ಗನ್-ಬಂದೂಕು ಹಿಡಿಯುವ ಸಂಸ್ಕೃತಿ ನನ್ನದಲ್ಲ, ದಾಖಲೆಗಳು ಗನ್ಗಿಂತ ಹೆಚ್ಚು ಶಕ್ತಿಶಾಲಿ: ಹೆಚ್ ಡಿ ಕುಮಾರಸ್ವಾಮಿ
ಕರ್ನಾಟಕ ಸಿಡಿ ಮತ್ತು ಪೆನ್ ಡ್ರೈವ್ಗಳನ್ನು ತಯಾರಿಸುವ ಫ್ಯಾಕ್ಟರಿಯಾಗಿ ಮಾರ್ಪಟ್ಟಿದೆ ಎಂದು ತಾನಲ್ಲ ಒಬ್ಬ ಹಿರಿಯ ಮತ್ತು ಜಾವಾಬ್ದಾರಿಯುತ ಮಂತ್ರಿಯೇ ಹೇಳಿದ್ದಾರೆ, ಅಧಿವೇಶನ ನಡೆಯುತ್ತಿದ್ದಾಗ ಎಂಥ ಪದಗಳ ಬಳಕೆಯಾಯಿತು ಅಂತ ಗೊತ್ತಿದೆ, ಹನಿ ಟ್ರ್ಯಾಪ್ ಮತ್ತು ಕೊಲೆಗೆ ಸುಪಾರಿ ಆರೋಪಗಳ ವಿಷಯದಲ್ಲಿ ಗೃಹ ಸಚಿವರಾಗಿ ಪರಮೇಶ್ವರ್ ಏನಾದರೂ ಮಾಡಿದರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬೆಂಗಳೂರು, ಏಪ್ರಿಲ್ 7: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಇವತ್ತು ಬೆಂಗಳೂರಲ್ಲಿ ಪುನಃ ಸುದ್ದಿಗೋಷ್ಠಿ ನಡೆಸಿ ಮಾತಾಡಿದರು. ನಿನ್ನೆಯ ಪ್ರೆಸ್ಸರ್ನಲ್ಲಿ ಅವರು ಯುದ್ಧ ಸಾರಿದ್ದೇನೆಂದು ಹೇಳಿರುವುದನ್ನು ಗೇಲಿ ಮಾಡಿರುವ ಗೃಹ ಸಚಿವ ಜಿ ಪರಮೇಶ್ವರ್ ಮೇಲೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬಂದೂಕು ಗನ್ ಹಿಡಿಯುವ ಸಂಸ್ಕೃತಿ ತಮ್ಮದಲ್ಲ, ಮಹಾತ್ಮಾ ಗಾಂಧಿಯವರ ಅಹಿಂಸಾ ತತ್ವಗಳಲ್ಲಿ ತನಗೆ ನಂಬಿಕೆ, ಕುವೆಂಪು ಅವರು ಸಾರಿದ ಸರ್ವಜನಾಂಗದ ಶಾಂತಿ ತೋಟ ಸಂದೇಶವನ್ನು ಅನುಸರಿಸಿಕೊಂಡು ನಡೆಯುವ ಜನ ತಾವು ಎಂದು ಹೇಳಿದರು. ಬಂದೂಕು ಮತ್ತು ಗನ್ಗಳಿಗಿಂತ ದಾಖಲೆಗಳು ಹೆಚ್ಚು ಶಕ್ತಿಯುತ ಅನ್ನೋದು ಗೃಹ ಸಚಿವರಿಗೆ ಗೊತ್ತಿದ್ದಂತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಮುಡಾ ಹಗರಣ: 15 ಸೈಟು ಡಿನೋಟಿಫೈ ಮಾಡಿ ಎಂದು ಅರ್ಜಿ ಕೊಟ್ಟಿದ್ದೇ ಸಿಎಂ ಭಾವಮೈದ, ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ