AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Music: ವೈಶಾಲಿಯಾನ; ಸೈಕಲ್ ತುಳಿದೇ ಮನೆಮನೆಗೂ ಹೋಗಿ ಪಾಠ ಹೇಳುತ್ತಿದ್ದ ಶೇಷಾದ್ರಿ ಗವಾಯಿಗಳು

Pandit R.V. Sheshadri Gawai : ಖ್ಯಾಲ್ ಗಾಯನ, ಹಾರ್ಮೋನಿಯಂ, ತಬಲಾವಾದನದಲ್ಲಿ ಪರಿಣತರಾಗಿದ್ದ ಅವರು ಪಾಠ ಮಾಡುವ ವೈಖರಿ ಎಷ್ಟು ಸುಂದರವಾಗಿತ್ತೆಂದರೆ ಸಂಗೀತವೇಕೆ ಸಮ್ಮೋಹನಾಶ್ರಿತ ಕಲೆಯೆಂಬುದು ಯಾರಿಗಾದರೂ ಅರ್ಥವಾಗುತ್ತಿತ್ತು.

Music: ವೈಶಾಲಿಯಾನ; ಸೈಕಲ್ ತುಳಿದೇ ಮನೆಮನೆಗೂ ಹೋಗಿ ಪಾಠ ಹೇಳುತ್ತಿದ್ದ ಶೇಷಾದ್ರಿ ಗವಾಯಿಗಳು
ಸಂಗೀತ ಸಭೆಯೊಂದರಲ್ಲಿ ಕೆ. ಎಸ್. ವೈಶಾಲಿ. ಹಾರ್ಮೋನಿಯಂನಲ್ಲಿ ಪಂ. ಶೇಷಾದ್ರಿ ಗವಾಯಿಯವರು.
ಶ್ರೀದೇವಿ ಕಳಸದ
|

Updated on: Mar 19, 2022 | 11:21 AM

Share

ವೈಶಾಲಿಯಾನ | Vaishaliyaana : ತಮ್ಮ ಆಶ್ರಮವಾಸದ ಅನುಭವಗಳನ್ನು ಗುರುಗಳು ರಸವತ್ತಾಗಿ ಬಣ್ಣಿಸುತ್ತಿದ್ದರು. ಕಣ್ಣಿಲ್ಲದ ಅನೇಕ ಮಕ್ಕಳ ಕಣ್ಣಾದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ (ದೊಡ್ಡಜ್ಜನವರು) ಬಗ್ಗೆ ಅವರಿಗೆ ಅಪಾರವಾದ ಗುರುಭಕ್ತಿಯಿತ್ತು. ಗುರುಗಳಿಂದ ನೇರವಾಗಿ ಹಲವಾರು ವರ್ಷಗಳ ಕಾಲ ಸಂಗೀತ ವ್ಯಾಸಂಗ ಮಾಡಿದ ಪಂ. ಶೇಷಾದ್ರಿ ಗವಾಯಿಯವರು ಖ್ಯಾಲ್ ಗಾಯನ, ಹಾರ್ಮೋನಿಯಂ ವಾದನ, ತಬಲಾ ವಾದನದಲ್ಲಿ ಪರಿಣತರಾಗಿದ್ದರು. ಅವರು ಯಾವ ರಾಗವನ್ನಾದರೂ ಪಾಠ ಮಾಡುವ ವೈಖರಿ ಎಷ್ಟು ಸುಂದರವಾಗಿತ್ತೆಂದರೆ ಸಂಗೀತವೇಕೆ ಸಮ್ಮೋಹನಾಶ್ರಿತ ಕಲೆಯೆಂಬುದು ಯಾರಿಗಾದರೂ ಅರ್ಥವಾಗುತ್ತಿತ್ತು. ರಾಗದ ವಾದಿ- ಸಂವಾದಿ, ಅನುವಾದಿ ಸ್ವರಗಳು, ಏಕ್ ತಾಲ್, ತೀನ್ ತಾಲ್ , ರೂಪಕ್, ಝಪ್ ತಾಲ್ – ಹೀಗೆ ಬೇರೆ ಬೇರೆ ತಾಳಗಳಲ್ಲಿ ಅದೇ ರಾಗದಲ್ಲಿಯೇ ಹಲವಾರು ಚೀಜುಗಳು ಅವರಿಗೆ ಕರತಲಾಮಲಕವಾಗಿರುತ್ತಿದ್ದವು. ಒಂದು ಲಕ್ಷಣಗೀತೆ, ಒಂದು ಸ್ವರಗೀತೆ, ಒಂದು ದೇವರ ನಾಮ, ವಚನ ಅಥವಾ ಭಜನ್ ಕೂಡ ಅವರು ಅದೇ ರಾಗದಲ್ಲಿ ಕಲಿಸದೆ ರಾಗದ ಕಲಿಕೆ ಪೂರ್ಣಗೊಳ್ಳುತ್ತಿರಲಿಲ್ಲ.

ಡಾ. ಕೆ. ಎಸ್. ವೈಶಾಲಿ (Dr. K. S. Vaishali)

(ಯಾನ 6, ಭಾಗ 2)

1940ರ ದಶಕದಲ್ಲಿಯೇ ನನ್ನ ಗುರುಗಳಾದ ಪಂಡಿತ್ ಶೇಷಾದ್ರಿ ಗವಾಯಿಯಗಳು ಚಾಮರಾಜಪೇಟೆಯಲ್ಲಿ ಸೈಕಲ್ ತುಳಿದು ಮನೆ- ಮನೆಗೂ ಹೋಗಿ ಪಾಠ ಹೇಳುತ್ತಿದ್ದರು. ಅವರ ಸಮಕಾಲೀನರಾದ ಪಂ. ರಾಮರಾವ್ ನಾಯಕರವರೂ ಹಾಗೂ ಉಭಯಗಾನ ವಿದುಷಿ ಶ್ಯಾಮಲಾ ಭಾವೆಯವರ ತೀರ್ಥರೂಪರಾದ ಪಂ. ಭಾವೆಯವರೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಒಂದು ದೊಡ್ಡ ಶಿಷ್ಯ ಸಮೂಹಕ್ಕೆ ಧಾರೆಯೆರೆದು, ಬೆಂಗಳೂರಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನೆಲೆಗೊಳ್ಳುವಂತೆ ಅಹರ್ನಿಶಿ ಶ್ರಮಿಸಿ, ಅತ್ಯುತ್ತಮವಾದ ವಾತಾವರಣವನ್ನು ನಿರ್ಮಿಸಿದರೆಂದರೆ ಅದು ಉತ್ಪ್ರೇಕ್ಷೆಯಾಗಲಾರದು.

ಸುಮಾರು ಅರವತ್ತರ ದಶಕದಲ್ಲಿಯೇ ಪಂ. ಶೇಷಾದ್ರಿ ಗವಾಯಿಯವರು ‘ಗಾಯನ ಗಂಗಾ’ ಎಂಬ ಸಂಗೀತ ಮಾಸಪತ್ರಿಕೆಯನ್ನು ಹೊರತರಲು ಪ್ರಾರಂಭಿಸಿದರು. ಶ್ರೀ ಅರವಿಂದ ಸಂಗೀತ ವಿದ್ಯಾಲಯದಿಂದ ಹೊರಬರುತ್ತಿದ್ದ ಈ ಪತ್ರಿಕೆ ಕರ್ನಾಟಕದ ಏಕೈಕ ಸಂಗೀತ ಮಾಸಪತ್ರಿಕೆಯಾಗಿತ್ತು. ಪ್ರಾಯಶಃ ನಲವತ್ತೈದು ವರ್ಷಗಳ ಕಾಲ ಈ ಅದ್ಭುತ ಮಾಸಪತ್ರಿಕೆಯನ್ನು ನಡೆಸಿಕೊಂಡು ಬಂದ ಹೆಗ್ಗಳಿಕೆ ನನ್ನ ಗುರುಗಳದು. ಪ್ರತಿಯೊಂದು ಸಂಚಿಕೆಗೂ ಗುರುಗಳು ಒಂದು ಪ್ರಾರ್ಥನಾ ಗೀತೆಯನ್ನು ರಚನೆ ಮಾಡುತ್ತಿದ್ದರು. ‘ಉರಗಾಚಲ’ ಎಂಬ ಅಂಕಿತ ನಾಮದಲ್ಲಿ ರಚಿಸಿ, ರಾಗ ಸಂಯೋಜನೆ ಮಾಡಿದ ನೂರಾರು ಉರಗಾಚಲಗೀತೆಗಳನ್ನು ನಾವು ಶಿಷ್ಯರೆಲ್ಲರೂ ಹಾಡುತ್ತೇವೆ. ಒಂದೊಂದು ಗೀತೆ ಮತ್ತು ಮನಸೂರೆಗೊಳ್ಳುವ ಅವುಗಳ ರಾಗ ಸಂಯೋಜನೆಯು ಗವಾಯಿಯವರು ಎಂಥಾ ಅನುಪಮ ವಾಗ್ಗೇಯಕಾರರಾಗಿದ್ದರೆಂಬುದನ್ನು ಮನವರಿಕೆ ಮಾಡಿಕೊಡುತ್ತದೆ.

ಇದನ್ನೂ ಓದಿ : Hijab: ವೈಶಾಲಿಯಾನ; ಮುಸ್ಲಿಂ ಯುವತಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಎಂಥಾ ಹೇಯವಾದ ಆಷಾಢಭೂತಿತನ!

ಗಾಯನ ಗಂಗಾ ಸಂಗೀತ ಮಾಸಪತ್ರಿಕೆಯಲ್ಲಿ ಕರ್ನಾಟಕಿ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದಂಥ ಅತ್ಯಮೂಲ್ಯ, ಸಂಗ್ರಹಯೋಗ್ಯ ಲೇಖನಗಳಿರುತ್ತಿದ್ದವು. ಅಪರೂಪದ ರಚನೆಗಳು, ರಾಗಗಳ ಕಣಜವೇ ಆಗಿದ್ದ ಈ ದೈಮಾಸಿಕ ಪತ್ರಿಕೆಯನ್ನು ಗುರುಗಳು ಅಪಾರ ಶ್ರಮದಿಂದ ವ್ರತವನ್ನು ಪಾಲಿಸುವಂತೆ ಖರ್ಚು-ವೆಚ್ಚಗಳನ್ನು ಹೇಗೋ ಸಾಹಸ ಮಾಡಿ ಸರಿದೂಗಿಸಿ ಹೊರತರುತ್ತಿದ್ದರು. ಗುರುಗಳಿಗೆ ಆಪ್ತ ಸಹಾಯಕರಾಗಿ ತಬಲಾ ಕಲಾವಿದರಾದ ಎ.ವಿ ವತ್ಸರವರಿದ್ದರು. ಪ್ರಾರಂಭಗೊಂಡ ಎಂಟನೇ ವರ್ಷದಿಂದ ಈ ಪತ್ರಿಕೆಯು ದ್ವೈಮಾಸಿಕದಿಂದ ಮಾಸಿಕವಾಗಿ ಮಾರ್ಪಟ್ಟಿತು.

“ಸಣ್ಣ ಪತ್ರಿಕೆಗಳ ಉದ್ಯಮವೇ ಕಷ್ಟವೆನ್ನುವಾಗ, ಸಂಗೀತ ಕಲೆಯನ್ನೇ ಧ್ಯೇಯವಾಗಿಟ್ಟುಕೊಂಡು, ಒಂದು ಪತ್ರಿಕೆಯನ್ನು ನಡೆಸುವುದು ಎಷ್ಟು ಕಷ್ಟವೆಂಬುದಕ್ಕೆ ಪದಗಳಿಲ್ಲ. ಆದರೆ ಉದ್ದಿಶ್ಯ ಸಾಧನೆಯಲ್ಲಿ ಈ ಕಷ್ಟದ ಅರಿವಾಗುವುದಿಲ್ಲ. ಅನೇಕರು ನಮಗೆ ಸಹಕಾರ ನೀಡಿದ್ದಾರೆ. ಅವರಿಗೆಲ್ಲಾ ನಮ್ಮ ಅನಂತ ವಂದನೆಗಳು. ಈವರೆಗೆ ನೆರವು ನೀಡಿಧ ವರ್ತಕರು, ಲೇಖಕರು ಮೊದಲಾದವರೆಲ್ಲ ಈ ಬಡಪತ್ರಿಕೆಗೆ ಮುಂದೆಯೂ ಸಹಾಯ ನೀಡಿ, ನಾಡಿನ ಕಲಾಸೇವೆ ಮಾಡುವ ಸೌಭಾಗ್ಯವನ್ನು ಗುರುದೇವನು ಅನುಗ್ರಹಿಸಬೇಕೆಂದು ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತೇವೆ” ಎಂದು 1965ರ ಗಾಯನ ಗಂಗಾ ಸಂಚಿಕೆಯ ಸಂಪಾದಕೀಯದಲ್ಲಿ ಗುರುಗಳು ಹೃದಯ ಸ್ಪರ್ಶಿಯಾಗಿ ಬರೆಯುತ್ತಾರೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Music: ವೈಶಾಲಿಯಾನ; ಕಾಮದಹನದಂದು ಹುಟ್ಟಿದ ಗುರು ಶೇಷಾದ್ರಿ ಗವಾಯಿಯವರನ್ನು ನೆನೆಯುತ್ತ

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/vaishaliyaana

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ