AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garlic Pickle: ನಾಲಿಗೆ ರುಚಿ ಹೆಚ್ಚಿಸೋದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಈ ಬೆಳ್ಳುಳ್ಳಿ ಉಪ್ಪಿನಕಾಯಿ

ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದಕ್ಕಾಗಿಯೇ ಬೆಳ್ಳುಳ್ಳಿಯನ್ನು ಹೆಚ್ಚಿನ ಅಡುಗೆಗಳಲ್ಲಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಅಡುಗೆಗೆ ಒಗ್ಗರಣೆ ಹಾಕಲು ಬೆಳ್ಳುಳ್ಳಿ ಬಳಸಲಾಗುತ್ತದೆ. ಇದು ಮಾತ್ರವಲ್ಲದೆ ಹೇರಳ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿಯಿಂದ ಉಪ್ಪಿನಕಾಯಿಯನ್ನು ಕೂಡಾ ತಯಾರಿಸಬಹುದು. ತುಂಬಾನೇ ಟೇಸ್ಟಿಯಾಗಿರುವ ಈ ಉಪ್ಪಿನಕಾಯಿ ನಾಲಿಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಉತ್ತಮ.

Garlic Pickle: ನಾಲಿಗೆ ರುಚಿ ಹೆಚ್ಚಿಸೋದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಈ ಬೆಳ್ಳುಳ್ಳಿ ಉಪ್ಪಿನಕಾಯಿ
ಸಾಂದರ್ಭಿಕ ಚಿತ್ರImage Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Apr 20, 2025 | 8:57 AM

ನಮ್ಮಲ್ಲಿ ಬೆಳ್ಳುಳ್ಳಿಯನ್ನು (Garlic) ಪ್ರತಿ ಅಡುಗೆಯಲ್ಲೂ ಬಳಸಲಾಗುತ್ತದೆ. ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಬೆಳ್ಳುಳ್ಳಿಯನ್ನು ಅಡುಗೆ ಮಾತ್ರವಲ್ಲದೆ ಮನೆ ಮದ್ದುಗಳಲ್ಲೂ (home remedy) ಸಹ ಬಳಸಲಾಗುತ್ತದೆ. ಇದರಲ್ಲಿರುವ ಆಂಟಿಮೈಕ್ರೊಬಿಯಲ್‌, ಉತ್ಕರ್ಷಣ ನಿರೋಧಕ  ಅಂಶ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ವಿಟಮಿನ್‌ ಬಿ6, ವಿಟಮಿನ್‌ ಸಿ ನಂತಹ ಹಲವು ಪೋಷಕಾಂಶಗಳಿದ್ದು, ಇದು  ಹೃದಯದ ಆರೋಗ್ಯಕ್ಕೆ, ಕೆಮ್ಮು ಮತ್ತು ಶೀತ ಸಮಸ್ಯೆಯನ್ನು ನಿವಾರಿಸಲು, ಜೀರ್ಣಾಕ್ರಿಯೆಯ ಸುಧಾರಣೆಗೆ, ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು, ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಷ್ಟೆಲ್ಲಾ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಅಡುಗೆಗೆ ಒಗ್ಗರಣೆ ಹಾಕಲು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ಉಪ್ಪಿನಕಾಯಿಯನ್ನು  ಕೂಡಾ ತಯಾರಿಸಬಹುದು. ನಾಲಿಗೆಗೆ ರುಚಿ ಮಾತ್ರವಲ್ಲದೆ, ಆರೋಗ್ಯಕ್ಕೂ ಉತ್ತಮವಾದ ಬೆಳ್ಳುಳ್ಳಿ ಉಪ್ಪಿನಕಾಯಿಯ ಸಿಂಪಲ್‌ ರೆಸಿಪಿ ಇಲ್ಲಿದೆ.

ಬೆಳ್ಳುಳ್ಳಿ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಪದಾರ್ಥಗಳು:

ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೆಳ್ಳುಳ್ಳಿ ಉಪ್ಪಿನಕಾಯಿಯನ್ನು ಮನೆಯಲ್ಲಿಯೇ ಸಿಂಪಲ್ಲಾಗಿ ತಯಾರಿಸಬಹುದು. ಇದಕ್ಕೆ ಬೇಕಾಗಿರುವ ಪದಾರ್ಥಗಳೆಂದರೆ; ¾ ಕಪ್‌ ಬೆಳ್ಳುಳ್ಳಿ ಎಸಳುಗಳು, 1 ನಿಂಬೆ ಗಾತ್ರದ ಹುಣಸೆಹಣ್ಣು, 3-4 ಚಮಚ ಅಚ್ಚ ಖಾರದ ಪುಡಿ, ¼ ಟೀಸ್ಪೂನ್‌ ಇಂಗು, ¼ ಟೀಸ್ಪೂನ್‌ ಅರಶಿನ ಪುಡಿ, ಸ್ವಲ್ಪ ಕರಿಬೇವು, 2-4 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ (ಐಚ್ಛಿಕ), 2 ಟೀಸ್ಪೂನ್‌ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, 1 ಚಮಚ ಮೆಂತ್ಯ

ಇದನ್ನೂ ಓದಿ: ಸಿಹಿ ತಿಂಡಿಯಿಂದ ರೇಷ್ಮೆ ಸೀರೆಗಳವರೆಗೆ : ಕರ್ನಾಟಕದ ಜಿಲ್ಲೆಗಳು ಕಾರಣಕ್ಕೆ ಫೇಮಸ್ ನೋಡಿ

ಇದನ್ನೂ ಓದಿ
Image
ಈ ಸಮಯಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್‌ ಮುಟ್ಟಬೇಡಿ
Image
ಕರ್ನಾಟಕದ ಈ ಜಿಲ್ಲೆಗಳು ಯಾವುದಕ್ಕೆ ಫೇಮಸ್ ಗೊತ್ತಾ? ಇಲ್ಲಿದೆ ಮಾಹಿತಿ
Image
ದವಡೆ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಿದ ಚಾಟ್‌ಜಿಪಿಟಿ!
Image
ಯುನೆಸ್ಕೋದ ವಿಶ್ವ ನೋಂದಣಿ ಪಟ್ಟಿಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

ಬೆಳ್ಳುಳ್ಳಿ ಉಪ್ಪಿನಕಾಯಿ ತಯಾರಿಸುವ ವಿಧಾನ:

  • ಮೊದಲಿಗೆ ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ಸುಳಿದು ಎತ್ತಿಟ್ಟುಕೊಳ್ಳಿ. ಈಗ ಉಪ್ಪಿನಕಾಯಿಗೆ ಮಸಾಲೆ ತಯಾರಿಸಲು ಗ್ಯಾಸ್‌ ಸ್ಟವ್‌ ಮೇಲೆ ಒಂದು ಬಾಣಲೆ ಇಟ್ಟು  ಅದು ಕಾದ ಬಳಿಕ ಅದಕ್ಕೆ ಮೆಂತ್ಯ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. ನಂತರ ಅದಕ್ಕೆ ಕೊತ್ತಂಬರಿ ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಈ ಮಿಶ್ರಣವನ್ನು ಆರಲು ಬಿಟ್ಟು ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
  • ಈಗ ಗ್ಯಾಸ್‌ ಸ್ಟವ್‌ ಮೇಲೆ ಒಂದು ಬಾಣಲೆ ಇಟ್ಟು, ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ ಹಾಕಿ, ಅದು ಸ್ವಲ್ಪ ಸಿಡಿದ ಬಳಿಕ ಇಂಗು ಮತ್ತು ಕರಿ ಬೇವಿನ ಎಸಳನ್ನು ಸೇರಿಸಿ, ಈ ಮಿಶ್ರಣ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಳ್ಳಿ.
  • ಈಗ ಈ ಮಿಶ್ರಣಕ್ಕೆ ಸಿಪ್ಪೆ ತೆಗೆದಿಟ್ಟ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 1 ರಿಂದ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬೆಳ್ಳುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ಹುಣಸೆ ರಸ ಸೇರಿಸಿಕೊಳ್ಳಿ.
  • ನಂತರ ಅಚ್ಚ ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಜೊತೆಗೆ ಅರಶಿಣ ಪುಡಿ, ನುಣ್ಣಗೆ ಪುಡಿ ಮಾಡಿ ಇಟ್ಟುಕೊಂಡ ಕೊತ್ತಂಬರಿ, ಜೀರಿಗೆ ಮೆಂತ್ಯ ಪುಡಿ ಮಿಶ್ರಣವನ್ನು ಸೇರಿಸಿಕೊಳ್ಳಿ. ಇಷ್ಟವಾದರೆ ನೀವು ಸ್ವಲ್ಪ ಬೆಲ್ಲವನ್ನು ಸಹ ಸೇರಿಸಿಕೊಳ್ಳಬಹುದು.
  • ಎಲ್ಲಾ ಮಸಾಲೆಗಳನ್ನು ಸೇರಿಸಿದ ಬಳಿಕ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ, ಗ್ಯಾಸ್‌ ಆಫ್‌ ಮಾಡಿ. ಉಪ್ಪಿನಕಾಯಿ ತಣ್ಣಗಾದ ಬಳಿಕ ಅದನ್ನು ಗಾಳಿಯಾಡದ ಸೆರಾಮಿಕ್‌ ಅಥವಾ ಗಾಜಿನ ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ