ಸಿಎಂ ಮತ್ತು ಡಿಸಿಎಂ ವಿರುದ್ಧ ಯುದ್ಧ ಘೋಷಿಸಿದ ಬಳಿಕ ಪಕ್ಷದ ಕೋರ್ ಕಮಿಟಿ ಸಭೆ ಕರೆದ ಕುಮಾರಸ್ವಾಮಿ
ಕುಮಾರಸ್ವಾಮಿಯವರು ಪಕ್ಷದ ಜವಾಬ್ದಾರಿಯನ್ನು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ವಹಿಸಿಕೊಡುವ ಯೋಚನೆ ಮಾಡುತ್ತಿದ್ದಾರೆ, ಪ್ರಾಯಶಃ ಮೇನಲ್ಲಿ ನಿಖಿಲ್ ಪಟ್ಟಾಭಿಷೇಕ ಮತ್ತು ಅಧಿಕಾರ ಹಸ್ತಾಂತರ ನಡೆಯಬಹುದು. ಅವರ ನಿರ್ಧಾರದಲ್ಲಿ ಎಲ್ಲ ಜೆಡಿಎಸ್ ನಾಯಕರು ಒಮ್ಮತ ಹೊಂದಿದ್ದಾರೋ ಇಲ್ಲವೋ ಅಂತ ಕುಮಾರಸ್ವಾಮಿಯವರೇ ಹೇಳಬೇಕು. ಯಾಕೆಂದರೆ ನಿಖಿಲ್ ರನ್ನು ಲಾಂಚ್ ಮಾಡುವ ಪ್ರಯತ್ನಗಳು ಹಿಂದೆ ವಿಫಲವಾಗಿವೆ.
ಬೆಂಗಳೂರು, ಏಪ್ರಿಲ್ 5: ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಇಂದು ತಮ್ಮ ಮನೆಯಲ್ಲಿ ಪಕ್ಷ ಪಕ್ಷದ ಕೋರ್ ಕಮಿಟಿ ಮೀಟಿಂಗ್ ನಡೆಸಿದರು. ಸಭೆಗೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರು ಒಬ್ಬೊಬ್ಬರಾಗಿ ಆಗಮಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ (GT Devegowda) ಅವರು ಕುಮಾರಸ್ವಾಮಿಯೊಂದಿಗೆ ಅಂತರ ಕಾಯ್ದುಕೊಳ್ಳುತ್ತಿರುವುದರಿಂದ ಸಭೆಗೆ ಹಾಜರಾಗಲಿಲ್ಲ. ಇವತ್ತಿನ ಪತ್ರಿಕಾ ಗೋಷ್ಠಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಯುದ್ಧ ಸಾರಿರುವುದಾಗಿ ಹೇಳಿದ್ದು ಮತ್ತು ಸಾಯಂಕಾಲ ಸಭೆ ನಡೆಸುತ್ತಿರುವುದು ಕುತೂಹಲವಂತೂ ಮೂಡಿಸಿದೆ.
ಇದನ್ನೂ ಓದಿ: ಮುಡಾ ಹಗರಣ: 15 ಸೈಟು ಡಿನೋಟಿಫೈ ಮಾಡಿ ಎಂದು ಅರ್ಜಿ ಕೊಟ್ಟಿದ್ದೇ ಸಿಎಂ ಭಾವಮೈದ, ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ