Literature: ಅನುಸಂಧಾನ; ಬರವಣಿಗೆ ಆತ್ಮಕಥಾನಕವೇ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ

Interview : J.M. Coetzee ಅವರ Doubling the Point ಕೃತಿಯ ಸಂಪಾದಕರು David Attwell. ಲೇಖನ ಸಂದರ್ಶನಗಳನ್ನೊಳಗೊಂಡ ಇದರಲ್ಲಿ ಮೊದಲಿಗೇ ವಿಸ್ತೃತವಾದ ಸಂದರ್ಶನವಿದ್ದು, ಮೊದಲ ಪ್ರಶ್ನೆ-ಉತ್ತರವೇ ಅತ್ಯಂತ ವಿಚಾರಪೂರ್ಣ, ಮಾರ್ಗದರ್ಶಕ ಮತ್ತು ಕುತೂಹಲಕರವೂ. ಅದರ ಪೂರ್ಣಪಾಠ ಇಲ್ಲಿದೆ.

Literature: ಅನುಸಂಧಾನ; ಬರವಣಿಗೆ ಆತ್ಮಕಥಾನಕವೇ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ
ದಕ್ಷಿಣ ಆಫ್ರಿಕಾದ ನೊಬೆಲ್ ಪುರಸ್ಕೃತ ಕಾದಂಬರಿಕಾರ ಜೆ. ಎಂ. ಕೋಝಿ | Photo Courtesy : literariness.org
Follow us
ಶ್ರೀದೇವಿ ಕಳಸದ
|

Updated on:Mar 20, 2022 | 9:58 AM

ಅನುಸಂಧಾನ | Anusandhaana : David Attwell : ಮೊದಲಿಗೆ ನಾನು ಆತ್ಮಕಥಾನಕದ ಪ್ರಶ್ನೆಯೊಂದಿಗೆ ಆರಂಭಿಸುತ್ತೇನೆ. ಮಾತನಾಡ್ತಾ ಇರುವ ವಿಷಯದ ಅಥೆಂಟಿಸಿಟಿ ಮತ್ತು ಅಥಾರಿಟಿ ಎರಡರ ಕುರಿತೂ ಪರೀಕ್ಷಕ ದೃಷ್ಟಿಯಿಂದ ನೋಡೋ ಹಾಗೆ ಮಾಡುವ, ತೀವ್ರವಾದ ಒಂದು ಒತ್ತಡವನ್ನು ಉಂಟುಮಾಡುವ ವಿಷಯಕ್ಕೆ ಬಂದ್ರೆ, ನಿಮ್ಮ ಕೃತಿಗಳು ನಮ್ಮನ್ನ ಎಷ್ಟು ತೀವ್ರವಾಗಿ ಒತ್ತಾಯಿಸ್ತಾವೋ ಅಷ್ಟೇ ತೀವ್ರವಾಗಿ ಒತ್ತಾಯಿಸೋ ಸಮಕಾಲೀನ ಕೃತಿಕಾರರು ಇಲ್ಲ. Duskland ನಿಂದ ತೊಡಗಿ ಈ ಪ್ರಶ್ನೆ ಪ್ರತಿಯೊಂದು ಕೃತಿಯಲ್ಲೂ ಸುಪ್ತವಾಗಿ ಕಾಡುತ್ತಲೇ ಇತ್ತು ಮತ್ತದು Foe ಕೃತಿಯಲ್ಲಿ ವ್ಯಕ್ತವಾಗಿಯೇ ನಿರ್ವಹಿಸಲ್ಪಟ್ಟಿದೆ. ವಿಮರ್ಶೆಗಳಲ್ಲಿ ನೀವು ಟಾಲ್​ಸ್ಟಾಯ್, ರೂಸೊ ಮತ್ತು ದಾಸ್ತೊವಸ್ಕಿಯವರ ಆತ್ಮಚರಿತ್ರಾತ್ಮಕ ‘ಸತ್ಯ’ ಮತ್ತು ಆತ್ಮನಿವೇದನಾತ್ಮಕ ಬರಹಗಳತ್ತ ಬಹಳ ಆಳವಾದ ವಿಶ್ಲೇಷಣೆ ನಡೆಸಿದ್ದಿದೆ. ನಿಮ್ಮ ಕೃತಿಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನೀವು ನೀಡಿರುವ ಮಹತ್ವವನ್ನು ಗಮನಿಸುವಾಗ, ನಿಮ್ಮ ಗದ್ಯದಲ್ಲಿ ಸಾಮಾನ್ಯ ಅರ್ಥದ ಆತ್ಮಕಥಾನಕದಂಥ ಅಂಶ ಅತ್ಯಂತ ಕಡಿಮೆ ಇರುವುದು ಆಶ್ಚರ್ಯದ ವಿಷಯವೇನಲ್ಲ. ಈ ಹಿನ್ನೆಲೆಯಲ್ಲಿ, ನಿಮ್ಮ ವಿಮರ್ಶಾತ್ಮಕ ಬರವಣಿಗೆ ಮತ್ತು ಕಾದಂಬರಿ ಪ್ರಕಾರದ ಬಗ್ಗೆ ನೀವಾಡೋ ಮಾತುಗಳಿಗೆ ಇರುವ ಪ್ರೇರಣೆಗಳೇನು?

(ಸಂಧಾನ 1)

J.M.Coetzee: ಈ ನಿಮ್ಮ ಪ್ರಶ್ನೆಯನ್ನು ಆತ್ಮಕಥಾನಕ ಕುರಿತ ಪ್ರಶ್ನೆ ಅಂತ ಕಾಣೋದಕ್ಕಿಂತ ಸತ್ಯವನ್ನು ಹೇಳುವ ಕುರಿತ ಪ್ರಶ್ನೆಯನ್ನಾಗಿ ನೋಡಲು ನನಗೆ ಇಷ್ಟ. ಯಾಕೆಂದರೆ, ವಿಶಾಲಾರ್ಥದಲ್ಲಿ ಎಲ್ಲಾ ಬರವಣಿಗೇನೂ ಆತ್ಮಕಥಾನಕವೇ. ನೀವೇನೇ ಬರೆದರೂ, ಅದು ವಿಮರ್ಶೆಯಾಗಿರಲಿ, ಕಥಾನಕವಿರಲಿ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ. ನಿಜವಾದ ಪ್ರಶ್ನೆಯೇನಂದ್ರೆ, ಒಂದು ಬದುಕನ್ನು ಕಟ್ಟಿ ಕೊಡುವ ಈ ಮಹಾನ್ ಆತ್ಮಕಥನುದ್ದಿಪ್ತ ಬರವಣಿಗೆಯ ವಿದ್ಯಮಾನವೇನಿದೆ, ಈ ಸ್ವ-ನಿರ್ಮಾಣದ ಪ್ರಕ್ರಿಯೆ (Tristram Shandy ಯ ಛಾಯೆ!) ಏನಿದೆ, ಅದು ಕೇವಲ ಕಥಾನಕಗಳನ್ನಷ್ಟೇ ಕೊಡುತ್ತಿದೆಯೆ? ಅಥವಾ, ಇದಕ್ಕೆ ಬದಲಾಗಿ, ಹೀಗೆ ಹುಟ್ಟುತ್ತಿರುವ ಸ್ವ ಕುರಿತ ಕಥಾನಕಗಳಲ್ಲಿ, ಸ್ವ ದ ವಿಭಿನ್ನ ಆವೃತ್ತಿಯ ಕಥಾನಕಗಳಲ್ಲಿಯೇ ಬೇರೆ ಬರವಣಿಗೆಗಿಂತ ಸತ್ಯಕ್ಕೆ ಹೆಚ್ಚು ಹತ್ತಿರವಾದ ಬರಹಗಳು ಹುಟ್ಟುತ್ತಿರಬಹುದೆ? ನನ್ನವೇ ಸತ್ಯಗಳ ಜೊತೆ ನಾನು ನಿಂತಿರುತ್ತ ನಾನೀ ಪ್ರಶ್ನೆಯನ್ನು ಹೇಗೆ ಬಗೆಹರಿಸಿಕೊಳ್ಳಲಿ?

ನನ್ನ ಮೊತ್ತಮೊದಲ ಪ್ರತಿಕ್ರಿಯೆ ಏನೆಂದರೆ, ನಾವು ಎರಡು ಬಗೆಯ ಸತ್ಯಗಳ ನಡುವೆ ಒಂದು ವ್ಯತ್ಯಾಸವನ್ನು ಗುರುತಿಸಬೇಕು. ಮೊದಲನೆಯದು, ವಸ್ತುನಿಷ್ಠವಾದ ಸತ್ಯ. ಎರಡನೆಯದು ಇದರಾಚೆಗಿನದ್ದು, ಸ್ವಲ್ಪ ಭಿನ್ನವಾದ್ದು. ಮತ್ತಿದು, ಇವತ್ತಿನ ಸಂದರ್ಭದಲ್ಲಿ, ನಾವು ವಸ್ತುನಿಷ್ಠತೆಯ ಸತ್ಯವನ್ನು ದತ್ತ ಅಂತ ತಿಳಿದುಕೊಂಡು, ಅದಕ್ಕಿಂತ ಹೆಚ್ಚಿನದ್ದಾದ, ನಮ್ಮನ್ನು ವಿಪರೀತ ಕಾಡುವ ಒಂದು ‘ಮೇಲ್​ಸ್ತರದ’ ಸತ್ಯದ ಕಡೆಗೇ ಹೆಚ್ಚು ಗಮನ ಕೇಂದ್ರೀಕರಿಸಬೇಕು.

ಆದರೆ, ವಸ್ತುನಿಷ್ಠತೆಯ ಸತ್ಯ ಎಂದರೇನು? ನೀವು ನಿಮ್ಮ ನೆನಪುಗಳ ಗಣಿಯಿಂದ ಏನೋ ಒಂದಿಷ್ಟನ್ನು ಆರಿಸಿ ನಿಮ್ಮ ಜೀವನದ ಕತೆಯನ್ನು ಹೇಳುತ್ತೀರಿ ಮತ್ತು ಈ ಆರಿಸುವ ಪ್ರಕ್ರಿಯೆಯೇನಿದೆ, ಅದರಲ್ಲಿ ನೀವು ಬಹಳಷ್ಟನ್ನು ಬಿಟ್ಟುಬಿಡುತ್ತೀರಿ. ನೀವು ಮಗುವಾಗಿದ್ದಾಗ ನೊಣಗಳಿಗೆ ಹಿಂಸೆ ಕೊಡುತ್ತಿದ್ದಿರಿ ಎನ್ನುವ ಒಂದು ಸಂಗತಿಯನ್ನು ಹೇಳದೇ ಬಿಟ್ಟುಬಿಡಲು ನೀವು ಯೋಚಿಸಿದರೆ, ತಾರ್ಕಿಕವಾಗಿ ನೀವು ನಿಜವಾಗಿ ನೊಣಗಳಿಗೆ ಹಿಂಸೆ ಕೊಡದಿದ್ದಾಗ್ಯೂ ಕೊಟ್ಟಿರಿ ಎಂದು ಹೇಳಿದಷ್ಟೇ ಇದು ವಸ್ತುನಿಷ್ಠತೆಯ ಸತ್ಯಕ್ಕೆ ಅಪಚಾರವೆಸಗಿದಂತೆ. ಹೀಗಾಗಿ, ಆತ್ಮಚರಿತ್ರೆಯನ್ನು ಅಥವಾ ವಾಸ್ತವವಾಗಿ ಚರಿತ್ರೆಯನ್ನೇ ಸತ್ಯ ಎಂದು ಹೇಳುವಾಗ, ಎಲ್ಲಿಯವರೆಗೆ ಅದು ಸುಳ್ಳುಗಳನ್ನ ಹೇಳುತ್ತಿಲ್ಲವೋ ಅಲ್ಲಿಯವರೆಗೆ ಅದು ಸ್ಥೂಲವಾದ ಸತ್ಯದ ಒಂದು ಪರಿಕಲ್ಪನೆಯನ್ನು ಕೊಡುತ್ತದೆ ಎನ್ನಲು ಅಡ್ಡಿಯೇನಿಲ್ಲ.

ಹೀಗಾಗಿ, ಸತ್ಯದ ವಿಭಿನ್ನ ಪ್ರಕಾರಗಳ ನಡುವೆ ವ್ಯತ್ಯಾಸ ಗುರುತಿಸುವುದಕ್ಕಿಂತ ಈ ಪ್ರಶ್ನೆಯನ್ನು ಬೇರೆಯೇ ಒಂದು ಕೋನದಿಂದ ನೋಡೋಕೆ ಪ್ರಯತ್ನಿಸ್ತೇನೆ.

ನೀವು ಬರೀತಿರೋವಾಗ – ನಾನಿಲ್ಲಿ ಹೇಳ್ತಿರೋದು ಯಾವುದೇ ಪ್ರಕಾರದ ಬರವಣಿಗೇನೂ ಆಗಬಹುದು – ನಿಮಗೆ ನೀವು ‘ಅದರ’ ಜೊತೆ ಎಷ್ಟರ ಮಟ್ಟಿಗೆ ತಾದ್ಯಾತ್ಮ ಕಂಡ್ಕೋತಾ ಇದ್ದೀರಿ ಅಥವಾ ಇಲ್ಲ ಅನ್ನೋದು ನಿಮಗೇ ತಿಳಿತಾ ಇರುತ್ತೆ. ನಿಮ್ಮಲ್ಲೊಂದು ಸೆನ್ಸರ್ ಇರುತ್ತೆ, ಸದಾ ಪ್ರತಿಸ್ಪಂದಿಸ್ತಾ ಇರೋ ಒಂದು ಚೇತನ ಇರುತ್ತೆ. ಅಂಥದ್ದೊಂದು ಇಲ್ದೇನೇ ನೀವು ಬರಿಯೋಕೇ ಸಾಧ್ಯ ಇಲ್ಲ. ಬರೆಯೋದು ಅಂದ್ರೆ ಸುಮ್ನೆ ನೀವು ಮೊದಲಿಗೆ ಏನನ್ನ ಬರೀಬೇಕು ಅಂತ ನಿರ್ಧರಿಸ್ತೀರಿ ಮತ್ತೆ ಆಮೇಲೆ ಅದನ್ನ ಹೇಳ್ತೀರೀ ಅನ್ನೋ ತರಹದ ಎರಡು ಸ್ತರದ ಒಂದು ಪ್ರಕ್ರಿಯೆ ಅಂತ ತಿಳಿಯೋದು ತೀರಾ ಹುಂಬತನ ಅಷ್ಟೆ. ಬದಲಿಗೆ, ನಮಗೆಲ್ಲರಿಗೂ ಗೊತ್ತಿರೋ ಹಾಗೆ, ನೀವು ಯಾಕೆ ಬರೀತೀರಿ ಅಂತಂದ್ರೆ ನಿಮಗೆ ನೀವು ಏನನ್ನ ಬರೀಲಿಕ್ಕಿದ್ದೀರಿ ಅನ್ನೋದು ಗೊತ್ತಿಲ್ದೇ ಇರೋದ್ರಿಂದ್ಲೇ. ಬರೆಯೋವಾಗ್ಲೆ, ಬರೆಯೋದ್ರಿಂದ್ಲೇ ನಿಮಗೆ ನೀವು ಏನನ್ನ ಹೇಳಬೇಕಂತಿದ್ರಿ ಅನ್ನೋದು ಸ್ಪಷ್ಟವಾಗುತ್ತಾ ಆಗುತ್ತಾ ಹೋಗುತ್ತೆ. ಅದೇ ಎಷ್ಟೋ ಸಲ ನಿಮಗೆ ಏನು ಹೇಳೋದಿತ್ತು ಅಥವಾ ಹೇಳಬೇಕಿತ್ತು ಅನ್ನೋದನ್ನ ಕಟ್ಟಿಕೊಡುತ್ತೆ. ಅದೇನನ್ನ ಹೇಳುತ್ತೋ ಅಥವಾ ಸ್ಪಷ್ಟಪಡಿಸುತ್ತೋ ಅದು ನೀವು ಯೋಚಿಸಿದ್ದಕ್ಕಿಂತ ಅಥವಾ ಅರೆಬರೆ ಕಲ್ಪಿಸಿದ್ದಕ್ಕಿಂತ ತೀರ ಭಿನ್ನವಾಗಿರಲೂ ಬಹುದು. ಈ ಅರ್ಥದಲ್ಲಿ ನಾನು ಹೇಳಿದ್ದು, ಬರವಣಿಗೆ ನಮ್ಮನ್ನ ಬರೆಯುತ್ತೆ ಅಂತ. ಒಂದೇ ಒಂದು ಕ್ಷಣದ ಹಿಂದೆ ನಮ್ಮ ನಿರೀಕ್ಷೆ ಏನಿತ್ತು ಅನ್ನೋದನ್ನ ಬರವಣಿಗೆ ನಮಗೆ ತೋರಿಸಿಕೊಡುತ್ತೆ ಅಥವಾ ಸೃಷ್ಟಿಸಿಕೊಡುತ್ತೆ. ಮತ್ತೆ, ಇಲ್ಲೂ ನಾವೇನೂ ಯಾವಾಗ್ಲೂ ಈ ಬಗ್ಗೆ, ಯಾವುದು ಯಾವುದನ್ನ ಹೇಳುತ್ತೆ ಅನ್ನುವ ಬಗ್ಗೆ ಗ್ಯಾರಂಟಿ ಕೊಡೋಕ್ಕಾಗಲ್ಲ.

ಇದನ್ನೂ ಓದಿ : Gabriel Garcia Marquez’s Birth Anniversary: ಅಚ್ಚಿಗೂ ಮೊದಲು; ಕೇಶವ ಮಳಗಿ ಅನುವಾದಿಸಿದ ‘ಗದ್ಯ ಗಾರುಡಿ’ ಲಭ್ಯ

Kannada Writer Narendra Pai Column Anusandhaana

Doubling the Point ಕೃತಿಯ ಸಂಪಾದಕ ಡೇವಿಡ್ ಆ್ಯಟ್​ವೆಲ್

ಬರವಣಿಗೆ ಅನ್ನೋದು, ಈ ತರ ನಮ್ಮನ್ನ ಒಂದು ಖಾಲೀ ಹಾಳೆಗೆ ಕೊಂಡೊಯ್ಯುವ, ‘ಅನ್ಯ’ಕ್ಕೆ ನಮ್ಮನ್ನು ದೂಡುತ್ತಲೇ ಇರುವ ಒಂದು ಒತ್ತಡ ಮತ್ತು ಅದಕ್ಕೆ ಒಲ್ಲದಿರುವ ಒಂದು ಪ್ರತಿರೋಧದ ನಡುವಿನ ಆಟ ಇದ್ದ ಹಾಗೆ. ಈ ಪ್ರತಿರೋಧದ ಒಂದು ಭಾಗ ಮನಸ್ಸಿಗೆ ಸಂಬಂಧಿಸಿದ್ದು. ಆದರೆ ಅದರ ಇನ್ನೊಂದು ಭಾಗ ಒಂದು ಭಾಷೆಯ ಒಳಗೇ ನಿರ್ಮಾಣವಾಗಿರುವಂಥಾ ಅಂತಃಸ್ಪೂರ್ತ ನೆಲೆಯದ್ದು. ಒಂದು ಶಬ್ದ ಅತ್ಯಂತ ಸಹಜವಾಗಿ ಇನ್ನೊಂದು ಶಬ್ದವನ್ನ ತನ್ನೆಡೆಗೆ ಸೆಳೆದುಕೊಳ್ಳುವಂಥ ಬಗೆಯದ್ದು. ತಮ್ಮಷ್ಟಕ್ಕೆ ತಾವೇ ವೈವಿಧ್ಯಮಯವಾದ, ಚಿತ್ರವಿಚಿತ್ರವಾದ ಒಂದು ವಿನ್ಯಾಸಕ್ಕೆ ಬದ್ಧವಾಗುತ್ತ, ನಿಷಿದ್ಧವಾಗುತ್ತ ಹೋಗುವ ಲಾಲಿತ್ಯದ್ದು. ಈ ಎಲ್ಲ ಬಗೆಯ ಅಂತರ್ ಕ್ರೀಡೆಯ ಫಲವಾಗಿ, ನೀವು ನಿಜಕ್ಕೂ ಅದೃಷ್ಟಶಾಲಿಯೇ ಆಗಿದ್ದರೆ, ನೀವು ಗುರುತಿಸುವಂಥ ಅಥವಾ ನೀವು ಗುರುತಿಸಲು ಬಯಸುವಂಥಾ ಒಂದು ಸತ್ಯ ನಿಮಗೆ ಪ್ರತ್ಯಕ್ಷವಾಗುತ್ತೆ.

“ನೇರವಾದ” ಆತ್ಮಕಥಾನಕದ ನಿರೂಪಣೆ ಅನ್ನೋದು ವಸ್ತುಶಃ ನಾನಿಲ್ಲಿ ವಿವರಿಸ್ತಾ ಇರೋದಕ್ಕೆ ವಿರುದ್ಧವಾದದ್ದು, ಭಿನ್ನವಾದದ್ದು ಅಂತೇನೂ ನಾನು ತಿಳಿದಿಲ್ಲ. ಸತ್ಯ ಅನ್ನೋದು ಬರೆಯುವ ಪ್ರಕ್ರಿಯೆಯಲ್ಲಿ ಸಿದ್ಧಿಸೋದು ಅಥವಾ ಬರೆಯುವ ಪ್ರಕ್ರಿಯೆಯ ಮೂಲಕ ಸಿದ್ಧಿಸುವಂಥಾದ್ದು.

ಆದ್ದರಿಂದ ನಾವು ಸುಳ್ಳುಗಳ ಮೂಲ ಪ್ರಶ್ನೆಗೆ ಮರಳಬಹುದು. ಆತ್ಮಕಥಾನಕಗಳ ಬಗ್ಗೆ ಇಂಥಾ ಒಂದು ವ್ಯಾಖ್ಯಾನವನ್ನ ರೂಪಿಸೋದಕ್ಕೆ ನನಗೆ ಇಷ್ಟ; ಅದೆಂದ್ರೆ, ಅದೊಂದು ಬಗೆಯ ಸ್ವ-ನಿವೇದನೆ. ಅಲ್ಲಿ ನಿಮ್ಮ ಇತಿಹಾಸದ ವಾಸ್ತವಗಳಿಗೆ ನೀವು ಸಲ್ಲಿಸುವುದು ಅನಿವಾರ್ಯವಾಗಿದೆ. ಆದರೆ ಪ್ರಶ್ನೆ ಇರುವುದು ಯಾವ ವಾಸ್ತವ? ಎಲ್ಲಾ ವಾಸ್ತವಗಳೆ? ಅಲ್ಲ. ಎಲ್ಲಾ ವಾಸ್ತವವೆಂದರೆ ಸಿಕ್ಕಾಪಟ್ಟೆಯಾಯ್ತು. ನೀವೀಗ ನಿಮ್ಮನ್ನು ಉದ್ದೇಶಪೂರ್ವಕ ರೂಪಿಸುತ್ತ ಬಂದ ಸಂಗತಿಗಳನ್ನು ಗುರುತಿಸುತ್ತ ಆರಿಸುತ್ತೀರಿ. ಈ ಪ್ರಸ್ತುತ ಪ್ರಕ್ರಿಯೆಯಲ್ಲಿ ನಿಮ್ಮನ್ನು ಉದ್ದೇಶಪೂರ್ವಕ ರೂಪಿಸುತ್ತ ಬಂದ ಎಂದರೆ ಯಾವ ಉದ್ದೇಶ? ತಕ್ಷಣಕ್ಕೆ ನಾನು ಸೂಚಿಸುವುದೆಂದರೆ: ನಾನು 1970 ರಿಂದ 1990 ರ ವರೆಗೆ (ಕಾದಂಬರಿಗಳನ್ನು ಹೊರತುಪಡಿಸಿ, ಯಾಕೆಂದರೆ ಅವು ಸ್ವತಃ ತಮ್ಮ ಶೋಧವನ್ನು ಕೈಗೊಳ್ಳಲು ಬೇಕಾದ ಎಲ್ಲವನ್ನೂ ಸ್ವಯಂ ಹೊಂದಿರುವಂಥವು) ಏನನ್ನು ಬರೆದೆನೊ, ಎಲ್ಲ, ವಿಮರ್ಶಾತ್ಮಕ ಪ್ರಬಂಧಗಳು, ಅವಲೋಕನ ಮುಂತಾಗಿ – ಅವುಗಳ ಪ್ರಕಾರ ಏನಿದೆ, ಅದೇ ಅವುಗಳ ಬಗ್ಗೆ ಸಾಮಾನ್ಯಾರ್ಥದಲ್ಲಿ ಎಲ್ಲವನ್ನು ಹೇಳುವಂಥ ಅವಕಾಶವಿಲ್ಲದವುಗಳು – ಅದನ್ನು ಬರೆಯಲು ನನ್ನನ್ನು ಪ್ರೇರೇಪಿಸಿದ ಅಂಶಗಳನ್ನು ಅರ್ಥಮಾಡಿಕೊಳ್ಳುವುದು.

ಅದೇ ನನ್ನ ನಿಜವಾದ ಉದ್ದೇಶವೆ? ಸತ್ಯ ಏನೆಂದರೆ, ನಮ್ಮ ಈ ಮಾತುಕತೆಯ ಹಂತದಲ್ಲಿ ಬಹುಶಃ ಆಗ ನನಗೆ ಇವತ್ತು ಹೇಗಿರಬೇಕು ಎಂಬುದರ ಹಿಂದೆ ನನಗಿದ್ದ ನನ್ನವೇ ಪ್ರೇರಣೆಗಳು, ನಿರೀಕ್ಷೆಗಳು ಏನಿದ್ದವು, ಇವತ್ತು ಹಿಂದಿರುಗಿ ನೋಡಿದರೆ, ಆ ಉದ್ದೇಶದ ಬಗ್ಗೆ ಏನೇನೂ ಗೊತ್ತಿಲ್ಲ. ನಿರೀಕ್ಷೆ ಮತ್ತು ಉದ್ದೇಶ ಎರಡೂ ಒಂದೇ ಪಾತಳಿಯವು: ಒಂದು ಇನ್ನೊಂದರ ಮೇಲೆ ಯಜಮಾನಿಕೆ ತೋರಿಸುವುದಿಲ್ಲ. ಬಹುಶಃ ಅದಕ್ಕೇ ನಾನು ಸಂಭಾಷಣೆಯ ಒಂದು ವಿಧಾನದತ್ತ ಹೊರಳಿದ್ದೇನೆ ಅನಿಸುತ್ತದೆ. ನನ್ನದೇ ಸ್ವಗತದ ಸ್ಥಾಗಿತ್ಯದಿಂದ ಅತ್ತಿತ್ತ ಜರುಗುವ ಒಂದು ಉಪಾಯವಾಗಿ ಅಂತನೂ ಹೇಳಬಹುದು.

(ಮುಂದಿನ ಕಂತು : 3.4.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಅಂಕಣದ ಆಶಯವನ್ನು ಓದಿ : Literature : ಇದು ಮೌನ ಮಾತಾಗುವ ‘ಅನುಸಂಧಾನ’, ನರೇಂದ್ರ ಪೈ ಅಂಕಣ ನಾಳೆಯಿಂದ ಆರಂಭ 

Published On - 9:41 am, Sun, 20 March 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ