AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Laundry Tips: ಮಳೆಗಾಲದಲ್ಲಿ ಒಗೆದ ಬಟ್ಟೆಗಳ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ತಂತ್ರ ಪಾಲಿಸಿ

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದೇ ಒಂದು ದೊಡ್ಡ ಸಮಸ್ಯೆ. ಹೌದು ಬಿಸಿಲಿನ ಕೊರತೆ, ಆರ್ದ್ರತೆಯ ಕಾರಣ ಬಟ್ಟೆ ಸರಿಯಾಗಿ ಒಣಗುವುದಿಲ್ಲ. ಹೀಗೆ ಸರಿಯಾಗಿ ಒಣಗದಿದ್ದರೆ, ಚೆನ್ನಾಗಿ ಒಗೆದ ಬಟ್ಟೆಗಳು ಸಹ ಕೊಳೆತ ವಾಸನೆ ಬರಲು ಪ್ರಾರಂಭಿಸುತ್ತವೆ. ಈ ಅಹಿತಕರ ವಾಸನೆಯನ್ನು ಹೋಗಲಾಡಿಸಲು ಹಾಗೂ ಬಟ್ಟೆ ವಾಸನೆ ಬರದಂತೆ ತಡೆಯಲು ಬಯಸಿದರೆ ಈ ಕೆಲವೊಂದು ಪದಾರ್ಥಗಳನ್ನು ಬಳಸಿ ಡ್ರೆಸ್‌ ವಾಶ್‌ ಮಾಡಿ.

Monsoon Laundry Tips: ಮಳೆಗಾಲದಲ್ಲಿ ಒಗೆದ ಬಟ್ಟೆಗಳ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ತಂತ್ರ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 06, 2026 | 7:32 PM

Share

ಬಟ್ಟೆಗಳನ್ನು ಒಣಗಿಸುವುದು ಮತ್ತು ಒಗೆದ ಬಟ್ಟೆಗಳು ವಾಸನೆ (smell) ಬರದಂತೆ, ಫ್ರೆಶ್‌ ಆಗಿ ಇಟ್ಟುಕೊಳ್ಳುವುದು ಮಳೆಗಾಲದಲ್ಲಿ ದೊಡ್ಡ ಸವಾಲಿನ ಕೆಲಸವಾಗಿದೆ. ಬಿಸಿಲಿನ ಕೊರತೆ, ಮತ್ತು ಗಾಳಿಯಲ್ಲಿ ಅತಿಯಾದ ಆರ್ದ್ರತೆಯಿಂದಾಗಿ, ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಕೆಲವೊಮ್ಮೆ, ಉತ್ತಮ ಡಿಟರ್ಜೆಂಟ್‌ನಿಂದ ಡ್ರೆಸ್‌ ವಾಶ್‌ ಮಾಡಿದ್ರೂ, ಬಟ್ಟೆಗಳಿಂದ ದುರ್ವಾಸನೆ ಹೊರಸೂಸಲು ಪ್ರಾರಂಭಿಸುತ್ತವೆ. ಈ ವಾಸನೆ ಬರುವ ಬಟ್ಟೆಯನ್ನು ಧರಿಸಿದರೆ ಖಂಡಿತ ಮುಜುಗರ ಉಂಟಾಗುತ್ತದೆ. ಆದ್ದರಿಂದ ಈ ಕೆಲವೊಂದು ಪದಾರ್ಥಗಳ ಸಹಾಯದಿಂದ ಬಟ್ಟೆ ಒಗೆಯುವ ಮೂಲಕ ಒಗೆದ ಬಟ್ಟೆಗಳು ವಾಸನೆ ಬರದಂತೆ, ತಾಜಾ ಮತ್ತು ಪರಿಮಳಯುಕ್ತವಾಗಿರುವಂತೆ ನೋಡಿಕೊಳ್ಳಬಹುದು.

ಒಗೆದ ಬಟ್ಟೆಗಳು ವಾಸನೆ ಬರದಂತೆ ತಡೆಯಲು  ಈ ಟಿಪ್ಸ್‌ ಪಾಲಿಸಿ:

ಬಿಳಿ ವಿನೆಗರ್ ಬಳಕೆ: ಬಿಳಿ ವಿನೆಗರ್ ಬಟ್ಟೆಗಳಿಂದ ಕೊಳೆತ ವಾಸನೆಯನ್ನು ತೆಗೆದುಹಾಕಲು ತುಂಬಾನೇ ಸಹಕಾರಿಯಾಗಿದೆ. ಬಟ್ಟೆಗಳನ್ನು ಒಗೆಯುವಾಗ, ಕೊನೆಯಲ್ಲಿ ವಾಶ್‌ಟಬ್ ಅಥವಾ ಬಕೆಟ್‌ಗೆ ಸ್ವಲ್ಪ ಬಿಳಿ ವಿನೆಗರ್ ಸೇರಿಸಿ ಅದರಲ್ಲಿ ಸ್ವಲ್ಪ ಹೊತ್ತು ಬಟ್ಟೆಯನ್ನು ನೆನೆಸಿಡಿ. ಇದು ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಒಣಗಿದ ನಂತರ, ವಿನೆಗರ್ ವಾಸನೆ ಮಾಯವಾಗುತ್ತದೆ, ಬಟ್ಟೆಗಳು ತಾಜಾವಾಗಿರುತ್ತವೆ.

ಅಡಿಗೆ ಸೋಡಾ: ಅಡಿಗೆ ಸೋಡಾ ತನ್ನದೇ ಆದ ವಾಸನೆಯನ್ನು ಹೊಂದಿಲ್ಲದಿದ್ದರೂ, ಇದು ಬೆವರು, ತೇವಾಂಶ ಮತ್ತು ಬಟ್ಟೆಗಳಿಂದ ಇತರ ವಾಸನೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಶಿಲೀಂಧ್ರಗಳು ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ವಾಸನೆಯನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಬಟ್ಟೆ ಒಗೆಯುವ ಡಿಟೆರ್ಜಂಟ್‌ಗೆ  ಸ್ವಲ್ಪ ಅಡುಗೆ ಸೋಡಾ ಸೇರಿಸುವುದರಿಂದ ಹೊಲಸು ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು.

ನಿಂಬೆ ರಸ: ಲಾಂಡ್ರಿ ಡಿಟರ್ಜೆಂಟ್‌ಗೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಅದರಲ್ಲಿ ಬಟ್ಟೆಗಳನ್ನು ಒಗೆಯುವುದರಿಂದ ಬಟ್ಟೆಗಳು ವಾಸನೆ ಬರುವುದನ್ನು ತಡೆಯಬಹುದು. ನಿಂಬೆಯ ಆಮ್ಲೀಯ ಅಂಶ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ಕೊಲ್ಲುತ್ತದೆ, ಬಟ್ಟೆ ವಾಸನೆ  ಬರದಂತೆ ತಡೆಯುತ್ತದೆ.

ಬೇವಿನ ಎಲೆ: ನಿಮ್ಮ ವಾರ್ಡ್ರೋಬ್‌ನಲ್ಲಿ ಬೇವಿನ ಎಲೆಗಳನ್ನು ಇಟ್ಟುಕೊಳ್ಳಬಹುದು. ಇದು ಮಳೆಗಾಲದಲ್ಲಿ ಬಟ್ಟೆಗಳ ದೀರ್ಘಕಾಲೀನ ಒದ್ದೆಯಾದ ವಾಸನೆ ಮತ್ತು ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆಯನ್ನು ತಡೆಯುತ್ತದೆ.

ಇದನ್ನೂ ಓದಿ: ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಲು, ಡ್ರೆಸ್‌ ವಾಶ್‌ ಮಾಡುವಾಗ ಟಿಪ್ಸ್‌ ಪಾಲಿಸಿ

ಸಾರಭೂತ ತೈಲಗಳ ಬಳಕೆ: ಲ್ಯಾವೆಂಡರ್, ನಿಂಬೆ, ಮಲ್ಲಿಗೆ ಅಥವಾ ಶ್ರೀಗಂಧದಂತಹ ಸಾರಭೂತ ತೈಲಗಳು ಸಹ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದಕ್ಕಾಗಿ  ಸಣ್ಣ ಕರವಸ್ತ್ರದಂತಹ ಬಟ್ಟೆಯ ಮೇಲೆ 2-3 ಹನಿ ಸಾರಭೂತ ತೈಲವನ್ನು ಸುರಿಯಿರಿ ಮತ್ತು ಅದನ್ನು ಒಗೆದ ಬಟ್ಟೆಗಳ ನಡುವಿನ ಅಂತರದಲ್ಲಿ ಇರಿಸಿ. ಕರವಸ್ತ್ರದ ಬದಲಿಗೆ ಹತ್ತಿ ಉಂಡೆಯನ್ನು ಸಹ ಬಳಸಬಹುದು. ಇದು ವಾಸನೆ ಮತ್ತು ಬ್ಯಾಕ್ಟೀರಿಯಾ ಎರಡನ್ನೂ ತೆಗೆದುಹಾಕುತ್ತದೆ. ಇದಲ್ಲದೆ ಲ್ಯಾವೆಂಡರ್, ಗುಲಾಬಿ ಅಥವಾ ನಿಂಬೆ ಪರಿಮಳದ ಸಣ್ಣ ಸ್ಯಾಚೆಟ್‌ಗಳನ್ನು  ಅಥವಾ ಈ ಸಾರಭೂತ ತೈಲವನ್ನು ಹತ್ತಿ ಉಂಡೆಯಲ್ಲಿ ಅದ್ದಿ ನಿಮ್ಮ ವಾರ್ಡ್ರೋಬ್‌ನಲ್ಲಿ ಇಡಬಹುದು.

ಒಗೆದ ಬಟ್ಟೆ ವಾಸನೆ ಬರದಂತೆ ತಡೆಯಲು  ಈ ಕ್ರಮಗಳನ್ನು ಸಹ ಅನುಸರಿಸಿ:

  • ಬಟ್ಟೆಗಳು ಸಂಪೂರ್ಣವಾಗಿ ಒಣಗಿದ ನಂತರವೇ ಅವುಗಳನ್ನು ಮಡಚಿಡಿ.
  • ಒಗೆದ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ಹೆಚ್ಚು ಹೊತ್ತು ಬಿಡಬೇಡಿ.
  • ಮಳೆಗಾಲದಲ್ಲಿ, ದಪ್ಪ ಹತ್ತಿ ಅಥವಾ ದಪ್ಪ ಬಟ್ಟೆಗಳಿಗಿಂತ ಬೇಗನೆ ಒಣಗುವ ಬಟ್ಟೆಗಳನ್ನು ಧರಿಸುವುದು ಉತ್ತಮ. ಹಗುರವಾದ, ಬೇಗನೆ ಒಣಗುವ ಬಟ್ಟೆಗಳು ವಾಸನೆಯನ್ನು ಉಂಟುಮಾಡುವ ಸಾಧ್ಯತೆ ಕಡಿಮೆ.
  • ಹೆಚ್ಚು ಡಿಟರ್ಜೆಂಟ್ ಬಳಸುವುದರಿಂದ ಬಟ್ಟೆಗಳು ಸ್ವಚ್ಛವಾಗುತ್ತವೆ ಹೆಚ್ಚಿನವರು ಭಾವಿಸುತ್ತಾರೆ, ಆದರೆ ಇದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾದ ತ್ವರಿತ ಬೆಳವಣಿಗೆಗೆ ಕಾರಣವಾಗಬಹುದು. ಹಾಗಾಗಿ ಬಟ್ಟೆಗಳನ್ನು ಒಗೆಯುವಾಗ ಸ್ವಲ್ಪ ಪ್ರಮಾಣದ ಡಿಟರ್ಜೆಂಟ್ ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us