Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲಗೆ ಹತೋಟಿಯಲ್ಲಿಟ್ಟುಕೊಳ್ಳುವಂತೆ ಬಸನಗೌಡ ಯತ್ನಾಳ್ ಗೆ ಹರಿಹರ ಪೀಠದ ಧರ್ಮದರ್ಶಿಗಳಿಂದ ಎಚ್ಚರಿಕೆ

ನಾಲಗೆ ಹತೋಟಿಯಲ್ಲಿಟ್ಟುಕೊಳ್ಳುವಂತೆ ಬಸನಗೌಡ ಯತ್ನಾಳ್ ಗೆ ಹರಿಹರ ಪೀಠದ ಧರ್ಮದರ್ಶಿಗಳಿಂದ ಎಚ್ಚರಿಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2025 | 6:58 PM

ಕೂಡಲಸಂಗಮ ಪೀಠಾಧ್ಯಾಕ್ಷರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಯತ್ನಾಳ್ ಉದ್ಧಟತನವನ್ನು ಯಾಕೆ ಸಹಿಸಿಕೊಂಡಿದ್ದಾರೋ? ಯತ್ನಾಳ್ ಒಬ್ಬ ಸ್ವಾಮೀಜಿಯ ವಿರುದ್ಧ ಮನಬಂಂತೆ ಮಾತಾಡಿದರೆ ಇವರಿಗೆ ನೋವಾಗುವುದಿಲ್ಲವೇ? ವಚನಾನಂದ ಸ್ವಾಮೀಜಿಯವರನ್ನು ಲಫಂಗೇಶ್ವರ ಅಂತ ಹೇಳೋದು ಇಡೀ ಕಾವಿ ಸಮುದಾಯಕ್ಕೆ ಅವಮಾನ, ಯತ್ನಾಳ್​​ಗೆ ಮೃತ್ಯುಂಜಯ ಸ್ವಾಮೀಜಿ ಬುದ್ಧಿ ಹೇಳಲಾರರೇ ಎಂದು ಧರ್ಮದರ್ಶಿ ಪ್ರಶ್ನಿಸಿದರು.

ದಾವಣಗೆರೆ, ಏಪ್ರಿಲ್ 8: ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಟೀಕಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅವರು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚಾನಾನಂದ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತಾಡಿದ್ದು ಪೀಠದ ಧರ್ಮದರ್ಶಿಗಳನ್ನು ಕೆರಳಿಸಿದೆ. ಇವತ್ತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ (Chandrashekhar Poojar), ಯತ್ನಾಳ್ ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಎಚ್ಚರಿಸಿದರು. ವಚನಾನಂದ ಸ್ವಾಮೀಜಿ ಅಂತಾರಾಷ್ಟ್ರೀಯ ಖ್ಯಾತಿಯ ಶ್ವಾಸಗುರು ಆಗಿದ್ದಾರೆ, ಯತ್ನಾಳ್ ಆರೋಪ ಮಾಡುವಂತೆ ಅವರಿಂದ ಹಣದ ದುರುಪಯೋಗ ಮಾಡಿಲ್ಲ, ಹರಿಹರ ಪಂಚಮಸಾಲಿ ಪೀಠ ಧರ್ಮದರ್ಶಿಗಳ ಟ್ರಸ್ಟ್​ ಹೊಂದಿದೆ, ಗುರೂಜಿಯವರು ಚೆಕ್ ಮೇಲೆ ಸಹಿ ಮಾಡುವ ಅಧಿಕಾರವನ್ನೂ ಇಟ್ಟುಕೊಂಡಿಲ್ಲ ಎಂದು ಪೂಜಾರ್ ಹೇಳಿದರು.

ಇದನ್ನೂ ಓದಿ:    ಯತ್ನಾಳ್ ಪರ ನಿಲ್ಲುವ ಮೂಲಕ ಗುರು ಪರಂಪರೆಯನ್ನು ನಿಭಾಯಿಸುತ್ತಿದ್ದೇನೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ