AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಗರ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕಕ್ಕೆ ಅಭೂತಪೂರ್ವ ಯಶಸ್ಸು: 5,371 ಕೋಟಿ ರೂ.ಗೆ ಜಿಗಿದ ರಫ್ತು ಮೌಲ್ಯ, ದೇಶದಲ್ಲೇ 5ನೇ ಸ್ಥಾನ

ಕರ್ನಾಟಕವು ಸಾಗರ ಉತ್ಪನ್ನಗಳ ರಫ್ತಿನಲ್ಲಿ FY2025-26ರಲ್ಲಿ ಭರ್ಜರಿ ಸಾಧನೆ ಮಾಡಿದೆ. ರಫ್ತು ಮೌಲ್ಯ 5,371.85 ಕೋಟಿ ರೂ. ಗೆ ಏರಿಕೆ ಕಂಡಿದ್ದು, ಶೇ. 56.1 ರಷ್ಟು ಪ್ರಗತಿ ದಾಖಲಿಸಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ದೇಶದಲ್ಲಿ ಕರ್ನಾಟಕ 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಶೇಕಡಾವಾರು ಬೆಳವಣಿಗೆಯನ್ನು ಸಾಧಿಸಿದೆ.

ಸಾಗರ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕಕ್ಕೆ ಅಭೂತಪೂರ್ವ ಯಶಸ್ಸು: 5,371 ಕೋಟಿ ರೂ.ಗೆ ಜಿಗಿದ ರಫ್ತು ಮೌಲ್ಯ, ದೇಶದಲ್ಲೇ 5ನೇ ಸ್ಥಾನ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Aug 07, 2026 | 1:24 PM

Share

ಮಂಗಳೂರು ಆ. 7: ದೇಶದ ಸಾಗರ ಉತ್ಪನ್ನಗಳ (Seafood) ರಫ್ತು ವಲಯದಲ್ಲಿ ಕರ್ನಾಟಕ ರಾಜ್ಯವು ಭರ್ಜರಿ ಸಾಧನೆ ಮಾಡಿದೆ. 2025-26ನೇ ಹಣಕಾಸು ವರ್ಷದಲ್ಲಿ ರಾಜ್ಯದ ಸಾಗರ ಉತ್ಪನ್ನಗಳ ರಫ್ತು ಮೌಲ್ಯವು ಬರೋಬ್ಬರಿ ಶೇ. 56.1 ರಷ್ಟು ಏರಿಕೆಯಾಗಿದ್ದು, 5,371.85 ಕೋಟಿ ರೂ.ಗೆ ತಲುಪಿದೆ. 2024-25ರಲ್ಲಿ ಈ ಮೊತ್ತ 3,440.57 ಕೋಟಿ ರೂ. ಯಷ್ಟಿತ್ತು. ರಾಷ್ಟ್ರೀಯ ಸರಾಸರಿ ಬೆಳವಣಿಗೆ ದರಕ್ಕಿಂತಲೂ (ಶೇ. 18.4) ಕರ್ನಾಟಕದ ಸಾಧನೆ ಅತ್ಯಂತ ಹೆಚ್ಚಾಗಿದೆ.

ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಅಧಿಕೃತ ವರದಿಯ ಪ್ರಕಾರ, ಸಾಗರ ಉತ್ಪನ್ನಗಳ ರಫ್ತು ಮಾಡುವ ದೇಶದ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 6ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕರ್ನಾಟಕದಿಂದ ರಫ್ತಾದ ಸಾಗರ ಉತ್ಪನ್ನಗಳ ಪ್ರಮಾಣವು 2024-25ರಲ್ಲಿ 2,42,143 ಟನ್ ಇತ್ತು. ಇದು 2025-26ರಲ್ಲಿ ಶೇ. 39.3 ರಷ್ಟು ಹೆಚ್ಚಳಗೊಂಡು 3,37,239 ಟನ್‌ಗೆ ತಲುಪಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕವೇ ಅತ್ಯಧಿಕ ಶೇಕಡಾವಾರು ಬೆಳವಣಿಗೆ ದಾಖಲಿಸಿದೆ.

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಆಂಧ್ರಪ್ರದೇಶವು 23,765.11 ಕೋಟಿ ರೂ. (ಶೇ. 11.9 ಏರಿಕೆ) ಮೌಲ್ಯದ ಸಾಗರ ಉತ್ಪನ್ನ ರಫ್ತು ಮಾಡಿ ದೇಶದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೇರಳ ₹8,466.77 ಕೋಟಿ (ಶೇ. 22 ಏರಿಕೆ), ತಮಿಳುನಾಡು 7,660.48 ಕೋಟಿ ರೂ. (ಶೇ. 8.9 ಏರಿಕೆ) ಹಾಗೂ ತೆಲಂಗಾಣ 715.02 ಕೋಟಿ ರೂ.(ಶೇ. 16.2 ಏರಿಕೆ) ಮೌಲ್ಯದ ರಫ್ತು ಮಾಡಿದೆ.

ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ವಿವಾದ: 30 ಕೋಟಿ ರೂ. ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಭಕ್ತರ ವಿರೋಧ, ಶಾಸಕರ ನಡೆಗೆ ಆಕ್ರೋಶ

ಜಾಗತಿಕ ಮಟ್ಟದಲ್ಲಿ ಭಾರತದ ಸಾರ್ವಕಾಲಿಕ ದಾಖಲೆ:

2025-26ರಲ್ಲಿ ಭಾರತದ ಒಟ್ಟು ಸಾಗರ ಉತ್ಪನ್ನಗಳ ರಫ್ತು ಸಾರ್ವಕಾಲಿಕ ದಾಖಲೆಯಾದ 73,890.46 ಕೋಟಿ ರೂ.ಗೆ (19.72 ಲಕ್ಷ ಟನ್) ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 62,408.45 ಕೋಟಿ ರೂ.ಯಷ್ಟಿತ್ತು (16.98 ಲಕ್ಷ ಟನ್). ಭಾರತದ ರಫ್ತು ಬುಟ್ಟಿಯಲ್ಲಿ ಹಿಪ್ಪುಗಟ್ಟಿಸಿದ ಸೀಗಡಿಯೇ ಸಿಂಹಪಾಲನ್ನು ಕಾಯ್ದುಕೊಂಡಿದೆ. ಇದರ ರಫ್ತು ಮೌಲ್ಯ ಶೇ. 13.2 ರಷ್ಟು ಹೆಚ್ಚಳವಾಗಿ 49,037.93 ಕೋಟಿ ರೂ.ಗೆ (7.93 ಲಕ್ಷ ಟನ್) ತಲುಪಿದೆ. ಒಣ ಸಾಗರ ಉತ್ಪನ್ನಗಳ (Dried items) ರಫ್ತು ಪ್ರಮಾಣ ಶೇ. 62ಕ್ಕೂ ಹೆಚ್ಚು ಹೆಚ್ಚಳ ಕಂಡಿದ್ದು, ರಫ್ತು ಮೌಲ್ಯ ಬರೋಬ್ಬರಿ ಶೇ. 78 ರಷ್ಟು ಜಿಗಿದು 5,079.09 ಕೋಟಿ ರೂ.ಗೆ ತಲುಪಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Fri, 7 August 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ