ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಬಹು ವರ್ಷಗಳ ಕನಸು ಕೊನೆಗೂ ನನಸಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬ ಪತ್ನಿಯ ಆಸೆಯಂತೆ ಸಿದ್ದರಾಮಯ್ಯ ಅವರು ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಗಣೇಶ ಚತುರ್ಥಿ ಶುಭ ದಿನದಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಇನ್ನು ಈ ಬಗ್ಗೆ ಯತೀಂದ್ರ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತಮ್ಮ ಹೊಸ ಮನೆ ನಿರ್ಮಾಣದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಮೈಸೂರು, (ಸೆಪ್ಟೆಂಬರ್ 16): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಬಹು ವರ್ಷಗಳ ಕನಸು ಕೊನೆಗೂ ನನಸಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬ ಪತ್ನಿಯ ಆಸೆಯಂತೆ ಸಿದ್ದರಾಮಯ್ಯ ಅವರು ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಗಣೇಶ ಚತುರ್ಥಿ ಶುಭ ದಿನದಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಇನ್ನು ಈ ಬಗ್ಗೆ ಯತೀಂದ್ರ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತಮ್ಮ ಹೊಸ ಮನೆ ನಿರ್ಮಾಣದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ತಾಯಿಯ ಆಸೆಯಂತೆ ಮೈಸೂರಿನಲ್ಲಿ ಕಟ್ಟಿಸಿದ್ದೇವೆ. ನನ್ನ ತಾಯಿಗೆ ಮೈಸೂರಿನಲ್ಲಿ ಸೆಟಲ್ ಆಗಬೇಕೆಂಬ ಆಸೆ. ಅವರ ಇಚ್ಚೇ ಅಂತೆಯೇ ಮನೆ ಕಟ್ಟಿಸಿದ್ದೇವೆ. ಮನೆಯ ಸಂಪೂರ್ಣ ಪ್ಲ್ಯಾನ್ ನನ್ನ ತಾಯಿಯದ್ದು. ಹಿಂದೆ ಎರಡು ಮನೆ ಕಟ್ಟಿಸಿದ್ದೆವು. ಅಲ್ಲಿ ನಾವು ಒಂದು ದಿನವೂ ಇರಲಿಲ್ಲ. ಎರಡು ಮನೆಯನ್ನು ಮಾರುವ ಪರಿಸ್ಥಿತಿ ಬಂದು ಮಾರಿದೆವು. ಈಗ ಈ ಮನೆ ಕಟ್ಟಿಸಿದ್ದೇವೆ. ನನ್ನ ತಾಯಿ ತಂದೆ ನಾನು ಎಲ್ಲರೂ ಅಲ್ಲೇ ಉಳಿಯುತ್ತೇವೆ. ಇನ್ಮುಂದೆ ನನ್ನ ತಂದೆ ವಾರಕ್ಕೊಮೆಯಾದರು ಮೈಸೂರಿಗೆ ಬರಲು ಹೇಳಿದ್ದೇವೆ. ಇನ್ನೂ ಪ್ರತಿ ವಾರ ನಮ್ಮ ತಂದೆ ಮೈಸೂರಿಗೆ ಬಂದು ಹೋಗುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ

