VIDEO: ಭರ್ಜರಿ ಪ್ರದರ್ಶನ… ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
PSL 2025: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಶಾಹೀನ್ ಶಾ ಅಫ್ರಿದಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಲಾಹೋರ್ ಖಲಂದರ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಶಾಹೀನ್ ಕರಾಚಿ ಕಿಂಗ್ಸ್ ವಿರುದ್ಧ ಅತ್ಯುತ್ತಮ ದಾಳಿ ಸಂಘಟಿಸಿದ್ದರು. ಈ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಇದೀಗ ಲಾಹೋರ್ ಖಲಂದರ್ಸ್ ಫ್ರಾಂಚೈಸಿ ಶಾಹೀನ್ ಅಫ್ರಿದಿಗೆ ವಿಶೇಷ ಉಡುಗೊರೆ ನೀಡಿದೆ.
ಪಾಕಿಸ್ತಾನ್ ಸೂಪರ್ ಲೀಗ್ (PSL 2025) ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ಒಂದೆಡೆ ಕರಾಚಿ ಕಿಂಗ್ಸ್ ಫ್ರಾಂಚೈಸಿ ಪಂದ್ಯ ಶ್ರೇಷ್ಠ ಆಟಗಾರನಿಗೆ ಹೇರ್ ಡ್ರೈಯರ್ ನೀಡಿ ಸುದ್ದಿಯಾದರೆ, ಮತ್ತೊಂದೆಡೆ ಲಾಹೋರ್ ಖಲಂದರ್ಸ್ (Lahore Qalandars) ಫ್ರಾಂಚೈಸಿ ತನ್ನ ತಂಡದ ನಾಯಕನಿಗೆ ಚಿನ್ನ ಲೇಪಿತ ಐಪೋನ್ ನೀಡಿ ಗಮನ ಸೆಳೆದಿದೆ.
ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಖುಷಿಯಲ್ಲಿ ಲಾಹೋರ್ ಖಲಂದರ್ಸ್ ಫ್ರಾಂಚೈಸಿಯು ನಾಯಕ ಶಾಹೀನ್ ಶಾ ಅಫ್ರಿದಿಗೆ 24 ಕ್ಯಾರೆಟ್ ಚಿನ್ನ ಲೇಪಿತ ಐಫೋನ್ ಅನ್ನು ಉಡುಗೊರೆ ನೀಡಿದ್ದಾರೆ. ಈ ಉಡುಗೊರೆಯ ವಿಡಿಯೋವನ್ನು ಲಾಹೋರ್ ಖಲಂದರ್ಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಶಾಹೀನ್ ಶಾ ಅಫ್ರಿದಿ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಲಾಹೋರ್ ಖಲಂದರ್ಸ್ ಆಡಿರುವ ಮೂರು ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದೆ. ಈ ಗೆಲುವಿನಿಂದ ಉತ್ಸುಕರಾಗಿರುವ ಲಾಹೋರ್ ಖಲಂದರ್ಸ್ ಫ್ರಾಂಚೈಸಿ ತಂಡದ ಭರ್ಜರಿ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ವಿವಿಧ ರೀತಿ ಉಡುಗೊರೆಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ.