Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature : ಇದು ಮೌನ ಮಾತಾಗುವ ‘ಅನುಸಂಧಾನ’, ನರೇಂದ್ರ ಪೈ ಅಂಕಣ ನಾಳೆಯಿಂದ ಆರಂಭ

Columnist : ‘ಅಂಕಣದ ಕೊನೆಯ ಕಂತು ಪ್ರಕಟವಾಗುವ ಮೊದಲೇ ಪುಸ್ತಕವಾಗಿರುತ್ತದೆ. ಕಂತಿಗಾಗಿ ಕಾಯಬೇಕಿಲ್ಲ. ಹಾಗಾಗಿ ಅಂಕಣಗಳು ಮಹತ್ವ ಕಳೆದುಕೊಂಡಿವೆ ಅನಿಸುವಾಗಲೂ ಸ್ವತಃ ನಾನೇ ಅಂಕಣಕಾರನಾಗುವ ವಿಷಯದಲ್ಲಿ ನನಗೆ ಹಿಂಜರಿಕೆಯೇ ಇದೆ.’

Literature : ಇದು ಮೌನ ಮಾತಾಗುವ ‘ಅನುಸಂಧಾನ’, ನರೇಂದ್ರ ಪೈ ಅಂಕಣ ನಾಳೆಯಿಂದ ಆರಂಭ
Follow us
ಶ್ರೀದೇವಿ ಕಳಸದ
|

Updated on: Mar 19, 2022 | 5:51 PM

ಅನುಸಂಧಾನ | Anusandhaana : ಇವತ್ತು ಪತ್ರಿಕೆಗೆ, ಅದು ವೆಬ್ ಪತ್ರಿಕೆಯಾಗಿರಲಿ, ಪ್ರಿಂಟ್ ಮೀಡಿಯಾ ಆಗಿರಲಿ, ಅಂಕಣ ಬರೆಯುವುದಕ್ಕೆ ಯಾವುದೇ ವಿಶೇಷ ಅರ್ಹತೆ ಇರಬೇಕಾಗಿಲ್ಲ ಅನಿಸುತ್ತದೆ. ಯಾರು ಬೇಕಾದರೂ ಬರೆಯಬಹುದಾದ, ಬಹುಶಃ ಏನು ಬೇಕಾದರೂ ಬರೆಯಬಹುದಾದ ಒಂದು ಪ್ರಕಾರ ಅದಾಗಿದೆ. ಆದರೆ ನಾವು ಚಿಕ್ಕವರಿರುವಾಗ ಅಂಕಣ ಬರೆಯುವುದಕ್ಕೆ ವಿಶೇಷ ಅರ್ಹತೆ ಇರಬೇಕು ಎನ್ನುವ ನಂಬಿಕೆ ಇತ್ತು. ಯಾವುದಾದರೂ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇರುವವರಷ್ಟೇ ಅಂಕಣ ಬರೆಯುವ ಮಟ್ಟದ ಲೇಖಕ ಅನಿಸಿಕೊಳ್ಳುತ್ತಿದ್ದರು. ಅವರು ಬರೆಯುತ್ತಿದ್ದ ಪುಟ್ಟ ಅಂಕಣ ಕೂಡ ಅವರ ಅನುಭವದ ರಸಪಾಕವನ್ನೇ ಭಟ್ಟಿ ಇಳಿಸಿದ ಹಾಗಿರುತ್ತಿತ್ತು ಮತ್ತು ಅದನ್ನು ಓದದೇ ಇರುವುದು ಸಾಧ್ಯವಿರಲಿಲ್ಲ. ಇವತ್ತು ಅಂಕಣದ ಕೊನೆಯ ಕಂತು ಪ್ರಕಟವಾಗುವ ಮೊದಲೇ ಅದು ಪುಸ್ತಕವಾಗಿ ಬಿಡುಗಡೆ ಕೂಡಾ ಆಗುವುದರಿಂದ ನಾವು ಕಂತುಕಂತಾಗಿ ಓದುವ ಅನಿವಾರ್ಯವೇನಿಲ್ಲ. ಅಂಕಣ ಹೆಸರು ಮಾಡಿದ್ದರೆ ಮಾತ್ರ ಪುಸ್ತಕ ಕೊಳ್ಳುವ ಪ್ರಶ್ನೆ ಬರುತ್ತದೆ. ಹಾಗಾಗಿ ಅಂಕಣಗಳು ಮಹತ್ವ ಕಳೆದುಕೊಂಡಿವೆ ಅನಿಸುವಾಗಲೂ ಸ್ವತಃ ನಾನೇ ಅಂಕಣಕಾರನಾಗುವ ವಿಷಯದಲ್ಲಿ ನನಗೆ ಹಿಂಜರಿಕೆಯೇ ಇದೆ. ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)

ಹಾಗೆಯೇ ಯಾವುದಾದರೂ ಒಂದು ಪುಸ್ತಕದ ಬಗ್ಗೆ ಬರೆಯುವ ಸಂದರ್ಭದಲ್ಲಿ, ಅದು ಕತೆ, ಕಾದಂಬರಿ ಅಥವಾ ಕವಿತೆ – ಯಾವುದೇ ಪ್ರಕಾರಕ್ಕೆ ಸೇರಿದ್ದರೂ, ಅದು ಕೊಡಬೇಕಾದಷ್ಟು ಕೊಡದೇ ಇದ್ದಾಗ ಅದನ್ನು ಹೇಳುವುದಕ್ಕೆ ಒಬ್ಬ ವಿಮರ್ಶಕ ಅಥವಾ ಪುಸ್ತಕ ಪರಿಚಯ ಮಾಡುವ ವ್ಯಕ್ತಿ ತಿಣುಕಬೇಕಾಗುತ್ತದೆ. ಕವಿತೆ ಹೇಗಿರಬೇಕು, ಕವಿತೆ ಎಂದರೆ ಏನು ಎಂದೆಲ್ಲ ಬರೆಯಲು ತೊಡಗಿದ ತಕ್ಷಣ ನಾವು ಇನ್ಯಾರದೋ ಮಾತುಗಳನ್ನು ಅಥವಾ ನಮ್ಮದೇ ಮಾತುಗಳನ್ನು ಕೂಡ ರಿಪೀಟ್ ಮಾಡುತ್ತಿರುವ ಅನುಭವವಾಗುತ್ತದೆ. ಕವಿತೆ ಚೆನ್ನಾಗಿದ್ದರೆ ಅಲ್ಲ, ಕನಿಷ್ಠ ಕವಿತೆಯಾದರೂ ಆಗಿದ್ದರೆ ಅದನ್ನೆಲ್ಲ ಬರೆಯುವ ಸಂದರ್ಭ ಬರುತ್ತಿರಲಿಲ್ಲ. ಈ ರಿಪಿಟೀಶನ್ನಿನ ಸಮಸ್ಯೆ ಯಾವ ಮಟ್ಟದ್ದಿದೆ ಎಂದರೆ ಯಾವುದೇ ಪುಸ್ತಕದ ಕುರಿತು ಇವತ್ತು ಹೊಸ ಮಾತುಗಳನ್ನು ಬರೆಯುವುದೇ ಕಷ್ಟ ಎನಿಸುವ ಮಟ್ಟಿಗೆ ಅದು ಇದೆ. ಅಥವಾ ಅದು ನನ್ನ ವೈಯಕ್ತಿಕ ಸಮಸ್ಯೆಯಾಗಿದ್ದರೂ ಆಗಿರಬಹುದು, ಗೊತ್ತಿಲ್ಲ.

ಇದನ್ನೂ ಓದಿ : Literature : ಅಭಿಜ್ಞಾನ ; ‘ನೆನಪಿಟ್ಟುಕೋ, ಯಾರೇ ಕರೆದ ಹಾಗೆ ಅನಿಸಿದರೂ ತಪ್ಪಿ ಕೂಡ ತಿರುಗಿ ನೋಡಬಾರದು’

ಈ ಎರಡು ಕಾರಣಗಳಿಂದಾಗಿ, ಇಲ್ಲಿ ನಾನು ಬರೆಯಲು ಉದ್ದೇಶಿಸಿರುವ ಅಂಕಣದಲ್ಲಿ “ನನ್ನ ಸ್ವಂತ” ದ ಮಾತುಗಳು ಇರುವುದಿಲ್ಲ. ಹಾಗೆ ನೋಡಿದರೆ “ನನ್ನ” ಎಂಬ ಮಾತು, ಯೋಚನೆ, ಚಿಂತನೆಯೊಂದು ಇಲ್ಲವೇ ಇಲ್ಲ. ಎಲ್ಲವೂ ಅದಾಗಲೇ ಇಲ್ಲಿ ಇರುವ ಮಾತುಗಳೇ. ನಾವದಕ್ಕೆ ಟ್ಯೂನ್ ಮಾಡಿಕೊಂಡಾಗ ಅದು ನಮ್ಮದಾಗುತ್ತದೆ, ನಾವದನ್ನು ಆಡುತ್ತೇವೆ, ಬರೆಯುತ್ತೇವೆಯೇ ಹೊರತು ಅದು ನಮ್ಮದೇ ಸೃಷ್ಟಿಯಲ್ಲ ಎನ್ನುವುದು ನನ್ನ ಅನಿಸಿಕೆ. ಹಾಗಾಗಿ ಇಲ್ಲಿ ನಿರಂತರವಾಗಿ ನಡೆಯುತ್ತಿರುವುದು, ಮೌನ ಮಾತಾಗುವುದು ಕೂಡ ಅನುಸಂಧಾನವೇ.

ಇದಿಷ್ಟು ಈ ಅಂಕಣ ಕೇವಲ ಅನುವಾದದ ಮಾತು-ಕತೆ-ಅನುಭವಗಳನ್ನು ಮಾತ್ರವೇ ಕೊಡಲಿದೆ ಎನ್ನುವುದಕ್ಕೆ ಇರುವ ಹಿನ್ನೆಲೆ. ನಾವು ಆಡುವುದಕ್ಕಿಂತ ಹೆಚ್ಚು ಕೇಳಿಸಿಕೊಳ್ಳುವ, ಓದುವ ಪರಿಪಾಠ ಬೆಳೆಸಿಕೊಂಡರೆ ಉತ್ತಮ ಎನ್ನುವ ಪುಟ್ಟ ತತ್ವ ನಮ್ಮನ್ನು ಪೊರೆಯಲಿ.

(‘ಅನುಸಂಧಾನ’ ಅಂಕಣ ಹದಿನೈದು ದಿನಗಳಿಗೊಮ್ಮೆ ಭಾನುವಾರ ಪ್ರಕಟವಾಗುತ್ತದೆ.)

ಇದನ್ನೂ ಓದಿ : Literature: ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ 

ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್