ಜೋಕರ್ ಅನ್ನೋ ಪದ ನನಗಿಂತ ಜಾಸ್ತಿ ಕುಮಾರಸ್ವಾಮಿಗೆ ಸೂಟ್ ಆಗುತ್ತದೆ: ಚಲುವರಾಯಸ್ವಾಮಿ, ಸಚಿವ
ಅಸಲಿಗೆ ಜೋಕರ್ ಅನ್ನುವ ಪದ ತನಗಿಂತ ಜಾಸ್ತಿ ಕುಮಾರಸ್ವಾಮಿಗೆ ಸೂಟ್ ಅಗುತ್ತದೆ, ತಾನು ಮಂಡ್ಯದ ಮಣ್ಣಿನ ಮಗ, ಅಪ್ಪಟ ರೈತನ ಮಗ, ಭಾಷೆಯ ಇತಿಮಿತಿಗಳು ಗೊತ್ತು, ಸುಸಂಸ್ಕೃತ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಸಿದ್ಧಗಂಗಾ ಮಠದ ಸ್ವಾಮೀಜಿಗಳ ಸಂಪರ್ಕದಲ್ಲಿದ್ದ ತನಗೆ ಯಾರನ್ನು ಹೇಗೆ ಟೀಕಿಸಬೇಕು ಅಂತ ಚೆನ್ನಾಗಿ ಗೊತ್ತಿದೆ, ವಿನಾಕಾರಣ ಯಾರನ್ನೂ ಟೀಕಿಸಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ, ಏಪ್ರಿಲ್ 8: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತನ್ನನ್ನು ಜೋಕರ್ ಅಂತ ಹೇಳಿದ್ದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರನ್ನು ವ್ಯಗ್ರರನ್ನಾಗಿಸಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ನಾಲಗೆಗೆ ಎಲುಬಿಲ್ಲ ಅಂತ ಮನಸ್ಸಿಗೆ ಬಂದಿದ್ದನೆಲ್ಲ ಮಾತಾಡಿದರೆ ಗೌರವ ಸಿಗಲ್ಲ, ಅವರು ತನ್ನನ್ನು ಮಂತ್ರಿ ಮಾಡಿದ್ದೆ ಅಂತ ಹೇಳಿದರೆ ಅವರನ್ನು ಮುಖ್ಯಮಂತ್ರಿ ಮಾಡಲು ತಾನು ಕಾರಣನಾಗಿದ್ದೆ ಅನ್ನೋದನ್ನು ಮರೆಯಬಾರದು, ಕುಮಾರಸ್ವಾಮಿಗೆ ಬಾಯಿ ಚಪಲ, ಟಿವಿಯಲ್ಲಿ ಕಾಣಿಸಿಕೊಳ್ಳದಿದ್ದರೆ ನಿದ್ದೆ ಬರಲ್ಲ, ಟಿವಿಯಲ್ಲಿ ಬಂದಾಕ್ಷಣ ಸಿದ್ದರಾಮಯ್ಯರನ್ನು, ಶಿವಕುಮಾರ್ ರನ್ನು ಮತ್ತು ತನ್ನನ್ನು ಬಯ್ಯುವುದಷ್ಟೇ ಅವರು ಮಾಡೋದು, ಅವರಿಗೆ ಸೌಜನ್ಯತೆ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗನ್-ಬಂದೂಕು ಹಿಡಿಯುವ ಸಂಸ್ಕೃತಿ ನನ್ನದಲ್ಲ, ದಾಖಲೆಗಳು ಗನ್ಗಿಂತ ಹೆಚ್ಚು ಶಕ್ತಿಶಾಲಿ: ಹೆಚ್ ಡಿ ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ