AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Tips: ಬಿಸಿ ನೀರು ಅಥವಾ ಕೋಲ್ಡ್‌ ನೀರು; ಈ ಬೇಸಿಗೆಯಲ್ಲಿ ಯಾವ ನೀರು ಕುಡಿಯುವುದು ಸೂಕ್ತ?

ಬೇಸಿಗೆ ಕಾಲದ ಸುಡು ಬಿಸಿಲಿನಲ್ಲಿ ದಣಿವು, ಬಾಯಾರಿಕೆ ಸಾಮಾನ್ಯ. ಈ ಉರಿ ಬಿಸಿಲಿಗೆ ಹೊರಗಡೆ ಹೋಗಿ ಮನೆಗೆ ಬಂದ್ರೆ ಜನ ಒಂದಾ ಜ್ಯೂಸ್‌ ಕುಡಿತಾರೆ ಅಥವಾ ಫ್ರಿಡ್ಜ್‌ ಡೋರ್‌ ಓಪನ್‌ ಮಾಡಿ ಕೋಲ್ಡ್‌ ನೀರು ಕುಡಿತಾರೆ. ಫ್ರಿಡ್ಜ್‌ನ ಈ ತಂಪು ನೀರು ಕುಡಿದಾಗ ದೇಹ ತಂಪಾದ ಅನುಭವವಾಗುತ್ತದೆ. ಆದ್ರೆ ನಿಜಕ್ಕೂ ಈ ಸುಡು ಬೇಸಿಗೆಯಲ್ಲಿ ಕೋಲ್ಡ್‌ ನೀರು ಕುಡಿಯುವುದು ಸೂಕ್ತವೇ, ಇದು ದೇಹದ ಜಲಸಂಚಯನವನ್ನು ಕಾಪಾಡಿಕೊಳ್ಳಲು ಸಹಕಾರಿಯೇ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Summer Tips: ಬಿಸಿ ನೀರು ಅಥವಾ ಕೋಲ್ಡ್‌ ನೀರು; ಈ ಬೇಸಿಗೆಯಲ್ಲಿ ಯಾವ ನೀರು ಕುಡಿಯುವುದು ಸೂಕ್ತ?
Summer Tips
ಮಾಲಾಶ್ರೀ ಅಂಚನ್​
| Edited By: |

Updated on: Apr 20, 2025 | 8:22 AM

Share

ಈ ಬಿರು  ಬೇಸಿಗೆಯಲ್ಲಿನ ಬಿಸಿ ತಾಪಮಾನದಿಂದ ಶೆಕೆಯ ಜೊತೆ ಜೊತೆಗೆ ದೇಹದಲ್ಲಿ ನಿರ್ಜಲೀಕರಣ (dehydration), ಆಯಾಸದಂತಹ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತದೆ. ಹೌದು ಶೆಕೆಯಿಂದಾಗಿ ದೇಹ ಹೆಚ್ಚು ಬೆವರುವ  ಕಾರಣ, ಮೈಯಿಂದ ಬೆವರು ಹರಿದು ಹೋದಷ್ಟು ನಮ್ಮ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಇದನ್ನು ಸರಿದೂಗಿಸಲು ನೀರನ್ನು ಕುಡಿಯುವುದು ಅತ್ಯಗತ್ಯ. ಇಲ್ಲದಿದ್ದರೆ ನಿರ್ಜಲೀಕರಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆಯಾಗುವ ಕಾರಣ ಕೆಲವರು ಜ್ಯೂಸ್‌, ಎಳನೀರು, ತಂಪು ಪಾನೀಯಗಳನ್ನು ಕುಡಿದ್ರೆ, ಇನ್ನೂ ಕೆಲವರು ದಾಹ ತೀರಿಸಿಲು ಫ್ರಿಡ್ಜ್‌ನಲ್ಲಿರುವ ಕೋಲ್ಡ್‌ ನೀರನ್ನೇ ಗಟಗಟನೇ ಕುಡಿಯುತ್ತಾರೆ. ಈ ಕೋಲ್ಡ್‌ ನೀರು ಕುಡಿಯುವುದರಿಂದ ದೇಹದ ಜಲಸಂಚಯನವನ್ನು ಕಾಪಾಡಿಕೊಳ್ಳಬಹುದೇ? ಬಿಸಿ ನೀರು ಅಥವಾ ಕೋಲ್ಡ್‌ ನೀರು ಈ ಬೇಸಿಗೆಯಲ್ಲಿ ಯಾವ ನೀರು ಕುಡಿದರೆ ಸೂಕ್ತ ಎಂಬುದನ್ನು ಕಂಟೆಂಟ್‌ ಕ್ರಿಯೆಟರ್‌ ಸಯ್ಯದ್‌ ಶಾಯನ್‌ (Sayyaad Shayan) ಒಂದು ಪ್ರಯೋಗದ ಮೂಲಕ ತೋರಿಸಿಕೊಟ್ಟಿದ್ದಾರೆ.

ಈ ಬೇಸಿಗೆಯಲ್ಲಿ ಯಾವ ನೀರು ಕುಡಿಯುವುದು ಸೂಕ್ತ?

ಈ ಸುಡು ಬೇಸಿಗೆಯಲ್ಲಿ ಕೋಣೆಯ ತಾಪಮಾನ ಅಥವಾ ಬಿಸಿ ನೀರಿನ ಬದಲಾಗಿ ಜನರು ಹೆಚ್ಚಾಗಿ ಫ್ರಿಡ್ಜ್‌ನಲ್ಲಿರುವ ಕೋಲ್ಡ್‌ ನೀರನ್ನೇ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಈ ಬಿರು ಬೇಸಿಗೆಯಲ್ಲಿ ಕೋಲ್ಡ್‌ ನೀರು ನೀರು ಕುಡಿಯುವುದು ಅಷ್ಟು ಸೂಕ್ತವಲ್ಲ. ಯಾಕಂದ್ರೆ ಈ ಸಮಯದಲ್ಲಿ ದೇಹ ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುವುದರಿಂದ ಕೋಲ್ಡ್‌ ನೀರು ಕುಡಿದರೆ ಅದು ದೇಹವನ್ನು ಹೈಡ್ರೇಟ್‌ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಅದೇ ಬಿಸಿ ಅಥವಾ ಕೋಣೆಯ ಉಷ್ಣಾಂಶದ ನೀರನ್ನು ಕುಡಿಯುವುದರಿಂದ ದೇಹ ಬೇಗ ಹೈಡ್ರೇಟ್‌ ಆಗುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ಕೋಲ್ಡ್‌ ನೀರು ಬದಲು ಬಿಸಿ ಅಥವಾ ಕೋಣೆ ಉಷ್ಣಾಂಶದ ನೀರು ಕುಡಿಯುವುದೇ ಉತ್ತಮ. ಕಂಟೆಂಟ್‌ ಕ್ರಿಯೆಟರ್‌ ಸಯ್ಯದ್‌ ಶಾಯನ್‌ ಈ ಮಾಹಿತಿಯನ್ನು ಪ್ರಯೋಗದ ಮೂಲಕ ತಿಳಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ
Image
ಈ ಸಮಯಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್‌ ಮುಟ್ಟಬೇಡಿ
Image
ಕರ್ನಾಟಕದ ಈ ಜಿಲ್ಲೆಗಳು ಯಾವುದಕ್ಕೆ ಫೇಮಸ್ ಗೊತ್ತಾ? ಇಲ್ಲಿದೆ ಮಾಹಿತಿ
Image
ದವಡೆ ಸಮಸ್ಯೆಯನ್ನು 60 ಸೆಕೆಂಡುಗಳಲ್ಲಿ ಪರಿಹರಿಸಿದ ಚಾಟ್‌ಜಿಪಿಟಿ!
Image
ಯುನೆಸ್ಕೋದ ವಿಶ್ವ ನೋಂದಣಿ ಪಟ್ಟಿಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

ಇದನ್ನೂ ಓದಿ: ಸಿಹಿ ತಿಂಡಿಯಿಂದ ರೇಷ್ಮೆ ಸೀರೆಗಳವರೆಗೆ : ಕರ್ನಾಟಕದ ಈ ಜಿಲ್ಲೆಗಳು ಈ ಕಾರಣಕ್ಕೆ ಫೇಮಸ್ ನೋಡಿ

ವಿಡಿಯೋ ಇಲ್ಲಿದೆ ನೋಡಿ:

ಬೇಸಿಗೆಯಲ್ಲಿ ಕೋಲ್ಡ್‌ ನೀರಿನ ಬದಲು ಬಿಸಿ ಅಥವಾ ಕೋಣೆ ಉಷ್ಣಾಂಶದ ನೀರನ್ನು ಏಕೆ ಕುಡಿಬೇಕು:

  • ತಣ್ಣೀರು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮತ್ತು ಇದು ದೇಹವನ್ನು ಹೈಡ್ರೇಟ್‌ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.
  • ಆದರೆ ಬಿಸಿ ನೀರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪ್ರಯೋಜನಕಾರಿಯಾಗಿದೆ.
  • ತೂಕ ನಿಯಂತ್ರಣ, ಮಧುಮೇಹ ಮತ್ತು ಕಫ ಇತ್ಯಾದಿ ಆರೋಗ್ಯ ಸಮಸ್ಯೆಗಳು ಇರುವ ಸಂದರ್ಭದಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದು ಪ್ರಯೋಜನಕಾರಿ.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಏರ್‌ಪೋರ್ಟ್‌ನಲ್ಲೇ ಹೈಟೆಕ್ ಭಿಕ್ಷಾಟನೆ!
ಏರ್‌ಪೋರ್ಟ್‌ನಲ್ಲೇ ಹೈಟೆಕ್ ಭಿಕ್ಷಾಟನೆ!
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್