ಕೆಂಪು ಡ್ರೆಸ್, ಕೈಯಲ್ಲಿ ಜಪಮಾಲೆ; ತೆರೆದ ಶವಪೆಟ್ಟಿಗೆಯಲ್ಲಿ ಮಲಗಿದ ಪೋಪ್ ಫ್ರಾನ್ಸಿಸ್ ಮೊದಲ ಫೋಟೋ ಇಲ್ಲಿದೆ
ನಿನ್ನೆ ಇಹಲೋಕ ತ್ಯಜಿಸಿದ ಪೋಪ್ ಫ್ರಾನ್ಸಿಸ್ ಅವರ ಸಾವಿನ ನಂತರ ಮೊದಲ ಫೋಟೋಗಳನ್ನು ವ್ಯಾಟಿಕನ್ ಬಿಡುಗಡೆ ಮಾಡಿದೆ. ಅವರ ಶವಪೆಟ್ಟಿಗೆಯ ಎದುರು ವ್ಯಾಟಿಕನ್ ಸಿಟಿ ವಿದೇಶಾಂಗ ಕಾರ್ಯದರ್ಶಿ ಪ್ರಾರ್ಥಿಸುತ್ತಿರುವುದನ್ನು ನೋಡಬಹುದು. ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆಯಲಿದೆ. ಪೋಪ್ ಫ್ರಾನ್ಸಿಸ್ ಅವರ ಸಾರ್ವಜನಿಕ ದರ್ಶನವು ಬುಧವಾರ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಪ್ರಾರಂಭವಾಗಲಿದೆ.

ವ್ಯಾಟಿಕನ್ ಸಿಟಿ, ಏಪ್ರಿಲ್ 22: ನಿನ್ನೆ (ಏಪ್ರಿಲ್ 21) ನಿಧನರಾದ ಪೋಪ್ ಫ್ರಾನ್ಸಿಸ್ (Pope Francis) ಅವರ ಮೊದಲ ಫೋಟೋಗಳನ್ನು ವ್ಯಾಟಿಕನ್ ಬಿಡುಗಡೆ ಮಾಡಿದೆ. ಈ ಫೋಟೋಗಳಲ್ಲಿ ಅವರು ಮರದ ಶವಪೆಟ್ಟಿಗೆಯಲ್ಲಿ ಕೆಂಪು ವಸ್ತ್ರದೊಂದಿಗೆ, ಕೈಯಲ್ಲಿ ಜಪಮಾಲೆ ಹಿಡಿದ ಭಂಗಿಯಲ್ಲಿ ಮಲಗಿರುವುದನ್ನು ನೋಡಬಹುದು. ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಪೋಪ್ ಫ್ರಾನ್ಸಿಸ್ ಅವರ ಶವ ಪೆಟ್ಟಿಗೆಯ ಎದುರು ಪ್ರಾರ್ಥಿಸುತ್ತಿರುವುದನ್ನು ನೋಡಬಹುದು. ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ವ್ಯಾಟಿಕನ್ ತಿಳಿಸಿದೆ.
ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆಯಲಿದೆ. ಪೋಪ್ ಫ್ರಾನ್ಸಿಸ್ ಅವರ ಸಾರ್ವಜನಿಕ ದರ್ಶನವು ಬುಧವಾರ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಪ್ರಾರಂಭವಾಗಲಿದೆ ಎಂದು ಕಾರ್ಡಿನಲ್‌ಗಳು ನಿರ್ಧರಿಸಿದ್ದಾರೆ. ಅವರ ಶವಪೆಟ್ಟಿಗೆಯನ್ನು ಅವರು ವಾಸಿಸುತ್ತಿದ್ದ ವ್ಯಾಟಿಕನ್ ಹೋಟೆಲ್‌ನಿಂದ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು.
ಇದನ್ನೂ ಓದಿ: Pope Francis passes away: ಪೋಪ್ ಫ್ರಾನ್ಸಿಸ್ ನಿಧನ, ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಇನ್ನಿಲ್ಲ
ಪೋಪ್ ಫ್ರಾನ್ಸಿಸ್ ಅವರ ಮರಣದ ನಂತರ ಮೊದಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸಭೆ ಸೇರಿದ ಕಾರ್ಡಿನಲ್ಸ್ ಕಾಲೇಜಿನ ಆದೇಶದ ಮೇರೆಗೆ, ಧಾರ್ಮಿಕ ವಿಧಿವಿಧಾನಗಳ ಮುಖ್ಯಸ್ಥ ಆರ್ಚ್‌ಬಿಷಪ್ ಡಿಯಾಗೋ ರಾವೆಲ್ಲಿ ಅವರು ಮೆರವಣಿಗೆಗೆ ರೂಬ್ರಿಕ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಮೆರವಣಿಗೆ ಮತ್ತು ಧಾರ್ಮಿಕ ವರ್ಗಾವಣೆಯ ಅಧ್ಯಕ್ಷತೆಯನ್ನು ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ವಹಿಸಲಿದ್ದಾರೆ.

Pope Francis Funeral
ಪೋಪ್ ಫ್ರಾನ್ಸಿಸ್ ಸೋಮವಾರ ಪಾರ್ಶ್ವವಾಯುವಿಗೆ ಒಳಗಾಗಿ ನಿಧನರಾಗಿದ್ದರು. ಅವರಿಗೆ 88 ವರ್ಷವಾಗಿತ್ತು. ಅವರನ್ನು ಮಾರ್ಚ್ 23ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅದಾದ ಕೆಲವು ವಾರಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.
ಇದನ್ನೂ ಓದಿ: ಪೋಪ್ ನಿಧನದ ನಂತ್ರ ಏನು? ರಿಂಗ್ ನಾಶ, ಮನೆ ಲಾಕ್ ಯಾಕೆ? ಫಿಶರ್ಮ್ಯಾನ್ ರಿಂಗ್ನ ಮಹತ್ವವೇನು?
ಫ್ರಾನ್ಸಿಸ್ ತಮ್ಮ ಪೋಪ್ ಹುದ್ದೆಯ ಅವಧಿಯಲ್ಲಿ 45ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಗಳನ್ನು ಮಾಡಿದರು. ಇದರಲ್ಲಿ ಯಾವುದೇ ಪೋಪ್ ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್, ಮ್ಯಾನ್ಮಾರ್, ಉತ್ತರ ಮ್ಯಾಸಿಡೋನಿಯಾ, ಬಹ್ರೇನ್ ಮತ್ತು ಮಂಗೋಲಿಯಾಕ್ಕೆ ಮಾಡಿದ ಮೊದಲ ಪ್ರವಾಸವೂ ಸೇರಿದೆ. ಫ್ರಾನ್ಸಿಸ್ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಏಪ್ರಿಲ್ 20ರಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಲ್ಲಿ ಸೇರಿದ್ದವರಿಗೆ ಕೈ ಬೀಸುತ್ತಾ ವೀಲ್ಚೇರಿನಲ್ಲೇ ಸಾಗಿದ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ