2nd PUC District Wise Result 2025: ಕರ್ನಾಟಕ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ, ಉಡುಪಿ ಪ್ರಥಮ, ಯಾದಗಿರಿಗೆ ಕೊನೆ ಸ್ಥಾನ
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇದೀಗ ಪ್ರಕಟಗೊಂಡಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಶೇಕಡಾ 93.90ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆ 93.57ರಷ್ಟು ಫಲಿತಾಂಶ ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.ದಕ್ಷಿಣ ಕನ್ನಡದ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ಗೆ ಮೊದಲ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ.

ಬೆಂಗಳೂರು, ಏಪ್ರಿಲ್ 08: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result) ಇಂದು ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಿದ್ದಾರೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಶೇಕಡಾ 93.90ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆ 93.57ರಷ್ಟು ಫಲಿತಾಂಶ ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಬರೆದಿದ್ದರು. 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 53.29ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07ರಷ್ಟು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇಕಡಾ 82.54ರಷ್ಟು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದು, ಆ ಪೈಕಿ 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ. 3,45,694 ಬಾಲಕಿಯರು ಪರೀಕ್ಷೆ ಬರೆದಿದ್ದರು ಅದರಲ್ಲಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ದಕ್ಷಿಣ ಕನ್ನಡದ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ಗೆ ಮೊದಲ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ. 600 ಕ್ಕೆ 599 ಅಂಕಗಳನ್ನು ಪಡೆದಿದ್ದಾರೆ.ಕಲಾ ವಿಭಾಗದಲ್ಲಿ ಸಂಜನಾ ಬಾಯಿ ಪ್ರಥಮ ಸ್ಥಾನ ಪಡೆದಿದ್ದಾರೆ.ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, 600 ಕ್ಕೆ 597 ಅಂಕ ಪಡೆದಿದ್ದಾರೆ.
ಮತ್ತಷ್ಟು ಓದಿ: Karnataka 2nd PUC Result Websites: ಪಿಯುಸಿ ಫಲಿತಾಂಶ ಪ್ರಕಟ: ಪರ್ಯಾಯ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪರಿಶೀಲಿಸುವುದು ಹೇಗೆ?
ಶೇಕಡಾವಾರು ಅಂಕ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು 1,00,571 ಶೇಕಡಾ 60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು 2,78,054 ಶೇಕಡಾ 50ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು 70,969 50%ಗಿಂತ ಕಡಿಮೆ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು 18,845 ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ ವಿದ್ಯಾರ್ಥಿಗಳು 4,68,439 ಉತ್ತೀರ್ಣರಾದ ಪುನರಾವರ್ತಿತ ವಿದ್ಯಾರ್ಥಿಗಳು ಸಂಖ್ಯೆ 2,987 ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ಖಾಸಗಿ ಅಭ್ಯರ್ಥಿಗಳು 4,830
ಕಳೆದ ವರ್ಷಕ್ಕಿಂತ 7 ಸ್ಥಾನ ಕೆಳಗೆ ಕುಸಿದ ಯಾದಗಿರಿ ಜಿಲ್ಲೆ ಯಾದಗಿರಿ ಜಿಲ್ಲೆಯು ಕಳೆದ ವರ್ಷಕ್ಕಿಂತ 7 ಸ್ಥಾನ ಕೆಳಗೆ ಕುಸಿದಿದೆ. ಕಳೆದ ವರ್ಷ ಫಲಿತಾಂಶದಲ್ಲಿ 26ನೇ ಸ್ಥಾನ ಪಡೆದಿದ್ದ ಜಿಲ್ಲೆ, ಈ ವರ್ಷ ಕೊನೆಯ 32ನೇ ಸ್ಥಾನ ಪಡೆದಿದೆ. ಈ ಬಾರಿ ರಾಜ್ಯಾದ್ಯಂತ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ 3709 ಜನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆದಿದ್ದರು. 48.44 ಪ್ರತಿಶತದಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶ ಇಲ್ಲಿದೆ
ಉಡುಪಿ ಜಿಲ್ಲೆ ಶೇ. 93.90 ದಕ್ಷಿಣ ಕನ್ನಡ ಜಿಲ್ಲೆ ಶೇ. 93.57 ಬೆಂಗಳೂರು ದಕ್ಷಿಣ ಶೇ. 85.36, ಕೊಡಗು ಜಿಲ್ಲೆ ಶೇ. 83.84 ಬೆಂಗಳೂರು ಉತ್ತರ ಶೇ. 83.31 ಉತ್ತರ ಕನ್ನಡ ಜಿಲ್ಲೆ ಶೇ. 82.93 ಶಿವಮೊಗ್ಗ ಜಿಲ್ಲೆ ಶೇ. 79.91 ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ. 79.70 ಚಿಕ್ಕಮಗಳೂರು ಜಿಲ್ಲೆ ಶೇ.79.56 ಹಾಸನ ಜಿಲ್ಲೆ ಶೇ. 77.56 ಚಿಕ್ಕಬಳ್ಳಾಪುರ ಜಿಲ್ಲೆ ಶೇ.75.80, ಮೈಸೂರು ಜಿಲ್ಲೆ ಶೇ.74.30 ಚಾಮರಾಜನಗರ ಜಿಲ್ಲೆ ಶೇ.73.97 ಮಂಡ್ಯ ಜಿಲ್ಲೆ ಶೇ.73.27 ಬಾಗಲಕೋಟೆ ಜಿಲ್ಲೆ ಶೇ.72.83 ಕೋಲಾರ ಜಿಲ್ಲೆ ಶೇ.72.45 ಧಾರವಾಡ ಜಿಲ್ಲೆ ಶೇ.72.32 ತುಮಕೂರು ಜಿಲ್ಲೆ ಶೇ.72.02 ರಾಮನಗರ ಜಿಲ್ಲೆ ಶೇ. 69.71 ದಾವಣಗೆರೆ ಜಿಲ್ಲೆ ಶೇ.69.45 ಹಾವೇರಿ ಜಿಲ್ಲೆ ಶೇ.76.56, ಬೀದರ್ ಜಿಲ್ಲೆ ಶೇ.67.31 ಕೊಪ್ಪಳ ಜಿಲ್ಲೆ ಶೇ.67.20 ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ. 66.76 ಗದಗ ಜಿಲ್ಲೆ ಶೇ.66.64 ಬೆಳಗಾವಿ ಜಿಲ್ಲೆ ಶೇ.65.37 ಬಳ್ಳಾರಿ ಜಿಲ್ಲೆ ಶೇ.64.41, ಚಿತ್ರದುರ್ಗ ಜಿಲ್ಲೆ ಶೇ.59.87 ವಿಜಯಪುರ ಜಿಲ್ಲೆ ಶೇ.58.81 ರಾಯಚೂರು ಜಿಲ್ಲೆ ಶೇ. 58.75 ಕಲಬುರಗಿ ಜಿಲ್ಲೆ ಶೇ.55.70 ಯಾದಗಿರಿ ಜಿಲ್ಲೆ ಶೇ.48.45ರಷ್ಟು ಫಲಿತಾಂಶ ದೊರೆತಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Tue, 8 April 25