ಯತ್ನಾಳ್ ಪರ ನಿಲ್ಲುವ ಮೂಲಕ ಗುರು ಪರಂಪರೆಯನ್ನು ನಿಭಾಯಿಸುತ್ತಿದ್ದೇನೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ರಾಯಣ್ಣ, ಕಿತ್ತೂರು ಚೆನ್ನಮ್ಮನ ಮಾನಸ ಪುತ್ರ; ಹಾಗಾಗಿ, ರಾಜಮಾತೆಯ ಸ್ಮಾರಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟಗಾರರಾದ ಮಲ್ಲಮ್ಮ, ಅಬ್ಬಕ್ಕ ರಾಣಿ, ಬಾಳಪ್ಪ ಮೊದಲಾದವರ ಸ್ಮಾರಕಗಳ ಅಭಿವೃದ್ಧಿಗಾಗಿಯೂ ಪ್ರಾಧಿಕಾರ ರಚಿಸಬೇಕೆಂದು ಹೇಳಿದರು.
ಬೆಳಗಾವಿ, ಏಪ್ರಿಲ್ 7: ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕುತಂತ್ರವೊಂದಕ್ಕೆ ಬಲಿಯಾಗಿದ್ದಾರೆ, ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಸರಿಯಲ್ಲ, ಏಪ್ರಿಲ್ 13ರಂದು ಪ್ರಸ್ತಾಪಿತ ಪ್ರತಿಭಟನೆಯನ್ನು ನಡೆಸಿ ತಾವು ಯತ್ನಾಳ್ ಅವರೊಂದಿಗೆ ಇರೋದನ್ನು ಮತ್ತೊಮ್ಮೆ ಸ್ಪಷ್ಟಪಡಿಸುವುದಾಗಿ ಕೂಡಲಸಂಗಮದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಗುರು ಪರಂಪರೆಯನ್ನು ನಿಭಾಯಿಸುತ್ತಿದ್ದೇನೆ, ಶಿಷ್ಯನೊಬ್ಬ ತೊಂದರೆಗೆ ಸಿಕ್ಕಾಗ ಅವನ ಪರ ನಿಲ್ಲೋದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸ್ವಾಮೀಜಿ ಹೇಳಿದರು. ಸಮುದಾಯ ಮತ್ತು ಸಮಾಜದ ಉದ್ಧಾರಕ್ಕೆ ನಿಂತವರು ಯಾರೇ ಆಗಿರಲಿ, ಅವರಿಗೆ ತೊಂದರೆ ಎದುರಾದರೆ ಜೊತೆಗೆ ನಿಲ್ಲುವುದು ತಮ್ಮ ಬದ್ಧತೆಯಾಗಿದೆ ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ನಮ್ಮಿಂದ ಅಧಿಕಾರಕ್ಕೆ ಬಂದ ಈ ನೀಚ ಸರ್ಕಾರಕ್ಕೆ ತಕ್ಕ ಪಾಠ ಕಲಿಸದೆ ಬಿಡಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ