ನನ್ನ ಉಚ್ಚಾಟನೆ ನಂತರ ಬಿಜೆಪಿಯಲ್ಲಿ ಒಗ್ಗಟ್ಟು ಕಂಡುಬರುತ್ತಿದೆ ಅನ್ನೋದು ಸುಳ್ಳು: ಬಸನಗೌಡ ಯತ್ನಾಳ್
ಬಿಜೆಪಿ ನಾಯಕರು ಸುದ್ದಿಗೋಷ್ಠಿಯಲ್ಲಿ ತನ್ನ ಮತ್ತು ಗೋಶಾಲೆಯ ಬಗ್ಗೆ ಮಾಡಿರುವ ಕಾಮೆಂಟ್ಗಳಿಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಯತ್ನಾಳ್, ಗೋಶಾಲೆಯ ಬಗ್ಗೆ ಮಾತಾಡಿದವರೆಲ್ಲರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವ ನಿರ್ಣಯವನ್ ಸಿದ್ದೇಶ್ವರ ಕಮಿಟಿಯು ನಿರ್ಣಯ ತೆಗೆದುಕೊಂಡಿದೆ,ಕಾಮೆಂಟ್ ಮಾಡಿರುವವರು ಹಿಂದೂಗಳ ಬೇಷರತ್ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಕೋರ್ಟ್ ನಲ್ಲಿ ತಮ್ಮನ್ನು ಎದುರಿಸಬೇಕು ಎಂದು ಯತ್ನಾಳ್ ಹೇಳಿದರು.
ಬೆಂಗಳೂರು, ಏಪ್ರಿಲ್ 22: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಇತರ ನಾಯಕರ ವಿರುದ್ಧ ಮಾತಾಡುವುದನ್ನು ಮುಂದುವರಿಸಿದ್ದಾರೆ. ತನ್ನ ಉಚ್ಚಾಟನೆಯ ಬಳಿಕ ಬಿಜೆಪಿ ಒಗ್ಗಟ್ಟಾಗಿದೆ ಅಂತ ಹೇಳುತ್ತಿದ್ದಾರೆ, ಆದರೆ ಅದು ಸುಳ್ಳು, ವಿಜಯೇಂದ್ರ ವಿಜಯಪುರಲ್ಲಿ ಭಾಷಣ ಮಾಡುವಾಗ ಬಹಳ ಕಡಿಮೆ ಜನ ಇದ್ದರು. ಜನಾಕ್ರೋಶ ಯಾತ್ರೆ ವಿಜಯಪುರ, ದಾವಣಗೆರೆ, ಹಾವೇರಿ ಮೊದಲಾದ ಕಡೆಗಳಲೆಲ್ಲ ವಿಫಲವಾಗಿದೆ, ಹಾವೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿಯವರು ಭಾಗಿಯಾಗಿರಲಿಲ್ಲ ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ: ನಾಲಗೆ ಹತೋಟಿಯಲ್ಲಿಟ್ಟುಕೊಳ್ಳುವಂತೆ ಬಸನಗೌಡ ಯತ್ನಾಳ್ ಗೆ ಹರಿಹರ ಪೀಠದ ಧರ್ಮದರ್ಶಿಗಳಿಂದ ಎಚ್ಚರಿಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ