2nd PUC Result 2025; ಐದನೇ ರ‍್ಯಾಂಕ್ ಪಡೆದು ಗಾರೆ ಕೆಲಸ ಮಾಡುವ ಅಪ್ಪನನ್ನು ಮಹಲಿನ ಮೇಲೆ ಕೂರಿಸಿದ ಹುಬಳ್ಳಿ ಹುಡುಗಿ ನಾಗವೇಣಿ
ನಾಗವೇಣಿ ರಾಯಚೂರು ಒಟ್ಟು 600 ಅಂಕಗಳಲ್ಲಿ 593 ಅಂಕ ಪಡೆದಿದ್ದಾಳೆ. ಉಳಿದೇಳು ಮಾರ್ಕ್ಸ್ ಹೇಗೆ ತಪ್ಪಿದವೋ? ಅತ್ಯಂತ ಪ್ರತಿಭಾವಂತೆಯಾಗಿರುವ ನಾಗವೇಣಿ ಕಠಿಣ ಪರಿಶ್ರಮಿಯೂ ಹೌದು. ರ‍್ಯಾಂಕ್ ಪಡೆಯುವವರು ಸಾಮಾನ್ಯವಾಗಿ ಕೋಚಿಂಗ್ ಮತ್ತು ಟ್ಯೂಷನ್ ಕ್ಲಾಸ್ಗಳಿಗೆ ಹೋಗಿರುತ್ತಾರೆ. ಆದರೆ ತಂದೆಯ ಸಂಪಾದನೆಯಲ್ಲಿ ನಾಗವೇಣಿಗೆ ಅದನ್ನೆಲ್ಲ ಅಫೋರ್ಡ್ ಮಾಡಿರಲಾಗದು. ಆಕೆಯ ಏಕಾಗ್ರತೆ ಮತ್ತು ಪರಿಶ್ರಮ ಬೇರೆಯವರಿಗೆ ಮಾದರಿ.
ಹುಬ್ಬಳ್ಳಿ, ಏಪ್ರಿಲ್ 8: ಗಾರೆ ಕೆಲಸ ಮಾಡುವ (construction worker) ತಂದೆಗೆ ಇವತ್ತು ಬದುಕಿನ ಅತ್ಯಂತ ಸಂತೋಷದ ದಿನವೆಂದರೆ ಉತ್ಪ್ರೇಕ್ಷೆ ಅನಿಸದು. ಹುಬ್ಬಳ್ಳಿಯ ಗೋಪನಕೊಪ್ಪದ ಸರ್ಕಾರೀ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಸೆಕೆಂಡ್ ಪಿಯು ಓದುತ್ತಿದ್ದ ಅವರ ಮಗಳು ನಾಗವೇಣಿ ರಾಯಚೂರು ರಾಜ್ಯಕ್ಕೆ 5 ನೇ ರ‍್ಯಾಂಕ್ ಪಡೆದಿದ್ದಾಳೆ. ತಂದೆಗೆ ಖುಷಿಯಿಂದ ಮಾತೇ ಹೊರಡುತ್ತಿಲ್ಲ. ಖುಷಿಯಿಂದ ಸಂಭ್ರಮಿಸುತ್ತಿರುವ ಕಾಲೇಜಿನ ಸಿಬ್ಬಂದಿ ನಾಗವೇಣಿಯ ತಂದೆಯನ್ನು ಕೆಲಸಕ್ಕೆ ಹೋಗಿದ್ದ ಜಾಗದಿಂದ ಕರೆಸಿ ನಿಮ್ಮ ಮಗಳು ನಮ್ಮ ಕಾಲೇಜಿಗೆ ದೊಡ್ಡ ಹೆಸರು ತಂದಿದ್ದಾಳೆ ಎನ್ನುತ್ತಾ ಸತ್ಕರಿಸಿದರು. ತಂದೆಗೆ ಸನ್ಮಾನ ಕಂಡು ಮಗಳು ನಾಗವೇಣಿಯ ಕಣ್ಣಲ್ಲ್ಲಿ ಆನಂದಭಾಷ್ಪ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos