ಚಿಕ್ಕಬಳ್ಳಾಪುರ ಕೃಷಿ ಕಚೇರಿಯಲ್ಲಿ ₹3 ಲಕ್ಷ ಲಂಚ ಸ್ವೀಕರಿಸುತ್ತ ರೆಡ್ಹೆಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಲೋಕಾಯುಕ್ತ ಅಧಿಕಾರಿಗಳು ರಾಜ್ಯದಾದ್ಯಂತ ದಾಳಿ ನಡೆಸಿ ಭ್ರಷ್ಟರನ್ನು ಬಲೆಗೆ ಕೆಡವಿದರೂ ಸರ್ಕಾರೀ ಕಚೇರಿಗಳಲ್ಲಿ ಲಂಚಗುಳಿತನ ಕಡಿಮೆಯಾಗುತ್ತಿಲ್ಲ. ತಾಲೂಕು ಕಚೇರಿಗಳಲ್ಲಿ ಎಲ್ಲಾದಕ್ಕೂ ಇಷ್ಟಿಷ್ಟು ಅಂತ ದರ ನಿಗದಿಯಾಗಿರುತ್ತದೆ, ದುಡ್ಡು ಕೊಟ್ಟರೆ ಮಾತ್ರ ನಿಮ್ಮ ಫೈಲ್ ಗೆ ಕಾಲು ಬರುತ್ತವೆ ಮತ್ತು ಮುಂದಕ್ಕೆ ಸಾಗಲಾರಂಭಿಸುತ್ತದೆ, ಇಲ್ಲದಿದ್ದರೆ ನಿಶ್ಚಲವಾಗಿ ಬಿದ್ದಲ್ಲೇ ಬಿದ್ದಿರುತ್ತದೆ! ಎಲ್ಲ ಸರ್ಕಾರೀ ಕಚೇರಿಗಳಲ್ಲಿ ಇದೇ ದೃಶ್ಯ.
ಬೆಂಗಳೂರು, ಏಪ್ರಿಲ್ 5: ಲೋಕಾಯುಕ್ತ ಬಲೆಗೆ ಮತ್ತೊಂದು ಭ್ರಷ್ಟ ಮಿಕ ಬಿದ್ದಿದೆ. ಚಿಕ್ಕಬಳ್ಳಾಪುರದ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುವ ಶಂಕರಯ್ಯ (agriculture officer Shankaraiah) ಎನ್ನುವವರು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದಾರೆ. ಮಂಜನಾಥ ಹೆಸರಿನ ಗುತ್ತಿಗೆದಾರರೊಬ್ಬರ ಬಳಿ ಶಂಕರಯ್ಯ ಮೂರು ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದರಂತೆ. ಇವತ್ತು ₹ 2 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಅಂಟೋನಿ ಜಾನ್ ನೇತೃತ್ವದ ಅಧಿಕಾರಿಗಳ ತಂಡವು ದಾಳಿ ನಡೆಸಿ ಶಂಕರಯ್ಯರನ್ನು ಹಣದೊಂದಿಗೆ ಹಿಡಿದಿದ್ದಾರೆ.
ಇದನ್ನೂ ಓದಿ: Lokayukta Raid: ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ಕರ್ನಾಟಕದ 7 ಕಡೆ ಲೋಕಾಯುಕ್ತ ದಾಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos