AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕರೇ ಕೆಲಸದ ಸ್ಥಳದಲ್ಲಿ ಗಂಟೆಗಟ್ಟಲೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೀರಾ? ಈ ಕಾಯಿಲೆ ಬರುವುದು ಖಂಡಿತ

ಫ್ಯಾಟಿ ಲಿವರ್ ಕಾಯಿಲೆ ಯುವಕರಲ್ಲಿ ಹೆಚ್ಚಾಗುತ್ತಿದೆ. ಇತ್ತೀಚಿಗಿನ ದಿನಗಳಲ್ಲಿ ಯುವಕರಲ್ಲಿ ಈ ಕಾಯಿಲೆ ಹೆಚ್ಚಾಗಿದೆ.ಕಳಪೆ ಜೀವನಶೈಲಿಯಿಂದ ಯುವಕರಲ್ಲಿ ಈ ಒಂದು ಹೊಸ ಸಮಸ್ಯೆ ವೇಗವಾಗಿ ಹರಡುತ್ತಿದೆ. ಸಕಾಲದಲ್ಲಿ ಈ ಸಮಸ್ಯೆಗೆ ವೈದ್ಯಕೀಯ ಪರಿಹಾರಗಳನ್ನು ನೀಡಿದಿದ್ದರೆ ಖಂಡಿತ ಈ ಸಮಸ್ಯೆ ದೊಡ್ಡದಾಗಿ ಕಾಡುತ್ತದೆ. ಈ ಕಾಯಿಲೆ ಬರಲು ಏನ್​​ ಕಾರಣ, ಇದರಿಂದ ಉಂಟಾಗುವ ಸಮಸ್ಯೆಗಳೇನು? ಇಲ್ಲಿದೆ ನೋಡಿ.

ಯುವಕರೇ ಕೆಲಸದ ಸ್ಥಳದಲ್ಲಿ ಗಂಟೆಗಟ್ಟಲೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೀರಾ? ಈ ಕಾಯಿಲೆ ಬರುವುದು ಖಂಡಿತ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 21, 2025 | 5:45 PM

ಜೀವನದಲ್ಲಿ ಒತ್ತಡ ಹೆಚ್ಚಾದರೆ ದೇಹದ ಆರೋಗ್ಯದಲ್ಲೂ ಬದಲಾವಣೆಗಳು ಆಗುತ್ತದೆ. ದೈಹಿಕವಾಗಿ ಹಾಗೂ ಮಾನಸಿಕ ಆರೋಗ್ಯದ ಮೇಲೆ ಒತ್ತಡ ಎಂಬುದು ಪರಿಣಾಮ ಉಂಟು ಮಾಡುತ್ತದೆ. ಇದರ ಜತೆಗೆ ಅನಾರೋಗ್ಯಕರ ಆಹಾರ ಪದ್ಧತಿ, ಕಳಪೆ ಜೀವನಶೈಲಿಗೂ ಪ್ರಭಾವ ಉಂಟು ಮಾಡಬಹುದು. ಕಳಪೆ ಜೀವನಶೈಲಿಯಿಂದ (Poor lifestyle) ಯುವಕರಲ್ಲಿ ಒಂದು ಹೊಸ ಸಮಸ್ಯೆ ವೇಗವಾಗಿ ಹರಡುತ್ತಿದೆ. ಅದುವೇ ಕೊಬ್ಬಿನ ಯಕೃತ್ತು. ಫ್ಯಾಟಿ ಲಿವರ್ ಕಾಯಿಲೆ (Fatty liver disease) ಯುವಕರಲ್ಲಿ ಹೆಚ್ಚಾಗಿದೆ. ಯಾಕೆಂದರೆ ಅವರು ಹೆಚ್ಚಾಗಿ ತಂತ್ರಜ್ಞಾನ ಮುಂದೆ ಕಳೆಯುವ ಸಮಯ ಇದಕ್ಕೆ ಕಾರಣ. ಡಿಜಿಟಲ್​​ ತಂತ್ರಜ್ಞಾನಗಳು ಹೆಚ್ಚಾಗಿ ನೋಡಿದಾಗ ಈ ಸಮಸ್ಯೆಗಲೂ ಬರುತ್ತದೆ. ಕಂಪ್ಯೂಟರ್, ಮೊಬೈಲ್​​​ಗಳಿಂದ ಈ ಸಮಸ್ಯೆ ಕಾಡುತ್ತಿದೆ ಎಂದು ಹೇಳಲಾಗಿದೆ. ಇನ್ನು ಐಟಿ, ಬಿಟಿ ಹಾಗೂ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ಈ ಗಣಕ ಯಂತ್ರದ ಮುಂದೆ ಹೆಚ್ಚಾಗಿ ಸಮಯ ಕಳೆಯುತ್ತಾರೆ, ಅವರಿಗೆ ಅನಿವಾರ್ಯ ಕೂಡ ಹೌದು. ಇದು ಮಾತ್ರವಲ್ಲದೇ, ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದಲ್ಲೂ ಹಾಗೂ ಜಂಕ್ ಫುಡ್ ಸೇವನೆಯಿಂದಲ್ಲೂ ಈ ಸಮಸ್ಯೆ ಬರುತ್ತದೆ. ಒಂದು ವೇಳೆ ಸಕಾಲದಲ್ಲಿ ಈ ಸಮಸ್ಯೆಗೆ ವೈದ್ಯಕೀಯ ಪರಿಹಾರಗಳನ್ನು ನೀಡಿದಿದ್ದರೆ ಖಂಡಿತ ಈ ಸಮಸ್ಯೆ ದೊಡ್ಡದಾಗಿ ಕಾಡುತ್ತದೆ.

ಈ ಹಿಂದೆ ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಇಂತಹ ಸಮಸ್ಯೆಗಳು ಕಾಡುತ್ತಿತ್ತು. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಈಗ ಚಯಾಪಚಯ ಕ್ರಿಯೆಯ ಅಪಸಾಮಾನ್ಯ ಕ್ರಿಯೆ-ಸಂಬಂಧಿತ ಸ್ಟೀಟೋಟಿಕ್ ಲಿವರ್ ಡಿಸೀಸ್ (MASLD) ಎಂದು ಕರೆಯಲಾಗುತ್ತದೆ. ಈ ಕಾಯಿಲೆಗಳು ಬೊಜ್ಜು ಹೊಂದಿರುವವರಲ್ಲಿ ಮಾತ್ರವಲ್ಲದೆ ಸಾಮಾನ್ಯ ತೂಕ ಮತ್ತು ತೆಳ್ಳಗಿನ ಜನರಲ್ಲಿಯೂ ಹರಡುತ್ತಿದೆ. ಈ ಬಗ್ಗೆ ಹೈದರಾಬಾದ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ 80% ಕ್ಕಿಂತ ಹೆಚ್ಚು ಜನರು MASLD ನಿಂದ ಬಳಲುತ್ತಿದ್ದಾರೆ.

ಯಕೃತ್ತಿನ ಕಾಯಿಲೆ ಹೆಚ್ಚಾಗಿ ಪತ್ತೆ:

ಈ ಕಾಯಿಲೆಗಳು ಆರಂಭದಲ್ಲಿ ಯಾವುದೇ ಲಕ್ಷಣಗಳು ಹೊಂದುವುದಿಲ್ಲ. ನಿಧಾನವಾಗಿ ಯಕೃತ್ತಿನಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ. ಪ್ರಥಮ ಹಂತದಲ್ಲೇ ಇದಕ್ಕೆ ವೈದ್ಯಕೀಯ ಸಲಹೆಗಳನ್ನು ಪಡೆಯಬೇಕು. ಒಂದು ವೇಳೆ ಇದರ ಬಗ್ಗೆ ಅಲ್ಯಸ ತೋರಿಸಿದ್ರೆ ಆಲ್ಕೊಹಾಲ್ಯುಕ್ತವಲ್ಲದ ಸ್ಟೀಟೋಹೆಪಟೈಟಿಸ್ (NASH), ಸಿರೋಸಿಸ್ ಅಥವಾ ಲಿವರ್ ಕ್ಯಾನ್ಸರ್​​ನಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹೊಟ್ಟೆಯಲ್ಲಿ ಭಾರವಾದಂತೆ, ಆಯಾಸ ಅಥವಾ ತೂಕ ಇಳಿಕೆಯಂತಹ ಲಕ್ಷಣಗಳು ಕಾಣಿಸಿಕೊಂಡಾಗ ಯಕೃತ್ತಿನ ಕಾಯಿಲೆ ಬಂದಿದೆ ಎಂದರ್ಥ.

ಇದನ್ನೂ ಓದಿ
Image
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
Image
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
Image
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
Image
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ತೆಳ್ಳಗಿರುವವರಿಗೂ ಈ ಸಮಸ್ಯೆ ಕಾಡಬಹುದು;

ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ದಪ್ಪಗಿರವವರಿಗೆ ಮಾತ್ರವಲ್ಲ, ತೆಳ್ಳಗಿರುವವರಿಗೂ ಬರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಆನುವಂಶಿಕ ಅಂಶಗಳು, ಇನ್ಸುಲಿನ್ ಪ್ರತಿರೋಧ ಮತ್ತು ಆಂತರಿಕ ಹೊಟ್ಟೆಯ ಕೊಬ್ಬುಗಳು ಕೂಡ ಇದಕ್ಕೆ ಕಾರಣವಾಗಬಹುದು. ತೆಳ್ಳಗಿರುವವರಿಗೆ ಈ ಸಮಸ್ಯೆ ಕಾಡುತ್ತಿದೆ ಎಂದರೆ ಅದಕ್ಕೆ ಅವರ ಜೀವನಶೈಲಿ ಮತ್ತು ಆಹಾರ ಪದ್ಧತಿ ಕಾರಣ.

ಆಹಾರ ಪದ್ಧತಿಯಲ್ಲಿ ನಿರ್ಲಕ್ಷ್ಯ:

ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಕೊಬ್ಬಿನ ಯಕೃತ್ತಿಗೆ ಪ್ರಮುಖ ಕಾರಣ. ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್ ಫುಡ್ ಸೇವಿಸುವುದರಿಂದ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಯುವಕರು ಪ್ರತಿದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ, ಫೈಬರ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿದರೆ ಈ ಸಮಸ್ಯೆಯನ್ನು ತಡೆಗಟ್ಟಬಹುದು.

ಇದನ್ನೂ ಓದಿ: ತಿಂಗಳಿಗೆ 20 ಸಾವಿರ ರೂ. ಸಾಕಪ್ಪ; ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸಲು ಯುವಕನ ಪ್ಲಾನಿಂಗ್‌ ಹೇಗಿದೆ ನೋಡಿ

ಮಾನಸಿಕ ಆರೋಗ್ಯ:

ಕೊಬ್ಬಿನ ಯಕೃತ್ತು ದೇಹದ ಮೇಲೆ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಯಕೃತ್ತು ದುರ್ಬಲಗೊಂಡಾಗ, ಅದು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಸ್ಮರಣಶಕ್ತಿಯ ನಷ್ಟ, ಕಡಿಮೆ ಗಮನ ನೀಡುವಿಕೆ, ಮನಸ್ಥಿತಿ ಬದಲಾವಣೆಗಳು ಮತ್ತು ನಿದ್ರೆಯ ಸಮಸ್ಯೆಗಳನ್ನು ಅನುಭವಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ