ಯತ್ನಾಳ್ ಟಿಪ್ಪೂ ಖಡ್ಗ ಹಿಡಿದು ಕುಣಿದಾಡಿದ, ಇಫ್ತಿಯಾರ್ ಕೂಟ ನಡೆಸಿದ ಫೋಟೋಗಳು ನಮ್ಮಲ್ಲಿವೆ: ರೇಣುಕಾಚಾರ್ಯ
ಬೇರೆಯವರನ್ನು ಪೇಮೆಂಟ್ ಗಿರಾಕಿ, ಹೊಂದಾಣಿಕೆ ರಾಜಾಕಾರಣಿ ಎನ್ನುವ ಬಸನಗೌಡ ಯತ್ನಾಳ್ ಖುದ್ದು ಒಬ್ಬ ಅಡ್ಜಸ್ಟ್ನೆಂಟ್ ರಾಜಕಾರಣಿ, ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಯಾವಾಗಲೂ ಬಿಜೆಪಿಗೆ ಲೀಡ್ ಸಿಗುತಿತ್ತು, ಅದರೆ ಈ ಸಲ ಕಾಂಗ್ರೆಸ್ ಪಕ್ಷಕ್ಕೆ 9,000 ಕ್ಕಿಂತ ಹೆಚ್ಚು ಮತಗಳಷ್ಟು ಲೀಡ್ ದೊರಕಿದೆ, ಇದಕ್ಕೆ ಕಾರಣ ಯತ್ನಾಳ್ನ ಹೊಂದಾಣಿಕೆ ರಾಜಕಾರಣ ಎಂದು ರೇಣುಕಾಚಾರ್ಯ ಹೇಳಿದರು.
ದಾವಣಗೆರೆ, ಏಪ್ರಿಲ್ 8: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ( M) Renukacharya) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಟೀಕಿಸುವುದು ಮುಂದುವರಿಸಿದ್ದಾರೆ. ಏಕವಚನದಲ್ಲೇ ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಅವನೊಬ್ಬ ಸ್ವಯಂ ಘೋಷಿತ ಹಿಂದೂ ಹುಲಿ, ಅಸಲಿಗೆ ಅವನು ನಕಲಿ ಹಿಂದೂ ಹುಲಿ, ಹಿಂದೂತ್ವದ ಪ್ರತಿಪಾದಕನೇ ಆಗಿದ್ದರೆ ಜೆಡಿಎಸ್ ಗೆ ಯಾಕೆ ಹೋಗುತ್ತಿದ್ದ? ಗೋಪಾಲ್ ಜೀ ಅವರನ್ನು ಯಾಕೆ ಟೀಕಿಸುತ್ತಿದ್ದ? ಅವನು ಟಿಪ್ಪೂ ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದು, ಟೋಪಿ ಧರಿಸಿ ಇಫ್ತಿಯಾರ್ ಕೂಟ ನಡೆಸಿದ್ದು, ಬಿರಿಯಾನಿ ತಿಂದಿದ್ದು-ಎಲ್ಲ ಫೋಟೋಗಳು ತಮ್ಮ ಬಳಿ ಇವೆ ಎಂದು ರೇಣುಕಾಚಾರ್ಯ ಹೇಳಿದರು.
ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆಗೆ ಯಡಿಯೂರಪ್ಪ ಕಾರಣ, ಬಿಜೆಪಿಯಲ್ಲಿನ ಪಂಚಮಸಾಲಿ ನಾಯಕರು ಪಕ್ಷದಿಂದ ಹೊರಬನ್ನಿ: ಸ್ವಾಮೀಜಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 08, 2025 08:05 PM
Latest Videos

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
