AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ, 901 ಜನರಿಂದ ರಕ್ತದಾನ!

ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ, 901 ಜನರಿಂದ ರಕ್ತದಾನ!

ಭಾವನಾ ಹೆಗಡೆ
|

Updated on: Aug 07, 2026 | 10:05 AM

Share

ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರ ಹುಟ್ಟುಹಬ್ಬದ ಅಂಗವಾಗಿ ಹಾನಗಲ್‌ನ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಅಭೂತಪೂರ್ವ ರಕ್ತದಾನ ಶಿಬಿರ ಹಾಗೂ ಧರ್ಮಗುರುಗಳ ರಕ್ತ ತುಲಾಭಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋಮು ಸೌಹಾರ್ದತೆಯ ಸಂಕೇತವಾಗಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಪ್ರಮುಖ ಗುರುಗಳಿಗೆ ರಕ್ತದ ಮೂಲಕ ತುಲಾಭಾರ ನಡೆಸಿ ಗೌರವಿಸಲಾಯಿತು. ಇದೇ ವೇಳೆ ಕುಮಾರೇಶ್ವರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಅವರಿಗೂ ರಕ್ತ ತುಲಾಭಾರ ನೆರವೇರಿಸಲಾಯಿತು. ಶಾಸಕರ ಜನ್ಮದಿನದ ಅಂಗವಾಗಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಿದಂತೆ ಬರೋಬ್ಬರಿ 901 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಈ ಅಪರೂಪದ ಸೌಹಾರ್ದ ಕಾರ್ಯಕ್ರಮ ಜಿಲ್ಲೆಯಾದ್ಯಂತ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

ಹಾವೇರಿ, ಆಗಸ್ಟ್ 07: ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರ ಹುಟ್ಟುಹಬ್ಬದ ಅಂಗವಾಗಿ ಹಾನಗಲ್‌ನ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಅಭೂತಪೂರ್ವ ರಕ್ತದಾನ ಶಿಬಿರ ಹಾಗೂ ಧರ್ಮಗುರುಗಳ ರಕ್ತ ತುಲಾಭಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋಮು ಸೌಹಾರ್ದತೆಯ ಸಂಕೇತವಾಗಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಪ್ರಮುಖ ಗುರುಗಳಿಗೆ ರಕ್ತದ ಮೂಲಕ ತುಲಾಭಾರ ನಡೆಸಿ ಗೌರವಿಸಲಾಯಿತು. ಇದೇ ವೇಳೆ ಕುಮಾರೇಶ್ವರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಅವರಿಗೂ ರಕ್ತ ತುಲಾಭಾರ ನೆರವೇರಿಸಲಾಯಿತು. ಶಾಸಕರ ಜನ್ಮದಿನದ ಅಂಗವಾಗಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಿದಂತೆ ಬರೋಬ್ಬರಿ 901 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಈ ಅಪರೂಪದ ಸೌಹಾರ್ದ ಕಾರ್ಯಕ್ರಮ ಜಿಲ್ಲೆಯಾದ್ಯಂತ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us