ಯತ್ನಾಳ್ಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ, ವಿಡಿಯೋ ನೋಡಿ
ಉಚ್ಛಾಟನೆ ಬೆನ್ನಲ್ಲೇ ಮತ್ತಷ್ಟು ಆ್ಯಕ್ಟೀವ್ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ ಇಂದು (ಏಪ್ರಿಲ್ 07) ಉತ್ತರ ಕರ್ನಾಟಕದ ಶಕ್ತಿದೇವಿ ಬೆಳಗಾವಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಯತ್ನಾಳ್ ಗೆ ಯಡಿಯೂರಪ್ಪ ಅವರು ಯಲ್ಲಮ್ಮನ ದರ್ಶನ ಮಾಡಿಸಿದರು.
ಬೆಳಗಾವಿ, (ಏಪ್ರಿಲ್ 07): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೈಕಮಾಂಡ್ ಪಕ್ಷದಿಂದಲೇ ಉಚ್ಚಾಟನೆ ಮಾಡಿದೆ. ಆದರೂ ಯತ್ನಾಳ್ ಅವರ ಮಾತಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಲೇ ಇದ್ದಾರೆ. ಉಚ್ಛಾಟನೆ ಬೆನ್ನಲ್ಲೇ ಮತ್ತಷ್ಟು ಆ್ಯಕ್ಟೀವ್ ಆಗಿರುವ ಯತ್ನಾಳ್ ಎಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ ಇಂದು (ಏಪ್ರಿಲ್ 07) ಉತ್ತರ ಕರ್ನಾಟಕದ ಶಕ್ತಿದೇವಿ ಬೆಳಗಾವಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಯತ್ನಾಳ್ ಗೆ ಯಡಿಯೂರಪ್ಪ ಅವರು ಯಲ್ಲಮ್ಮನ ದರ್ಶನ ಮಾಡಿಸಿದರು. ಯಡಿಯೂರಪ್ಪ ಅಂದ್ರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಲ್ಲ. ದೇವಸ್ಥಾನದ ಅರ್ಚಕ ಯಡಿಯೂರಪ್ಪ ಅವರು ವಿಶೇಷ ಪೂಜೆ ಮಾಡಿ ಯತ್ನಾಳ್ಗೆ ಆಶೀರ್ವಾದ ಮಾಡಿದರು.
Latest Videos