AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದಾಖಲೆಗಳು ನಿಮ್ಮ ಬಳಿಯಿದ್ರೆ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಸುಲಭ 

ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಮುಖ್ಯ. ಇದು ಆಸ್ತಿ ಮಾಲೀಕತ್ವದ ಕಾನೂನಾತ್ಮಕ ಸಾಕ್ಷ್ಯ, ಸರ್ಕಾರಿ ಸಬ್ಸಿಡಿ ಪಡೆಯಲು, ಬ್ಯಾಂಕ್‌ ಸಾಲಗಳಿಗೆ ವಿಳಾಸದ ಪುರಾವೆಯಾಗಿದೆ. ಆದರೆ ಹೆಸರು ಬದಲಾವಣೆ ಮಾಡಿಕೊಳ್ಳಲು ಮುನ್ನ ಬಾಕಿಯಿರುವ ಕರೆಂಟ್ ಬಿಲ್‌ ಮೊತ್ತವನ್ನು ಪಾವತಿಸಿ. ಆ ಬಳಿಕ ಮೆಸ್ಕಾಂ, ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ಮುಂದಿನ ತಿಂಗಳಿನಿಂದಲೇ ನಿಮ್ಮ ಹೆಸರಿನಲ್ಲಿ ಕರೆಂಟ್ ಬಿಲ್ ಬರುತ್ತದೆ.

ಈ ದಾಖಲೆಗಳು ನಿಮ್ಮ ಬಳಿಯಿದ್ರೆ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಸುಲಭ 
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Aug 07, 2026 | 12:45 PM

Share

ಮುಖ್ಯಾಂಶಗಳು

  • ಕರೆಂಟ್ ಬಿಲ್‌ನ್ನು ನಿಮ್ಮ ಹೆಸರಿನಲ್ಲಿ ಮಾಡಿಕೊಳ್ಳುವುದು ಮುಖ್ಯ
  • ಕರ್ನಾಟಕದ ನಿವಾಸಿಯಾಗಿದ್ದರೆ ಮೆಸ್ಕಾಂ, ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ
  • ಈ ಪ್ರಮುಖ ದಾಖಲೆಗಳನ್ನು ನೀಡಿದ್ರೆ ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಿ ಆಗುತ್ತದೆ
ಹೊಸ ಮನೆ ಖರೀದಿಸಿದಾಗ ಮನೆ ದಾಖಲೆಗಳನ್ನು ಮಾತ್ರವಲ್ಲ ಕರೆಂಟ್ ಬಿಲ್‌ನ್ನು (Electricity Bill)  ನಿಮ್ಮ ಹೆಸರಿನಲ್ಲಿ ಮಾಡಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಸಮಸ್ಯೆಯಾಗಬಹುದು. ಕರೆಂಟ್ ಬಿಲ್ ನಿಮ್ಮ ತಂದೆ ಅಥವಾ ನೀವು ಯಾರಿಂದ ಮನೆ ಖರೀದಿ ಮಾಡಿದ್ದೀರಾ ಅವರ ಹೆಸರಿನಲ್ಲಿದ್ದರೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಂಪನಿ ಅಂದರೆ ನೀವು ಕರ್ನಾಟಕದ ನಿವಾಸಿಯಾಗಿದ್ದರೆ ಮೆಸ್ಕಾಂ, ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಹಾಗೂ ದಾಖಲೆ ನೀಡಿದರೆ ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ತಿಳಿಯಿರಿ.

ಕರೆಂಟ್ ಬಿಲ್‌ನಲ್ಲಿನ ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳು

  •  ಹಳೆಯ ಕರೆಂಟ್ ಬಿಲ್
  • ಆಸ್ತಿ ತೆರಿಗೆ ಪಾವತಿ ರಶೀದಿ
  • ಆಧಾರ್ ಕಾರ್ಡ್
  • ಬಾಂಡ್ ಪೇಪರ್ ಮೇಲಿನ ಇಂಡೆಮ್ನಿಟಿ ಬಾಂಡ್‌
  • ಆಸ್ತಿ ಖರೀದಿ ಪತ್ರ ಅಥವಾ ಖಾತಾ ಪ್ರಮಾಣಪತ್ರ

ಕರೆಂಟ್ ಬಿಲ್‌ನಲ್ಲಿನ ಹೆಸರು ಬದಲಾವಣೆ ಮಾಡುವುದು ಹೇಗೆ?

ಹಂತ 1: ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಚೇರಿಯಿಂದ ಇಲ್ಲವಾದ್ರೆ ಆನ್‌ಲೈನ್ ಮೂಲಕ ಹೆಸರು ಬದಲಾವಣೆ ಅರ್ಜಿ ಪಡೆದು ವಿವರಗಳನ್ನು ಭರ್ತಿ ಮಾಡಿ.
ಹಂತ 2: ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳ ಜೆರಾಕ್ಸ್ ಅಥವಾ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ.
ಹಂತ 3: ಕಚೇರಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಿಗದಿತ ಪ್ರಕ್ರಿಯೆ ಶುಲ್ಕ ಪಾವತಿ ಮಾಡಿ.
ಹಂತ 4: ಪರಿಶೀಲನೆ ಬಳಿಕ ಮುಂದಿನ ತಿಂಗಳ ಬಿಲ್ ನಲ್ಲಿ ಹೊಸ ಹೆಸರು ಆಪ್ ಡೇಟ್ ಆಗಿರುತ್ತದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಿರುವುದು ಯಾಕೆ ಮುಖ್ಯ?
ಉತ್ತರ: ಕರೆಂಟ್ ಬಿಲ್ ಆಸ್ತಿ ಮಾಲೀಕತ್ವದ ಕಾನೂನಾತ್ಮಕ ಸಾಕ್ಷ್ಯ, ಸರ್ಕಾರಿ ಸಬ್ಸಿಡಿ ಪಡೆಯಲು, ಬ್ಯಾಂಕ್‌ ಸಾಲಗಳಿಗೆ ವಿಳಾಸದ ಪುರಾವೆಯಾಗಿದೆ. ಹೀಗಾಗಿ ನಿಮ್ಮ ಹೆಸರಿನಲ್ಲಿ ಇರುವುದು ಮುಖ್ಯವಾಗಿದೆ.
ಪ್ರಶ್ನೆ: ಕರೆಂಟ್ ಬಿಲ್ ನಿಮ್ಮ ಹೆಸರಿಗೆ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?
ಉತ್ತರ: ಕರೆಂಟ್ ಬಿಲ್ ಹೆಸರು ಬದಲಾವಣೆ ಮಾಡಲು ಹಳೆ ಕರೆಂಟ್ ಬಿಲ್, ಆಸ್ತಿ ಖರೀದಿ ಪತ್ರ ಅಥವಾ ಖಾತಾ ಪ್ರಮಾಣಪತ್ರ, ಆಸ್ತಿ ತೆರಿಗೆ ಪಾವತಿ ರಶೀದಿ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಬಾಂಡ್ ಪೇಪರ್ ಮೇಲಿನ ಇಂಡೆಮ್ನಿಟಿ ಬಾಂಡ್ ಈ ದಾಖಲೆಗಳು ಬೇಕು.
ಪ್ರಶ್ನೆ: ಕರೆಂಟ್ ಬಿಲ್ ನಲ್ಲಿನ ಹೆಸರು ಬದಲಾವಣೆ ಮಾಡುವುದು ಹೇಗೆ?
ಉತ್ತರ: ನೀವು ಕರ್ನಾಟಕದ ನಿವಾಸಿಯಾಗಿದ್ದರೆ ಮೆಸ್ಕಾಂ, ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಹಾಗೂ ದಾಖಲೆ ನೀಡಿದ್ರೆ ಕರೆಂಟ್ ಬಿಲ್ ನಿಮ್ಮ ಹೆಸರಿನಲ್ಲಿ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿ
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: AI ವೀಡಿಯೋ ವೈರಲ್!
ತೆಂಗಿನ ಮರವನ್ನೇ ಹೊತ್ತೊಯ್ದ ಪುಂಡಾನೆಗಳು: AI ವೀಡಿಯೋ ವೈರಲ್!
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಆಷಾಢ ಮಾಸದ ಆಡಿ ಶುಕ್ರವಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಮಾಸದ ಆಡಿ ಶುಕ್ರವಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ