AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

White Clothes Cleaning Tips: ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಲು, ಡ್ರೆಸ್‌ ವಾಶ್‌ ಮಾಡುವಾಗ ಈ ಟಿಪ್ಸ್‌ ಪಾಲಿಸಿ

ಬಿಳಿ ಬಣ್ಣದ ಬಟ್ಟೆಗಳು ಬಹು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ ಅವುಗಳ ನಿರ್ವಹಣೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ನಿಮ್ಮ ನೆಚ್ಚಿನ ಬಿಳಿ ಬಟ್ಟೆ ಹಳದಿ ಬಣ್ಣಕ್ಕೆ ತಿರುಗದಂತೆ ನೋಡಿಕೊಳ್ಳಲು ಹಾಗೂ ಬಿಳಿ ಬಣ್ಣದ ಬಟ್ಟೆಯ ಮೇಲಿನ ಹಳದಿ ಕಲೆಗಳನ್ನು ತೆಗೆದು ಹಾಕಲು ಈ ಕೆಲವೊಂದು ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

White Clothes Cleaning Tips: ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಲು, ಡ್ರೆಸ್‌ ವಾಶ್‌ ಮಾಡುವಾಗ ಈ ಟಿಪ್ಸ್‌ ಪಾಲಿಸಿ
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 04, 2026 | 7:58 PM

Share

ಬಿಳಿ ಬಟ್ಟೆಗಳು (white clothes) ಚೆನ್ನಾಗಿ ಕಾಣುವುದೇನೋ ನಿಜ, ಆದರೆ ಅದರ ಹೊಳಪನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟ. ಹೌದು ಸರಿಯಾಗಿ ನಿರ್ವಹಣೆ ವಹಿಸದಿದ್ದರೆ ಬಿಳಿ ಬಣ್ಣದ ಬಟ್ಟೆಗಳು ಸ್ವಲ್ಪ ದಿನದ ಬಳಿಕ ತನ್ನ ಹೊಳಪನ್ನು ಕಳೆದುಕೊಂಡು, ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೀಗಿರುವಾಗ ಬಿಳಿ ಬಟ್ಟೆಗಳು ಯಾವಾಗಲೂ ಹೊಸದಾಗಿ ಕಾಣುವಂತೆ ಮಾಡಲು ಅವುಗಳನ್ನು ಸರಿಯಾಗಿ ತೊಳೆಯುವುದು ಅತ್ಯಗತ್ಯ. ಇದಕ್ಕಾಗಿ ಕೆಲವರು ಬ್ಲೀಚ್‌ ಬಳಸುತ್ತಾರೆ. ಈ ಬ್ಲೀಚ್‌ ಕಳೆಗಳನ್ನು ತೆಗೆದುಹಾಕಿದರೂ ಬಟ್ಟೆಯನ್ನು ಒರಟುಗೊಳಿಸುತ್ತದೆ. ಆದ್ದರಿಂದ ಬಟ್ಟೆ ಒಗೆಯುವ ಸಂದರ್ಭದಲ್ಲಿ ಈ ಕೆಲವು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುವುದನ್ನು ತಡೆಯಬಹುದು.

ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುವುದು ಹೇಗೆ?

ಉಪ್ಪು: ಬಿಳಿ ಬಟ್ಟೆಗಳನ್ನು ಒಗೆಯುವ ಮುನ್ನ 1 ರಿಂದ 2 ಟೀ ಚಮಚ ಉಪ್ಪನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಬಿಳಿ ಬಟ್ಟೆಗಳನ್ನು ಈ ನೀರಿನಲ್ಲಿ 30 ರಿಂದ 40 ನಿಮಿಷಗಳ ಕಾಲ ನೆನೆಸಿ, ನಂತರ ಡಿಟರ್ಜೆಂಟ್‌ನಿಂದ ಬಿಳಿ ಬಟ್ಟೆಯನ್ನು ತೊಳೆಯಿರಿ. ಈ ವಿಧಾನವು ಬಿಳಿ ಬಟ್ಟೆ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.

ವಿನೆಗರ್: ಬಟ್ಟೆ ಒಗೆಯುವಾಗ ನೀರಿನಲ್ಲಿ 1/2 ಟೀ ಚಮಚ ವಿನೆಗರ್ ಬೆರೆಸಿ. ಇದರಿಂದ ಬಟ್ಟೆಗಳ ಬಿಳಿ ಬಣ್ಣ ಮಾಸುವುದಿಲ್ಲ ಜೊತೆಗೆ ಇದು ಬೆವರಿನ ವಾಸನೆ, ಕಲೆಗಳನ್ನು ಸಹ ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗಲೂ ನೀವು ವಿನೆಗರ್ ಸೇರಿಸಬಹುದು.

ಹೈಡ್ರೋಜನ್ ಪೆರಾಕ್ಸೈಡ್: ಬಿಳಿ ಬಟ್ಟೆಗಳ ಹೊಳಪು ಮಾಸದಂತೆ ತಡೆಯಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಬಹುದು. ಇದು ಕಲೆಗಳನ್ನು ತೆಗೆದುಹಾಕುವುದಲ್ಲದೆ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಇದನ್ನು ಮಾಡಲು, ಅರ್ಧ ಟೀಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಚೆನ್ನಾಗಿ ಬೆರೆಸಿ, ನಂತರ ಅದರಲ್ಲಿ ಬಿಳಿ ಬಟ್ಟೆಗಳನ್ನು ನೆನೆಸಿ ತೊಳೆಯಿರಿ.

ಇದನ್ನೂ ಓದಿ: ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲು ಜಸ್ಟ್‌ ಈ ಸರಳ ಮಾರ್ಗಗಳನ್ನು ಅನುಸರಿಸಿ

ನಿಂಬೆ ರಸ: ಬಿಳಿ ಬಟ್ಟೆಗಳ ಹೊಳಪನ್ನು ವರ್ಷಗಳ ಕಾಲ ಕಾಪಾಡಿಕೊಳ್ಳಲು ನಿಂಬೆರಸ ಕೂಡ ಬಹಳ ಪ್ರಯೋಜನಕಾರಿ ಪದಾರ್ಥವಾಗಿದೆ.  2 ರಿಂದ 3 ಚಮಚ ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ, ಈ ನೀರಿನಲ್ಲಿ ಬಟ್ಟೆಗಳನ್ನು 1-2 ಗಂಟೆಗಳ ಕಾಲ ನೆನೆಸಿಡಿ. ನಂತರ ಅವುಗಳನ್ನು ಡಿಟರ್ಜೆಂಟ್‌ನಿಂದ ತೊಳೆಯಿರಿ. ಇದು ವಾಸನೆಯನ್ನು ತೆಗೆದುಹಾಕುವುದು ಮಾತ್ರವಲ್ಲ ಬಟ್ಟೆ ಹಳದಿಗಟ್ಟುವುದನ್ನು ತಡೆಯುತ್ತದೆ.

ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ಬಟ್ಟೆಗಳ ವಾಸನೆಯನ್ನು ಹೋಗಲಾಡಿಸುವುದಲ್ಲದೆ, ಬಿಳಿ ಬಟ್ಟೆಗಳ ಬಣ್ಣ ದೀರ್ಘಕಾಲದವರೆಗೆ ಮಾಸದಂತೆ ತಡೆಯುತ್ತದೆ. ಒಂದು ಬಕೆಟ್‌ ನೀರಿನಲ್ಲಿ 1-2 ಟೀ ಚಮಚ ಅಡಿಗೆ ಸೋಡಾವನ್ನು ಬೆರೆಸಿ. ಬಿಳಿ ಬಟ್ಟೆಯನ್ನು  ಅದರಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಸೋಪಿನಿಂದ ತೊಳೆಯಿರಿ. ಇದರಿಂದ ಕಲೆಗಳು ಮಾಯವಾಗುತ್ತದೆ, ಹೊಳಪು ಕೂಡ ಕಳೆದುಹೋಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು