AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: ಸಿಸಿಟಿವಿಯದ್ದು ಎಂದು ಬಿಂಬಿಸಿ AI ವೀಡಿಯೋ ವೈರಲ್!

ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: ಸಿಸಿಟಿವಿಯದ್ದು ಎಂದು ಬಿಂಬಿಸಿ AI ವೀಡಿಯೋ ವೈರಲ್!

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Aug 07, 2026 | 12:46 PM

Share

ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡಲೂರಿನಲ್ಲಿ ಕಾಡಾನೆಗಳು ಆಗಾಗ ಊರಿನೊಳಗೆ ಲಗ್ಗೆಯಿಟ್ಟು ದಾಂಧಲೆ ಮಾಡುತ್ತಿರುತ್ತವೆ.  ಇದನ್ನು ಸಮರ್ಥಿಸುವ ಹಲವು ವೀಡಿಯೋಗಳು, ಸಿಸಿ ಕ್ಯಾಮೆರಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ನಡುವೆ ಆನೆಗಳ ಪುಂಡಾಟದ ಸಿಸಿಟಿವಿ ವೀಡಿಯೋ ಎನ್ನಲಾದ AI ಜೆನೆರೇಟೆಡ್ ವೀಡಿಯೋವಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರನ್ನು ಮೂರ್ಖರನ್ನಾಗಿಸಿದೆ.

ಚಾಮರಾಜನಗರ, ಆಗಸ್ಟ್ 07: ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡಲೂರಿನಲ್ಲಿ ಕಾಡಾನೆಗಳು ಆಗಾಗ ಊರಿನೊಳಗೆ ಲಗ್ಗೆಯಿಟ್ಟು ದಾಂಧಲೆ ಮಾಡುತ್ತಿರುತ್ತವೆ. ಇದಕ್ಕೆ ಸಂಬಂಧಿಸಿದ ಹಲವು ವೀಡಿಯೋಗಳು, ಸಿಸಿ ಕ್ಯಾಮೆರಾ ದೃಶ್ಯಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಇದರ ನಡುವೆ ಇದೀಗ ಆನೆಗಳ ಪುಂಡಾಟದ ಸಿಸಿಟಿವಿ ವೀಡಿಯೋ ಎಂದು ಬಿಂಬಿಸಿರುವ AI ಜೆನೆರೇಟೆಡ್ ವೀಡಿಯೋವಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ತಪ್ಪು ಸಂದೇಶ ಹರಡಲಾಗಿದೆ

ಆಹಾರ ಅರಸಿ ಬಂದ ಪುಂಡಾನೆಗಳು ತೆಂಗಿನ ಮರಗಳನ್ನೇ ಬುಡಸಮೇತ ಕಿತ್ತು, ಗೋನೆ ಸಮೇತ ಹೊತ್ತೊಯ್ದಿರುವ ದೃಶ್ಯವನ್ನು ಜೆಮಿನಿ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದ್ದು,  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.  ಫೂಟೇಜ್​ನಲ್ಲಿ ಜೆಮಿನಿ ಲೋಗೋ ಸ್ಪಷ್ಟವಾಗಿ ಕಾಣುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 07, 2026 08:20 AM

Follow Us