ತರಹ ಎಲ್ಲಂದರಲ್ಲೆ ಬೆಳೆಯುವ ನಿರ್ಲಕ್ಷ್ಯ ಮಾಡಿದರೂ ಉಳಿಯುವ ಹಣ್ಣಲ್ಲ. ಅದು ನಿರಂತರ ಕಾಳಜಿ ಮತ್ತು ಗಮನ ಬಯಸುತ್ತದೆ.

National Wine Day: ಮೈಲ್ಸ್‌ ವೈನ್‌ ಮಾಯಾ ವೈನ್‌ ಮತ್ತು ಕಾರೇಹಣ್ಣಿನ ಮಧು ವೈಎನ್
ಲೇಖಕ ಮಧು ವೈ. ಎನ್.
Follow us
ಶ್ರೀದೇವಿ ಕಳಸದ
|

Updated on:May 25, 2022 | 3:51 PM

National Wine Day : ವೈನ್‌ ಎಂದರೆ ನನಗೆ ಎರಡು ನೆನಪುಗಳು ತಕ್ಷಣಕ್ಕೆ ಹೊಳೆಯುತ್ತವೆ. ಒಂದು Sideways ಸಿನೆಮಾ. ಇನ್ನೊಂದು ಅಮೆರಿಕಾದಲ್ಲಿ ನಾ ಕೈಗೊಂಡ ಸೋಲೋ ಪ್ರಯಾಣ. ಸೈಡ್‌ ವೇಸ್‌ ಸಿನಿಮಾದಲ್ಲಿ ನಾಯಕ ನಟ ಒಬ್ಬ ಖಿನ್ನ ಅಪ್ರಕಟಿತ ನಡು ವಯಸ್ಕ ಲೇಖಕ. ಅನ್‌ ಸಕ್ಸೆಸ್​ಫುಲ್ ವ್ಯಕ್ತಿ. ಒಂಥರಾ ಕುಡುಕ. ಹೊಟ್ಟೆ ಮುಂದೆ ಬಂದಿರುತ್ತದೆ, ತಲೆ ಕೂದಲು ಉದುರಿರುತ್ತದೆ. ಅವನ ಹೆಸರು ಮೈಲ್ಸ್‌ ಎಂದು. ಆತನಿಗೆ ಒಬ್ಬ ಸ್ನೇಹಿತ ಜ್ಯಾಕ್‌ ಎಂದು. ಅವರು ಒಂದು ವಾರದ ಮಟ್ಟಿಗೆ ರೋಡ್‌ ಟ್ರಿಪ್‌ ಹೊರಡುತ್ತಾರೆ. ಜ್ಯಾಕ್‌ ಗೆ ಮದುವೆ ಸೆಟ್‌ ಆಗಿದೆ. ಆ ಟ್ರಿಪ್‌ ಅವನಿಗೆ ಕಟ್ಟ ಕಡೆಯ ಬ್ಯಾಚಲರ್‌ ಪಾರ್ಟಿ. ಯಾರ ಜೊತೆನಾದರೂ ಮಲಗಬೇಕು ಅನ್ನುವ ಅದಮ್ಯ ಆಸೆ. ಮೈಲ್ಸ್‌ ಹಾಗಲ್ಲ, ಅವನಿಗೆ ಸುಮ್ನೆ ಒಂದು ವಾರ ರಿಲ್ಯಾಕ್ಸ್‌ ಆಗಿ ತಿನ್ಕೊಂಡು ಕುಡ್ಕೊಂಡು ಸೋಂಬೇರಿಯಾಗಿ ಟೈಂ ಪಾಸ್‌ ಮಾಡಿಕೊಂಡು ಇದ್ದು ಬರುವ ಉದ್ದೇಶ. ಹ್ಞಾ- ಅವನ ಕುಡಿತ ಎಂದರೆ ವೈನ್. ವೈನ್‌ ವಿಷಯದಲ್ಲಿ ಅವನು ಪಂಟ. ಗ್ಲಾಸಿನಲ್ಲಿ ಎರಡು ತೊಟ್ಟು ವೈನ್‌ ಹಾಕಿಕೊಟ್ಟರೆ ಅದರ ಜನ್ಮಕುಂಡಲಿಯನ್ನು ಜಾಲಾಡಿಬಿಡಬಲ್ಲ ಅಪ್ರತಿಭ. ಎಷ್ಟು ಮಂದ ಇದೆ, ಯಾವ ಬಣ್ಣ ಇದೆ, ಏನ್‌ ಸ್ಮೆಲ್‌ ಇದೆ, ಗ್ಲಾಸು ಬಗ್ಗಿಸಿದಾಗ ಕಂದು ಬಣ್ಣದ ವೈನು ತೆಳುಗಂದಾದರೆ ಏನರ್ಥ? – ಇತ್ಯಾದಿಗಳ ಮೂಲಕ ಅದು ಯಾವ ಬಗೆಯ ದ್ರಾಕ್ಷಿಯದು, ಯಾವ ಊರಿನದು, ಎಷ್ಟು ಹಳೆಯದು ಎಂದೆಲ್ಲ ಹೇಳಿಬಿಡುವನು. ಮಧು ವೈ. ಎನ್. ಲೇಖಕ (Madhu Y.N.)

ಅವರು ಟ್ರಿಪ್‌ ನಡುವೆ ಒಂದು ಹೊಟೆಲಿನಲ್ಲಿ ಅಕಸ್ಮಾತ್ತಾಗಿ ಒಬ್ಬ ವೈಟ್ರೆಸ್ ( ಊಟ ವೈನ್ ಬಡಿಸುವ ಪರಿಚಾರಕಿ) ಎದುರಾಗುತ್ತಾಳೆ. ಅವಳ ಹೆಸರು ಮಾಯಾ. (ನನಗೆ ಈಕೆಯಂದರೆ ಪ್ರಾಣ, my eternal quest. ಇನ್​ಫ್ಯಾಕ್ಟ್ ನನ್ನ ಮೊದಲ ಪುಸ್ತಕ ‘ಕಾರೇಹಣ್ಣುʼವಿನ ಮೊದಲ ಕತೆಯಾದ ‘ನನ್ನ ಪ್ರೀತಿಯʼದಲ್ಲಿ ಬರುವ ಪಾತ್ರಕ್ಕೆ ಇವಳದೇ ಹೆಸರು). ಅವಳು ಅವರನ್ನು ಎಲ್ಲಿ ಉಳಕೊಂಡಿದೀರಿ ಎಂದು ಕೇಳುತ್ತಾಳೆ. ಇಲ್ಲೇ ವಿಂಡ್‌ ಮಿಲ್‌ ಬಗಲಲ್ಲಿ ಎಂದು ಉತ್ತರಿಸುತ್ತಾರೆ. ನನ್ನ ಕಂಪ್ಯೂಟರಿನಲ್ಲಿ ಒಂದು ಖಾಸಗಿ ಫೋಲ್ಡರಿನ ಹೆಸರು ವಿಂಡ್‌ ಮಿಲ್ ಎಂದೇ ಇದೆ. ಜ್ಯಾಕ್‌ ಮೈಲ್ಸ್‌ ಗೆ ಮಾಯಾ ನಿನ್ನ ಇಷ್ಟಪಡ್ತಿದಾಳೆ ಎಂದು ಹೇಳುತ್ತಾನೆ. ಮೈಲ್ಸ್‌ ಒಪ್ಪಲ್ಲ. ಏನೊ ತಾನೊಂಚೂರು ಬರೆದಿದ್ದೇನೆ ಎಂದು ಅಭಿಮಾನವಿರುತ್ತೆ ಮಾತ್ರ ಎಂದು ಅವನ ಅನಿಸಿಕೆ. ಜ್ಯಾಕ್‌ ಅವಳತ್ರ ಹೋಗಿ ಮೈಲ್ಸ್‌ ಒಬ್ಬ ಪ್ರಕಟಿತ ಯಶಸ್ವೀ ಲೇಖಕ ಎಂದು ಸುಳ್ಳು ಹೇಳಿ ಎತ್ತಿಕೊಡುತ್ತಾನೆ. ಮಾಯಾಳ ಮತ್ತೊಬ್ಬ ಸ್ನೇಹಿತೆ ಸ್ಟೆಫಾನಿಯ ಜೊತೆಗೂಡಿ ಎರಡು ಜೋಡಿಯಾಗಿ ಸ್ಟೆಫಾನಿಯ ಮನೆಗೆ ಹೋಗುತ್ತಾರೆ. ಜ್ಯಾಕ್-ಸ್ಟೆಫಾನಿಯಾ ತಡಮಾಡದೇ ಬೆಡ್‌ ರೂಂ ಸೇರಿಕೊಂಡರೆ- ಮೈಲ್ಸ್‌ ಮತ್ತು ಮಾಯಾ ವೈನ್‌ ಕುಡಿಯುತ್ತ ಸಂಜೆ ತಳ್ಳುತ್ತಾರೆ. ಆಗ ಅವರಿಬ್ಬರ ನಡುವೆ ಒಂದು ಸಂಭಾಷಣೆ ಜರುಗುತ್ತದೆ. ಅದನ್ನು ಕನ್ನಡದಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ರೂಪಕಮಯವಾಗಿದೆ, ಕಾವ್ಯಮಯವಾಗಿದೆ, ಗಾಢವಾಗಿದೆ… ಮತ್ತು ಬರಿಸುತ್ತದೆ.

ಇದನ್ನೂ ಓದಿ : Poetry : ಅವಿತಕವಿತೆ ; ಪರ್ವತದಿಂದ ಜಾರಿ ಪ್ರಪಾತಕ್ಕೆ ಬೀಳುವಾಗ ಅಚಾನಕ್ಕಾಗಿ ಅಂಗೈಗೆ ಸಿಲುಕಿದ ಹುಲ್ಲುಗರಿಕೆ

ಇದನ್ನೂ ಓದಿ
Image
Literature: ಅನುಸಂಧಾನ; ಬರವಣಿಗೆ ಆತ್ಮಕಥಾನಕವೇ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ
Image
Dr. Veena Shanteshwar: ‘ನಮ್ಮ ಮನೆಗಳಲ್ಲಿ ಅಗಸರ ಕತ್ತೆ ಇಲ್ಲ’ ಎದೆ ಮುಟ್ಟಿಕೊಂಡು ಹೇಳಿಬಿಡಿ ಒಮ್ಮೆ!
Image
Poetry: ಅವಿತಕವಿತೆ; ‘ತೊಂಬತ್ತಾದರೂ ಅಪ್ಪ ಸಾಯುತ್ತಿಲ್ಲ!’ ಆಸ್ತಿಗಾಗಿ ಕೋರ್ಟ್​ ಮೊರೆ ಹೋಗಿದ್ದ ಸೋಫೊಕ್ಲಿಸ್​ನ ಮಕ್ಕಳು
Image
Awards : ಪ್ರಶಸ್ತಿ ಎಂಬ ‘ಕೀರ್ತಿಶನಿ’ ಮತ್ತು ‘ಯಶೋಲಕ್ಷ್ಮಿ’ಯ ಕುರಿತು ಡಾ. ಎಚ್. ಎಸ್. ರಾಘವೇಂದ್ರ ರಾವ್

(ಮೈಲ್ಸ್‌ ಗೆ ಪಿನೋಟ್(ಕಪ್ಪು ಹುಳಿ ದ್ರಾಕ್ಷಿ) ಫೇವರಿಟ್ಟು)

ಮಾಯಾ: ನಿಮಗೆ ಯಾಕೆ ಪಿನೋಟ್‌ ಅಂದ್ರೆ ಅಷ್ಟಿಷ್ಟ?

ಮೈಲ್ಸ್(ವೈನಿನ ಗ್ಲಾಸು ತಿರುಗಿಸುತ್ತ): ಅದೇನೊ ಗೊತ್ತಿಲ್ಲ, ಅದೊಂಥರ ತೆಳು ಸಿಪ್ಪೆಯ, ಭಾವಾತಿರೇಕದ, ಬೇಗ ಹಣ್ಣಾಗುವ ಆದಾಗ್ಯೂ ಗಟ್ಟಿಯಾಗಿರುವ ದ್ರಾಕ್ಷಿ. ಅದು ಕೆಬರ್‌ ನೆಟ್‌ ದ್ರಾಕ್ಷಿ ತರಹ ಎಲ್ಲಂದರಲ್ಲೆ ಬೆಳೆಯುವ ನಿರ್ಲಕ್ಷ್ಯ ಮಾಡಿದರೂ ಉಳಿಯುವ ಹಣ್ಣಲ್ಲ. ಅದು ನಿರಂತರ ಕಾಳಜಿ ಮತ್ತು ಗಮನ ಬಯಸುತ್ತದೆ. ಇನ್​ಫ್ಯಾಕ್ಟ್  ಪ್ರಪಂಚದ ಕೆಲವೇ ಕೆಲವು ಮೂಲೆಗಳಲ್ಲಿ ಬೆಳೆಯುತ್ತದೆ. ಬಹಳ ತಾಳ್ಮೆಯುಳ್ಳ ಚೆನ್ನಾಗಿ ಆರೈಕೆ ಮಾಡುವ ಕೃಷಿಕರು ಮಾತ್ರ ಅದನ್ನು ಬೆಳೆಯಬಲ್ಲರು. ಅದರ ಸೂಕ್ಷ್ಮ, ನವಿರಾದ ಗುಣಗಳ ಲಾಭ ಪಡೆಯಬಲ್ಲರು. ಯಾರು ಅದನ್ನು ನಿಜವಾಗಿ ಅರ್ಥ ಮಾಡಿಕೊಳ್ಳುತ್ತಾರೊ ಅವರು ಮಾತ್ರ ಅದರಿಂದ ನೈಜ ಅಭಿವ್ಯಕ್ತಿಯನ್ನು ಹೊರತೆಗೆಯಬಲ್ಲರು. ಹಾಗೆ ಮಾಡಲು ಶಕ್ತರಾಗಿಬಿಟ್ಟರೆ- ಆಗ ಅದರ ಸುಂಗಂಧ ಬೊಂಬಾಟಾಗಿರುತ್ತದೆ, ಕಾಡಲಾರಂಭಿಸುತ್ತದೆ. ಒಂಥರ ಮಾಗಿದ ಪ್ರಾಚೀನತೆ ಸೂಸುವ ಸುಗಂಧ.

ಕ್ಯಾಬರನೆಟ್‌ ಪವರ್ ಫುಲ್ಲಾಗಿದೆ, ಉತ್ಕೃಷ್ಟವಾಗಿದೆ ಎಲ್ಲ ನಿಜ, ಆದರೂ ಅದೇನೊ ನೀರಸವೆನಿಸುತ್ತದೆ. ನಿಮಗೇನನ್ನಿಸುತ್ತದೆ?

ನನಗಾ? ಅದೇ, ನಿಮಗ್ಯಾಕೆ ವೈನ್‌ ಹುಚ್ಚು ಎಂದೆ.

ಮಾಯಾ: ನಂಗೆ ವೈನ್​ನ ಜೀವನಚರಿತ್ರೆ ಹೇಗಿರುತ್ತದೆ ಎಂದು ಯೋಚಿಸುವುದು ಇಷ್ಟ. ಅದು ನಮ್‌ ತರಹಾ ಜೀವಿಯಾಗಿದ್ದರೆ ಹೇಗೆ ಅಂತ. ಚಿಕ್ಕಂದಿನಿಂದ ಬೆಳೆಯುವಾಗಿನ ಅದರ ದಿನಗಳು ಹೇಗಿದ್ದವು, ಆ ದಿನಗಳಲ್ಲಿ ಸೂರ್ಯ ಹೇಗೆ ಬೆಳಗುತ್ತಿದ್ದ, ಆಗೆಲ್ಲ ಹೇಗೆ ಮಳೆಯಾಗುತ್ತಿತ್ತು… ಹವಾಮಾನ ಹೇಗಿರುತ್ತಿತ್ತು ಎಂದು. ಆ ದ್ರಾಕ್ಷಿಗಳನ್ನು ಕಾಳಜಿ ಮಾಡಿದ ಎತ್ತಿಕೊಂಡು ಲಾಲಿಸಿದ ಜನರ ಬಗ್ಗೆ ಯೋಚಿಸುತ್ತೇನೆ. ಹಳೆಯ ವೈನ್‌ ಆಗಿದ್ದರೆ- ಅದರೊಳಗೆ ಅದೆಷ್ಟು ದ್ರಾಕ್ಷಿಗಳು ಆಗಲೇ ಮಡಿದಿರಬಹುದು ಎಂದು ಚಿಂತಿಸುತ್ತೇನೆ. ದಿನಗಳೆದಂಗೆ ವೈನ್​ನ ಕಳೆ ಏರುತ್ತ ಹೋಗುತ್ತದೆ ಎಂಬುದೇ ನನಗೆ ಅತ್ಯಂತ ಪ್ರಿಯವಾದ ಸಂಗತಿ. ಪ್ರತಿ ಸಲ ಬಾಟಲ್‌ ಓಪನ್‌ ಮಾಡಿದಾಗಲೂ ಒಂದೊಂದು ರುಚಿ. ಆ ಕ್ಷಣಕೂ ಮುಂಚಿನ ಅಥವಾ ಆನಂತರಕ್ಕೆ ಹೋಲಿಕೆಯಿಲ್ಲದ ಆ ಗಳಿಗೆಯ ವಿಶಿಷ್ಟ ರುಚಿ. ಯಾಕಂದರೆ- ಬಾಟಲಿಯಲ್ಲಿನ ವೈನ್‌ ಇನ್ನೂ ಜೀವಂತವಿದೆ. ಅದು ನಿರಂತರವಾಗಿ ಬೆಳೆಯುತ್ತಿದೆ, ಸಂಕೀರ್ಣಗೊಳ್ಳುತ್ತಿದೆ. ತನ್ನ ಸುಪ್ರೀಂ ಮಟ್ಟ ತಲುಪುವವರೆಗೆ. ಅಂದ್ರೇ.. ನಾವು ಒಂದು ಅರವತ್ತೊಂದು ವಯಸು ಮುಟ್ತೀವಲ್ಲ ಹಾಗೆ. ಆಮೇಲೆ ನಿಧಾನಕ್ಕೆ ಅನಿವಾರ್ಯವಾಗಿ ಕೆಳಗಿಳಿಯುತ್ತ ಹೋಗುತ್ತದೆ. And it tastes so fucking good.

ಇದನ್ನೂ ಓದಿ : National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್

ಆ ಗಳಿಗೆಯಲ್ಲಿ ಅವರಿಬ್ಬರೂ ತಮ್ಮ ತಮ್ಮ ಭಾವನೆಗಳನ್ನು ಸೂಕ್ಷ್ಮವಾಗಿ ದ್ರಾಕ್ಷಿ ಮತ್ತು ವೈನ್‌ ಮೂಲಕ ಹಂಚಿಕೊಂಡುಬಿಟ್ಟಿರುತ್ತಾರೆ. ಆದರೂ ಅವಳಿಗೆ ತನ್ನ ಮೇಲೆ ಏನಾದರೂ ಭಾವನೆ ಇರಬಹುದಾ ಎಂದು ಮೈಲ್ಸ್​ಗಿನ್ನೂ ಖಚಿತವಿಲ್ಲ. ಹೆದರಿ ಕಲ್ಲಿನಂತೆ ಕೂತುಬಿಡುತ್ತಾನೆ. ಇವಳು ಇನ್ನೇನಾದರೂ ಸನ್ನೆ ಕೊಡುತ್ತಾಳಾ ಎಂದು ಕಾಯುತ್ತಾನೆ. ಮಾಯಾ ಆತನ ಕೈಮೇಲೆ ತನ್ನ ಕೈಯನ್ನು ಇರಿಸುತ್ತಾಳೆ.

ಸಿನಿಮಾದ ಮುಂದಿನ ಭಾಗದಲ್ಲಿ ಜ್ಯಾಕ್​ಗೆ ಸ್ಟೆಫಾನಿಯಾ ಮೇಲೆ ಆಸೆಯಾಗಿ ಅವಳನ್ನೇ ಮದುವೆಯಾಗಬೇಕೆಂದು ನಿರ್ಧರಿಸಿ ಪ್ರೊಪೋಸ್‌ ಮಾಡಿ- ಮೈಲ್ಸ್‌ ಒಂದ ಸಲ ಜಾಸ್ತಿ ಕುಡಿದು ಜ್ಯಾಕ್​ಗೆ ಈಗಾಗಲೆ ಮದುವೆ ಸೆಟ್‌ ಆಗಿದೆಯೆಂದು ಬಾಯಿಬಿಟ್ಟು, ಮಾಯಾ ನೀವು ಗಂಡಸರೆಲ್ಲ ಒಂದೇ ಬರೀ ಸುಳ್ಳು ಎಂದು ಸಿಟ್ಟು ಮಾಡಿಕೊಂಡು ಹೋಗುತ್ತಾಳೆ. ಎರಡೂ ಜೋಡಿಗಳು ಬೇರಾಗುತ್ತವೆ… ಏನೇನೊ ಆಗುತ್ತದೆ.. ಸುಖಾಂತ್ಯವೋ ದುಃಖಾಂತ್ಯವೊ ಎಂದು ತಿಳಿಯಲು ಸಿನಿಮಾ ನೋಡಿ.

ನಾ ಈ ಸಿನಿಮಾ ನೋಡಿದ ನಂತರದ ದಿನಗಳಲ್ಲಿ ಒಮ್ಮೆ ಅಮೆರಿಕಾಗೆ ಹೋಗಿದ್ದೆ. ಎಲ್ಲರಿಗೂ ಅಮೆರಿಕಾದ ಬಿಲ್ಡಿಂಗು ಮಾಲು ಕಾಂಪ್ಲೆಕ್ಸು ನೋಡಬೇಕು ಎಂಬ ಆಸೆಯಿದ್ದರೆ ನನಗೆ ಅಲ್ಲಿನ ಕಂಟ್ರಿ ಸೈಡ್‌ ನೋಡಬೇಕೆಂಬ ಬಯಕೆ. ಹಾಗಾಗಿ ಒಬ್ಬನೇ ಕಾರನ್ನೆತ್ತಿಕೊಂಡು ಒಂದಿಡೀ ಹಗಲು ಡ್ರೈವ್‌ ಮಾಡುತ್ತ ಹೋದೆ. ಸಿಟಿ ಬಿಟ್ಟು ಹೊರಹೋದಂತೆಲ್ಲ ನನಗೆ ಮನಸು ಪ್ರಫುಲ್ಲವಾಗುತ್ತ ಹೋಯಿತು. ಎಲ್ಲೆಲ್ಲೂ ಹಚ್ಚಹಸಿರು, ತೆಳುಬಿಸಿಲು. ಕೃಷಿಕರು, ದ್ರಾಕ್ಷಿ ತೋಟಗಳು. ನಮ್ಮಲ್ಲಿ ಬೆಂಗಳೂರು ಹೊರಗೆ ಹೋಗುತ್ತಿದ್ದಂತೆ ತೋಟಗಳು ತೆರೆದುಕೊಂಡು ತೋಟಗಳ ಎದುರೇ ರಸ್ತೆ ಬದಿಯಲ್ಲಿ ಹಣ್ಣು ಹಂಪಲು ಎಳನೀರು ಜೋಡಿಸಿಟ್ಟುಕೊಂಡಿರುತ್ತಾರಲ್ಲ ಹಾಗೆ ಅಮೆರಿಕಾದ ಕಂಟ್ರಿಸೈಡಿನಲ್ಲಿ ವೈನಿನ ಅಂಗಡಿಗಳು ಕಾಣಿಸ್ತ ಹೋದವು. ಸೇಮ್‌ ನಾವು ಮಾಡಿದಂತೆ ಅಲ್ಲಿನ ಜನ ಬುಲೆಟ್ಟು ಬೈಕು ಎತ್ತಿಕೊಂಡು ಪ್ರಯಾಣ ಹೊರಡುತ್ತಾರೆ.. ಇಂತಹ ಸ್ತಳಗಳಲ್ಲಿ ನಿಲ್ಲಿಸಿ ದ್ರಾಕ್ಷಿ ತೋಟದ ನಡುವಿರುವ ಅಂಗಡಿಗಳಿಗೆ ಲಗ್ಗೆ ಹಾಕಿ ಅಲ್ಲೇ ತಯಾರಿಸಿದ ವಿಧವಿಧ ವೈನುಗಳನ್ನು ಟೇಸ್ಟ್‌ ಮಾಡಿ ಮುಂದುವರೆಯುತ್ತಾರೆ… ನಾ ಇದನ್ನೆಲ್ಲ ನೋಡಿ ಪುಳಕೊಂಡೆ. ಮೈಲ್ಸ್‌ ರೀತಿ ಗ್ಲಾಸನ್ನು ಮೂಗಿಗೆ ಹಿಡಿದು ವಾಸನೆ ಗ್ರಹಿಸಲು ಯತ್ನಿಸಿದೆ.

ಮೈಲ್ಸ್‌ ವೈನ್‌ ಬಗ್ಗೆ, ಮಾಯಾ ವೈನ್‌ ಬಗ್ಗೆ ಯೂಟ್ಯೂಬ್​ನಲ್ಲಿ ನೋಡಬಹುದು.

*

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 3:13 pm, Wed, 25 May 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ