AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka 2nd PUC Result 2025: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಪ್ರಕಟ: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಕರ್ನಾಟಕ 12 ನೇ ಪಿಯುಸಿ ಫಲಿತಾಂಶ 2025 ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶ 2025ವನ್ನು karresults.nic.in ಮಧ್ಯಾಹ್ನ 1.30ರ ಬಳಿಕ ವೀಕ್ಷಿಸಬಹುದು. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶವನ್ನು karresults.nic.inನಲ್ಲಿ ಮಧ್ಯಾಹ್ನ 1.30ರ ಬಳಿಕ ವೀಕ್ಷಿಸಬಹುದು. ಫಲಿತಾಂಶದ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಹಾಗೂ ಪರೀಕ್ಷೆ – 3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಮತ್ತೊಮ್ಮೆ ಪ್ರಯತ್ನಗಳನ್ನು ಮಾಡಲು ಸಹಕಾರಿಯಾಗಿದೆ.

Karnataka 2nd PUC Result 2025: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ನಯನಾ ರಾಜೀವ್
|

Updated on:Apr 08, 2025 | 2:36 PM

Share

ಬೆಂಗಳೂರು, ಏಪ್ರಿಲ್ 08: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (2nd PUC Result)ವನ್ನು ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. 93.90 ಶೇಕಾಡ ಫಲಿತಾಂಶ ಪಡೆದು ಉಡುಪಿ ಮೊದಲ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯು ಶೇ.48.45 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ. ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್ (Amoolya Kamath) ಮೊದಲ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡದ ಎಕ್ಸ್​ಪರ್ಟ್​ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ (Deepashree)  ಗೆ ಮೊದಲ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು‌ ವಿದ್ಯಾರ್ಥಿನಿಯಾಗಿದ್ದಾರೆ. 600 ಕ್ಕೆ ‌ 599 ಅಂಕಗಳನ್ನು ಪಡೆದಿದ್ದಾರೆ.ಕಲಾ ವಿಭಾಗದಲ್ಲಿ ಸಂಜನಾ ಬಾಯಿ ಪ್ರಥಮ ಸ್ಥಾನ ಪಡೆದಿದ್ದಾರೆ.ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, 600 ಕ್ಕೆ ‌597 ಅಂಕ ಪಡೆದಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಬರೆದಿದ್ದರು. 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 53.29ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07ರಷ್ಟು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 82.54ರಷ್ಟು ಉತ್ತೀರ್ಣರಾಗಿದ್ದಾರೆ.

ಕರ್ನಾಟಕ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ 2025

ಉಡುಪಿ ಜಿಲ್ಲೆ ಶೇಕಡಾ 93.90, ದಕ್ಷಿಣ ಕನ್ನಡ ಜಿಲ್ಲೆ 93.57, ಬೆಂಗಳೂರು ದಕ್ಷಿಣ 85.36, ಕೊಡಗು ಜಿಲ್ಲೆ 83.84ರಷ್ಟು ಫಲಿತಾಂಶ, ಬೆಂಗಳೂರು ಉತ್ತರ 83.31, ಉತ್ತರ ಕನ್ನಡ ಜಿಲ್ಲೆ 82.93ರಷ್ಟು ಫಲಿತಾಂಶದೊಂದಿಗೆ ಐದನೇ ಸ್ಥಾನದಲ್ಲಿದೆ.

ಇದನ್ನೂ ಓದಿ
Image
ಯಾವೆಲ್ಲ ವೆಬ್ಸೈಟ್ ನಲ್ಲಿ ಫಲಿತಾಂಶ ಲಭ್ಯ? ರಿಸಲ್ಟ್ ನೋಡುವುದು ಹೇಗೆ?
Image
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
Image
ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು?
Image
KCET Exam ಹಾಲ್ ಟಿಕೆಟ್​ ಬಿಡುಗಡೆ, ಆನ್​ಲೈನ್​ನಲ್ಲಿ ಡೌನ್‌ಲೋಡ್ ಮಾಡಿ

ಉಡುಪಿ ಜಿಲ್ಲೆ ಶೇಕಡಾ 93.90, ದಕ್ಷಿಣ ಕನ್ನಡ ಜಿಲ್ಲೆ 93.57ರಷ್ಟು ಫಲಿತಾಂಶ, ಬೆಂಗಳೂರು ದಕ್ಷಿಣ 85.36, ಕೊಡಗು ಜಿಲ್ಲೆ 83.84ರಷ್ಟು ಫಲಿತಾಂಶ, ಬೆಂಗಳೂರು ಉತ್ತರ 83.31, ಉತ್ತರ ಕನ್ನಡ ಜಿಲ್ಲೆ 82.93ರಷ್ಟು ಫಲಿತಾಂಶ, ಶಿವಮೊಗ್ಗ ಜಿಲ್ಲೆ 79.91, ಬೆಂಗಳೂರು ಗ್ರಾಮಾಂತರ ಜಿಲ್ಲೆ 79.70, ಚಿಕ್ಕಮಗಳೂರು ಜಿಲ್ಲೆ 79.56, ಹಾಸನ ಜಿಲ್ಲೆ 77.56ರಷ್ಟು ಫಲಿತಾಂಶ, ಚಿಕ್ಕಬಳ್ಳಾಪುರ ಜಿಲ್ಲೆ 75.80, ಮೈಸೂರು ಜಿಲ್ಲೆ 74.30ರಷ್ಟು ಫಲಿತಾಂಶ, ಚಾಮರಾಜನಗರ ಜಿಲ್ಲೆ 73.97, ಮಂಡ್ಯ ಜಿಲ್ಲೆ 73.27ರಷ್ಟು ಫಲಿತಾಂಶ, ಬಾಗಲಕೋಟೆ ಜಿಲ್ಲೆ 72.83, ಕೋಲಾರ ಜಿಲ್ಲೆ 72.45ರಷ್ಟು ಫಲಿತಾಂಶ, ಧಾರವಾಡ ಜಿಲ್ಲೆ 72.32, ತುಮಕೂರು ಜಿಲ್ಲೆ 72.02ರಷ್ಟು ಫಲಿತಾಂಶ, ರಾಮನಗರ ಜಿಲ್ಲೆ 69.71, ದಾವಣಗೆರೆ ಜಿಲ್ಲೆ 69.45ರಷ್ಟು ಫಲಿತಾಂಶ, ಹಾವೇರಿ ಜಿಲ್ಲೆ 76.56, ಬೀದರ್ ಜಿಲ್ಲೆ 67.31ರಷ್ಟು ಫಲಿತಾಂಶ ಬಂದಿದೆ.

ಕೊಪ್ಪಳ ಜಿಲ್ಲೆ 67.20, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 66.76ರಷ್ಟು ಫಲಿತಾಂಶ, ಗದಗ ಜಿಲ್ಲೆ 66.64, ಬೆಳಗಾವಿ ಜಿಲ್ಲೆ 65.37ರಷ್ಟು ಫಲಿತಾಂಶ, ಬಳ್ಳಾರಿ ಜಿಲ್ಲೆ 64.41, ಚಿತ್ರದುರ್ಗ ಜಿಲ್ಲೆ 59.87ರಷ್ಟು ಫಲಿತಾಂಶ, ವಿಜಯಪುರ ಜಿಲ್ಲೆ 58.81, ರಾಯಚೂರು ಜಿಲ್ಲೆ 58.75ರಷ್ಟು ಫಲಿತಾಂಶ ಕಲಬುರಗಿ ಜಿಲ್ಲೆ 55.70, ಯಾದಗಿರಿ ಜಿಲ್ಲೆ 48.45ರಷ್ಟು ಫಲಿತಾಂಶ ಬಂದಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದು, ಆ ಪೈಕಿ 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ.  3,45,694 ಬಾಲಕಿಯರು ಪರೀಕ್ಷೆ ಬರೆದಿದ್ದರು ಅದರಲ್ಲಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶವನ್ನು karresults.nic.inನಲ್ಲಿ ಮಧ್ಯಾಹ್ನ 1.30ರ ಬಳಿಕ ವೀಕ್ಷಿಸಬಹುದು. ಫಲಿತಾಂಶದ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಹಾಗೂ ಪರೀಕ್ಷೆ – 3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಮತ್ತೊಮ್ಮೆ ಪ್ರಯತ್ನ ಮಾಡಲು ಸಹಕಾರಿಯಾಗಲಿದೆ.

ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು SMS ಮತ್ತು ಡಿಜಿಲಾಕರ್ ಮೂಲಕವೂ ಪಡೆಯಬಹುದು. 2025ರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕರ್ನಾಟಕ ಮಂಡಳಿಯು ಮಾರ್ಚ್ 1 ರಿಂದ ಮಾರ್ಚ್ 20ರವರೆಗೆ ನಡೆಸಿತು. ಕರ್ನಾಟಕ ಮಂಡಳಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಯಿತು.

ಕರ್ನಾಟಕ ಮಂಡಳಿಯ 12ನೇ ತರಗತಿ ಪರೀಕ್ಷೆಯ ನಂತರ, ಮಾರ್ಚ್ 21 ರಂದು ವಿದ್ಯಾರ್ಥಿಗಳಿಗೆ ಕೀ ಆನ್ಸರ್ಸ್​ ಲಭ್ಯವಾಗುವಂತೆ ಮಾಡಲಾಯಿತು. ಇದು ವಿದ್ಯಾರ್ಥಿಗಳಿಗೆ ಅವರ ಕಾರ್ಯಕ್ಷಮತೆಯ ಬಗ್ಗೆ ಆರಂಭಿಕ ಒಳನೋಟವನ್ನು ನೀಡಿತು.

ಮತ್ತಷ್ಟು ಓದಿ: Courses after 2nd PUC: ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು? ವಿಜ್ಞಾನ, ಕಲಾ, ವಾಣಿಜ್ಯ ವಿಭಾಗಕ್ಕೆ ಸಂಬಂಧಿಸಿದ ಬೆಸ್ಟ್​​ ಮಾಹಿತಿ

ಕಳೆದ ವರ್ಷ ಪರೀಕ್ಷೆ ಬರೆದ 6.81 ಲಕ್ಷ ವಿದ್ಯಾರ್ಥಿಗಳಲ್ಲಿ 5.52 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು – ಒಟ್ಟಾರೆ ಉತ್ತೀರ್ಣ ಶೇಕಡಾ 81.15%. ಈ ವರ್ಷದ ಅಂಕಿಅಂಶಗಳು ಮತ್ತು ಮೆರಿಟ್ ಪಟ್ಟಿಗಳನ್ನು ಫಲಿತಾಂಶದ ಜೊತೆಗೆ ಬಹಿರಂಗಪಡಿಸಲಾಗುತ್ತದೆ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಪರಿಶೀಲಿಸುವುದು ಹೇಗೆ?

ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kseab.karnataka.gov.in ಮತ್ತು karresults.nic.in ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಕುವ ಮೂಲಕ ವೀಕ್ಷಿಸಬಹುದು. 2025 ರ ದ್ವಿತೀಯ ಪಿಯುಸಿ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು ಡೌನ್‌ಲೋಡ್ ಮಾಡಿ

ಶಿಕ್ಷಣಕ್ಕೆ ಸಮಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:50 pm, Tue, 8 April 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ