ತಿಂಗಳಿಗೆ 20 ಸಾವಿರ ರೂ. ಸಾಕಪ್ಪ; ಬೆಂಗಳೂರಿನಲ್ಲಿ ಆರಾಮ ಜೀವನ ನಡೆಸಲು ಯುವಕನ ಪ್ಲಾನಿಂಗ್ ಹೇಗಿದೆ ನೋಡಿ
ಬೆಂಗ್ಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜನ ಎಷ್ಟೇ ದುಡಿದ್ರೂ ಹಣ ಸಾಲ್ತಿಲ್ಲ, ದುಡಿದ ಎಲ್ಲಾ ಹಣ ಬಾಡಿಗೆ ಕಟ್ಟೋಕೆ, ದಿನಸಿ ತರೋಕೆ ಖರ್ಚಾಗುತ್ತದೆ ಎಂದು ಗೊಣಗುತ್ತಿರುತ್ತಾರೆ. ಇಂತಹ ಜನಗಳ ಮಧ್ಯೆ ಇಲ್ಲೊಬ್ಬ 22 ರ ಹರೆಯದ ಯುವಕ ತಿಂಗಳಿಗೆ 20 ಸಾವಿರ ರೂಪಾಯಿ ಇದ್ರೆ ಸಾಕು ಬೆಂಗಳೂರಿನಲ್ಲಿ ಆರಾಮವಾಗಿ ಜೀವನ ನಡೆಸಿಕೊಂಡು ಹೋಗಬಹುದು ಎಂದು ಹೇಳಿದ್ದಾನೆ. ತಿಂಗಳ ಖರ್ಚು ವೆಚ್ಚದ ಪ್ಲಾನಿಂಗ್ ಕುರಿತು ಆತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬೆಂಗಳೂರು, ಏ. 21: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ, ಉಳಿತಾಯ (Savings) ಎನ್ನುವುದು ಸವಾಲಿನ ಸಂಗತಿಯೇ ಆಗಿಬಿಟ್ಟಿದೆ. ಅದರಲ್ಲೂ ಬೆಂಗಳೂರು (Bengaluru), ಮುಂಬೈನಂತಹ (Mumbai) ನಗರ ಪ್ರದೇಶಗಳಲ್ಲಿ (urban area) ಜೀವನ ನಡೆಸಲು ಎಷ್ಟು ದುಡಿದರೂ ಸಾಲದು, ತಿಂಗಳಿಗೆ 50 ಸಾವಿರದಿಂದ 1 ಲಕ್ಷದ ವರೆಗೂ ದುಡಿದರೂ ಕೈಯಲ್ಲಿ ಬಿಡಿಗಾಸು ಉಳಿಯೊಲ್ಲ, ದುಡಿತಕ್ಕಿಂತ ವ್ಯಯವೇ ಹೆಚ್ಚಾಗಿದೆ ಎಂದು ಗೊಣಗುವವರು ಹಲವರಿದ್ದಾರೆ. ಇಂತಹವರ ಮಧ್ಯೆ ಇಲ್ಲೊಬ್ಬ ಯುವಕ ಜಾಸ್ತಿ ಏನು ಬೇಡ, ತಿಂಗಳಿಗೆ 20 ಸಾವಿರ ರೂ. ಇದ್ರೆ ಸಾಕು ಬೆಂಗಳೂರಿನಲ್ಲಿ ಆರಾಮವಾಗಿ ಜೀವನ ನಡೆಸಬಹುದು ಎಂದು ಹೇಳಿದ್ದಾನೆ. ಧೂಮಪಾನ, ಮದ್ಯಪಾನ, ಪಾರ್ಟಿಗಳಿಂದ ದೂರವಿರುವ ನಾನು 20 ಸಾವಿರ ರೂ. ಗಳಲ್ಲಿ ಆರಾಮವಾಗಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದು, ಈತನ ಸಾಧಾರಣ ಜೀವನಶೈಲಿ ಅನೇಕರಿಗೆ ಸ್ಫೂರ್ತಿಯಾಗಿದೆ.
ದುಬಾರಿ ಬಾಡಿಗೆ, ದಿನಸಿ ಇತರೆ ಖರ್ಚು ವೆಚ್ಚ ಸೇರಿ ನಗರ ಪ್ರದೇಶದಲ್ಲಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ ಎಂದು ಹಲವರು ಹೇಳುತ್ತಾರೆ. ಆದ್ರೆ ಇಲ್ಲೊಬ್ಬ 22 ವರ್ಷ ವಯಸ್ಸಿನ ಯುವಕ ನಾನು 22 ಸಾವಿರ ರೂ. ಗಳಲ್ಲಿ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾನೆ. ಈತ ತನ್ನ ಸಾಧಾರಣ ಜೀವನಶೈಲಿ, ಖರ್ಚು ವೆಚ್ಚಗಳ ಪಟ್ಟಿಯನ್ನು ಆತ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.
ಪೋಸ್ಟ್ ಇಲ್ಲಿದೆ ನೋಡಿ:
6 months of living alone in India — here’s what my monthly expenses look like byu/adarshhehe inpersonalfinanceindia
ಇದನ್ನೂ ಓದಿ
adarshhehe ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಶೇರ್ ಮಾಡಲಾಗಿದೆ. ಮತ್ತು ಈ ಪೋಸ್ಟ್‌ನಲ್ಲಿ 22 ವರ್ಷದ ಯುವಕ ತಿಂಗಳಿಗೆ 20 ಸಾವಿರ ರೂ. ಗಳಲ್ಲಿ ಹೇಗೆ ಜೀವನ ನಡೆಸುತ್ತಿದ್ದಾನೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾನೆ.
“ಜನರೇ ನಾನು ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ, ಈ ನಗರದ ಜೀವನ ವೆಚ್ಚದ ಬಗ್ಗೆ ಕುತೂಹಲ ಹೊಂದಿರುವ ಜನರಿಗೆ ನನ್ನ ಮಾಸಿಕ ವೆಚ್ಚದ ವಿವರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
- ಆಹಾರ : ತಿಂಗಳಿಗೆ 8 ಸಾವಿರ ರೂ (65 ರೂ. + ₹=100 ರೂ. + 100 ರೂ. ಪ್ರತಿ ದಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ)
- ಬಾಡಿಗೆ : 9 ಸಾವಿರ ರೂ. ಮನೆ ಬಾಡಿಗೆ ( ಒಟ್ಟು ಮನೆ ಬಾಡಿಗೆ 23 ಸಾವಿರ, ಆದರೆ ನಾನು ಸ್ನೇಹಿತರೊಂದಿಗೆ ಮನೆ ಹಂಚಿಕೊಂಡಿರುವುದರಿಂದ ಒಬ್ಬರಿಗೆ 9 ಸಾವಿರ ರೂ. ಬಾಡಿಗೆ ಬೀಳುತ್ತೆ)
- ಪ್ರಯಾಣ : ತಿಂಗಳಿಗೆ 2000 ರೂ. (ನಾನು ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಮತ್ತು ರಾಪಿಡೋ ಮಾತ್ರ ಬಳಸುತ್ತೇನೆ)
- ಇತರೆ (ಶೌಚಾಲಯ, ಶುಚಿತ್ವದ ಸಾಮಗ್ರಿಗಳು ಇತ್ಯಾದಿಗಳಿಗೆಲ್ಲಾ ತಿಂಗಳಿಗೆ 2000 ರೂ. ಖರ್ಚಾಗುತ್ತದೆ.
ಹೀಗೆ ಒಟ್ಟು ತಿಂಗಳಿಗೆ ಖರ್ಚಾಗುವುದು 20 ಸಾವಿರ ರೂ., ಐಷಾರಾಮಿ ಅಲ್ಲ ಆದ್ರೆ ಆರಾಮದಾಯಕ ಜೀವನಶೈಲಿಗೆ ಇದು ಸಾಕಲ್ವಾ. ನಾನು ಹೆಚ್ಚು ಮದ್ಯಪಾನ ಮಾಡುವುದಿಲ್ಲ, ಧೂಮಪಾನ ಮಾಡುವುದಿಲ್ಲ ಅಥವಾ ಪಾರ್ಟಿಗಳಿಗೆ ಹೋಗುವುದಿಲ್ಲ. ಇದನ್ನು ಲೆಕ್ಕ ಹಾಕಿದ್ರೆ ನಿಮ್ಮ ಖರ್ಚು ವೆಚ್ಚಗಳಲ್ಲಿ ಸ್ವಲ್ಪ ಬದಲಾವಣೆಗಳು ಆಗಬಹುದು” ಎಂದು ತನ್ನ ತಿಂಗಳ ಖರ್ಚು ವೆಚ್ಚದ ಡಿಟೇಲ್ಸ್ ಹಂಚಿಕೊಂಡಿದ್ದಾನೆ.
ಇದನ್ನೂ ಓದಿ: ನಾಲಿಗೆ ರುಚಿ ಹೆಚ್ಚಿಸೋದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಈ ಬೆಳ್ಳುಳ್ಳಿ ಉಪ್ಪಿನಕಾಯಿ
ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದ್ದು, ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಕೆಲವರು ಬೆಂಗಳೂರಿನಲ್ಲಿ 20 Lpa ಸಾಕಾಗುವುದಿಲ್ಲ ಎಂದು ಅಳುವವರಿದ್ದಾರೆ. ಆದ್ರೆ ನೀವು ನೋಡಿ ಎಷ್ಟು ಸರಳ ಜೀವನವನ್ನು ಆನಂದಿಸುತ್ತಿದ್ದೀರಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಬಹಳಷ್ಟು ಖರ್ಚು ಮಾಡ್ತಿದ್ದೆ ನಿಮ್ಮಿಂದ ಉಳಿತಾಯದ ಮಾರ್ಗವನ್ನು ಕಂಡುಕೊಂಡೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಯುವಕನ ಸಾಧಾರಣ ಜೀವನಶೈಲಿಗೆ ಫಿದಾ ಆಗಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ