ತಪ್ಪಿಯೂ ಅಡುಗೆ ಕೋಣೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡಬೇಡಿ! ಏಕೆ ಗೊತ್ತಾ
Vastu tips for kitchen: ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಕೋಣೆಗೆ ಕಪ್ಪು ಬಣ್ಣದ ಗ್ರಾನೈಟ್ ಬಳಕೆ ಮಾಡಬಾರದು ಎಂಬ ನಂಬಿಕೆ ಇದೆ. ಆದರೆ ಈ ರೀತಿ ಹೇಳುವುದಕ್ಕೆ ನಿಜವಾದ ಕಾರಣವೇನು ಎಂಬುದು ತಿಳಿದಿದೆಯೇ? ಸಾಮಾನ್ಯವಾಗಿ ಅಡುಗೆ ಮನೆ ಅಂದವಾಗಿ ಕಾಣಲು ಕಪ್ಪು ಬಣ್ಣದ ಗ್ರಾನೈಟ್ ಬಳಕೆ ಮಾಡುತ್ತಾರೆ ಆದರೆ ಇದರಿಂದ ಅನೇಕ ರೀತಿಯ ತೊಂದರೆಗಳಾಗುತ್ತದೆ ಎಂಬುದು ತಿಳಿದಿರಬೇಕಾಗುತ್ತದೆ. ಹಾಗಾದರೆ ಇದನ್ನು ಅಡುಗೆ ಮನೆಯಲ್ಲಿ ಬಳಕೆ ಮಾಡಬಾರದು ಎನ್ನುವುದಕ್ಕೆ ಕಾರಣ ತಿಳಿದುಕೊಳ್ಳಿ.

ಮನೆಯನ್ನು ವಾಸ್ತು (Vastu Tips) ಪ್ರಕಾರವಾಗಿ ಕಟ್ಟುತ್ತಾರೆ. ಅದರಲ್ಲಿಯೂ ಅಡುಗೆ ಮನೆ ಈ ಭಾಗದಲ್ಲಿಯೇ ಬರಬೇಕು, ಒಲೆ ಇಂತಹದ್ದೇ ಜಾಗದಲ್ಲಿರಬೇಕು ಎಂಬ ನಿಯಮಗಳಿವೆ. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ಅಡುಗೆ ಕೋಣೆ (Kitchen) ಯನ್ನು ಕಟ್ಟಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಇಂತಹ ನಿಯಮಗಳನ್ನು ಗಾಳಿಯಲ್ಲಿ ಬಿಟ್ಟುಬಿಡುತ್ತಾರೆ. ಅದರಲ್ಲಿಯೂ ಅಡುಗೆ ಮನೆಗೆ ಕಪ್ಪು ಬಣ್ಣ, ಕಪ್ಪು ಗ್ರಾನೈಟ್ (Black Granite) ಬಳಕೆ ಮಾಡುವವರ ಸಂಖ್ಯೆ ತುಂಬಾ ಹೆಚ್ಚಾಗಿಯೇ ಇದೆ. ಆದರೆ ಇದರಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಇದು ವಾಸ್ತು ನಿಯಮಕ್ಕೆ ವಿರುದ್ಧವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಹೌದು. ಕಪ್ಪು ಕಲ್ಲುಗಳನ್ನು ಅಥವಾ ಗ್ರಾನೈಟ್ ಗಳನ್ನು ಅಡುಗೆ ಮನೆಗೆ ಬಳಸಬಾರದು ಎನ್ನಲಾಗುತ್ತದೆ. ಆದರೆ ಈ ರೀತಿ ಹೇಳಲು ಕಾರಣವೇನು? ಇದರಿಂದ ಯಾವ ರೀತಿಯ ತೊಂದರೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕಪ್ಪು ಗ್ರಾನೈಟ್ ಹಾಕಿದರೆ ಏನಾಗುತ್ತೆ?
- ಕಪ್ಪು ಬಣ್ಣ ನೋಡಲು ಸುಂದರವಾಗಿ ಕಾಣುವುದು ನಿಜವಾದರೂ ಕೂಡ ಅವುಗಳ ಬಳಕೆ ಅಡುಗೆ ಮನೆಗೆ ಒಳ್ಳೆಯದಲ್ಲ ಎಂಬ ಭಾವನೆ ಇದೆ. ಅದರಲ್ಲಿಯೂ ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ಕಪ್ಪು ಗ್ರಾನೈಟ್ ಅಥವಾ ಬ್ಲಾಕ್ ಗ್ರಾನೈಟ್ ಬಳಕೆ ಮಾಡುವುದರಿಂದ ನಕಾರಾತ್ಮಕ ಚಿಂತನೆ ಹೆಚ್ಚುತ್ತದೆ ಜೊತೆಗೆ ಆರ್ಥಿಕ ನಷ್ಟ ಹೆಚ್ಚಾಗುತ್ತದೆ. ಹಾಗಾಗಿ ಇವುಗಳ ಬಳಕೆ ಅಡುಗೆ ಮನೆಗೆ ಒಳ್ಳೆಯದಲ್ಲ ಎನ್ನಲಾಗುತ್ತದೆ.
- ಅಡುಗೆ ಮನೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡುವುದರಿಂದ ವಾಸ್ತು ದೋಷ ಕಡಿಮೆ ಆಗುವುದಿಲ್ಲ ಬದಲಾಗಿ ಹೆಚ್ಚಾಗುತ್ತದೆ. ಇವುಗಳಿಂದಲೇ ಮನೆಯಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅದರಲ್ಲಿಯೂ ಅಡುಗೆ ಮನೆಯಲ್ಲಿ ಕಪ್ಪು ಗ್ರಾನೈಟ್ ಹಾಕುವುದರಿಂದ ಮಾನಸಿಕ ಒತ್ತಡ, ಕಾಯಿಲೆಗಳು ಹೆಚ್ಚಾಗುತ್ತದೆ. ಜೊತೆಗೆ ಕುಟುಂಬದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು.
- ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಕಪ್ಪು ಬಣ್ಣ ಹೆಚ್ಚಾಗಿದ್ದರೆ ಆರ್ಥಿಕ ನಷ್ಟ ಹೆಚ್ಚಾಗುತ್ತದೆ. ದುಡಿದ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಎಷ್ಟೇ ಸಂಪತ್ತಿದ್ದರೂ ಕೂಡ ಅದು ಕ್ರಮೇಣ ಕ್ಷೀಣಿಸುತ್ತಾ ಬರುತ್ತದೆ.
- ಅಡುಗೆ ಮನೆಯಲ್ಲಿ ಕಪ್ಪು ಗ್ರಾನೈಟ್ ಹಾಕುವ ಯೋಚನೆ ಇದ್ದರೆ ಇಂದೇ ಆ ಆಲೋಚನೆಯನ್ನು ಬಿಟ್ಟುಬಿಡಿ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮನೆಯಲ್ಲಿ ಅಶಾಂತಿ ತುಂಬಿರುತ್ತದೆ, ನೆಮ್ಮದಿ ಇರುವುದಿಲ್ಲ.
ಅಡುಗೆ ಮನೆಯಲ್ಲಿ ಬ್ಲಾಕ್ ಗ್ರಾನೈಟ್ ಇರುವವರು ಈ ರೀತಿ ಮಾಡಿ
ಈಗಾಗಲೇ ನಿಮ್ಮ ಮನೆಯ ಅಡುಗೆ ಕೋಣೆಗೆ ಬ್ಲಾಕ್ ಗ್ರಾನೈಟ್ ಹಾಕಿಸಿದ್ದರೆ ಚಿಂತೆ ಮಾಡಬೇಡಿ. ಅಡುಗೆ ಮನೆಯಲ್ಲಿ ಗಿಡಗಳನ್ನು ಇಟ್ಟುಕೊಳ್ಳಿ ಅಥವಾ ಕೃತಕ ಬಳ್ಳಿಗಳಿಂದ ಅಲಂಕರಿಸಿ. ಅಥವಾ ಅಡುಗೆ ಮಾಡುವ ಒಲೆಯ ಕೆಳಗೆ ಹಸಿರು ಅಥವಾ ಹಳದಿ ಬಣ್ಣದ ಕಲ್ಲುಗಳನ್ನು ಇಟ್ಟರೆ ನಿಮಗೆ ಒಳ್ಳೆಯ ಫಲಗಳು ಸಿಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Tue, 22 April 25