New Color Olo: ಮಾನವರು ಇದುವರೆಗೆ ನೋಡಿರದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು
ಮಾನವರು ಇದುವರೆಗೆ ನೋಡಿರದ ಹೊಸ ಬಣ್ಣವನ್ನು ಕಂಡುಹಿಡಿಯಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೈನ್ಸ್ ಅಡ್ವಾನ್ಸಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸಂಶೋಧಕರು ಈ ಹೊಸ ಬಣ್ಣಕ್ಕೆ ಓಲೋ ಎಂದು ಹೆಸರಿಟ್ಟಿದ್ದು, ಈ ವಿಶೇಷ ಬಣ್ಣವನ್ನು ಜಗತ್ತಿನಲ್ಲಿ ಈವರೆಗೆ ಬರೀ 5 ಜನ ಮಾತ್ರ ನೋಡಿದ್ದಾರಂತೆ. ಈ ಹೊಚ್ಚ ಹೊಸ ಬಣ್ಣ ನವಿಲಿನ ನೀಲಿ ಬಣ್ಣದೊಂದಿಗೆ ಹೋಲಿಕೆಯನ್ನು ಹೊಂದಿದ್ದು, ಇದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಕ್ಯಾಲಿಫೋರ್ನಿಯಾ, ಏ. 22: ವಿಜ್ಞಾನಿಗಳು (Scientists) ಒಂದಲ್ಲಾ ಒಂದು ಕುತೂಲಹಕಾರಿ ಸಂಶೋಧನೆ, ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಇಲ್ಲೊಂದು ವಿಜ್ಞಾನಿಗಳ ತಂಡ ಸಂಶೋಧನೆಯೊಂದನ್ನು ಮಾಡಿ ಹೊಸ ಬಣ್ಣವೊಂದನ್ನು (new color) ಕಂಡು ಹಿಡಿದಿದ್ದಾರೆ. ಏಪ್ರಿಲ್ 18 ರಂದು ಸೈನ್ಸ್ ಅಡ್ವಾನ್ಸಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಈ ಹೊಸ ಬಣ್ಣವನ್ನು ವಿಜ್ಞಾನಿಗಳು ಓಲೋ (Olo) ಎಂದು ಹೆಸರಿಸಿದ್ದು, ಈ ವಿಶೇಷ ಬಣ್ಣವನ್ನು ಜಗತ್ತಿನಲ್ಲಿ ಕೇವಲ 5 ಮಂದಿ ಮಾತ್ರ ನೋಡಿದ್ದಾರಂತೆ. ನವಿಲಿನ ನೀಲಿ ಬಣ್ಣದೊಂದಿಗೆ ಹೋಲಿಕೆಯನ್ನು ಹೊಂದಿರುವ ಈ ಬಣ್ಣವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲಂತೆ. ಈ ಬಣ್ಣವನ್ನು ನೋಡಬೇಕಿದ್ದರೆ ಕಣ್ಣಿನ ರೆಟಿನಾಗಳ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬರಿಗಣ್ಣಿಗೆ ಕಾಣದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು:
ಅಮೆರಿಕಾದ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಈ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದಿದ್ದಾರೆ. ನವಿಲಿನ ನೀಲಿ ಬಣ್ಣ ಅಥವಾ ಟೀಲ್ ಬಣ್ಣಕ್ಕೆ ಹೋಲಿಕೆಯಾಗುವ ಈ “ಓಲೋ” ಬಣ್ಣ ಬರಿಗಣ್ಣಿಗೆ ಕಾಣಿಸುವುದಿಲ್ಲ. ಈ ಬಣ್ಣವನ್ನು ನೋಡಬೇಕಿದ್ದರೆ ಕಣ್ಣಿನ ರೆಟಿನಾಗಳ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಬೇಕು. ಆಗ ಮಾತ್ರ ಈ ಬಣ್ಣ ಕಣ್ಣಿಗೆ ಗೋಚರವಾಗುತ್ತದೆ. ನೀಲಿ ಮತ್ತು ಹಸಿರು ಮಿಶ್ರಿತವಾದ ಈ ವಿಶೇಷ ಬಣ್ಣವನ್ನು ಈವರೆಗೆ ಕೇವಲ 5 ಮಂದಿ ಮಾತ್ರ ನೋಡಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು Pop Base ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಪೋಸ್ಟ್ ಇಲ್ಲಿದೆ ನೋಡಿ:
Scientists say they have discovered a never-before-seen color called “olo” by using lasers to stimulate the human eye in a way natural light can’t.
It’s described as a “jaw-dropping” blue-green hue that can’t be recreated on screens. pic.twitter.com/TNJCekZrJ4
— Pop Base (@PopBase) April 21, 2025
ವಾಸ್ತವವಾಗಿ ವಿಜ್ಞಾನಿಗಳು ಇಲ್ಲಿಯವರೆಗೆ ಮನುಷ್ಯರು ನೋಡಿರದ ಬಣ್ಣವನ್ನು ಕಂಡುಹಿಡಿದಿದ್ದಾರೆ. ಏಪ್ರಿಲ್ 18 ರಂದು ಸೈನ್ಸ್ ಅಡ್ವಾನ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಈ ಬಣ್ಣಕ್ಕೆ ಓಲೋ ಎಂದು ಹೆಸರಿಡಲಾಗಿದೆ. ಓಲೋ ಹೇಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ, ಆದರೆ ಅದು ನವಿಲು ನೀಲಿ ಅಥವಾ ಟೀಲ್ ಬಣ್ಣದಂತೆಯೇ ಇರುತ್ತದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ತಪ್ಪಿಯೂ ಅಡುಗೆ ಕೋಣೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡಬೇಡಿ! ಏಕೆ ಗೊತ್ತಾ
ಇದು ನಾವು ನೋಡುವ ಬಣ್ಣವಲ್ಲ, ಇದು ಸಂಪೂರ್ಣವಾಗಿ ವಿಭಿನ್ನವಾದ ಬಣ್ಣವಾಗಿದೆ. ದೈನಂದಿನ ಜೀವನದಲ್ಲಾಗಿರಲಿ ಅಥವಾ ಸ್ಮಾರ್ಟ್‌ಫೋನ್, ಮಾನಿಟರ್, ಟಿವಿ ಡಿಸ್ಪ್ಲೇಗಳಲ್ಲಾಗಲಿ ಈ ಬಣ್ಣವನ್ನು ನೋಡಲು ಸಾಧ್ಯವಿಲ್ಲ. ಈ ಬಣ್ಣ ವಿಆರ್ ಹೆಡ್‌ಸೆಟ್ ತಂತ್ರಜ್ಞಾನಕ್ಕಿಂತ ಬಹಳ ದೂರದಲ್ಲಿದ್ದು ಇದನ್ನು ಕೇವಲ ರೆಟಿನಾಗಳ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಮಾತ್ರ ನೋಡಲು ಸಾಧ್ಯ ಎಂದು ಈ ಸಂಶೋಧನೆಯ ವಿಜ್ಞಾನಿ ಆಸ್ಟಿನ್ ರೂರ್ಡಾ ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Tue, 22 April 25