ನಮ್ಮಿಂದ ಅಧಿಕಾರಕ್ಕೆ ಬಂದ ಈ ನೀಚ ಸರ್ಕಾರಕ್ಕೆ ತಕ್ಕ ಪಾಠ ಕಲಿಸದೆ ಬಿಡಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಅಮಾಯಕ ಲಿಂಗಾಯತರ ಮೇಲೆ ದೌರ್ಜನ್ಯ ಮೆರೆದ ಸರ್ಕಾರ ಪ್ರಾಯಶಃ ತಮ್ಮನ್ನು ಟಾರ್ಗೆಟ್ ಮಾಡಿತ್ತೇನೋ ಗೊತ್ತಿಲ್ಲ, ತನ್ನ ಮೇಲೆ ಲಾಠಿ ಪ್ರಹಾರವಾಗಿಲ್ಲ, ತನಗೇನಾದರೂ ಏಟು ಬಿದ್ದಿದ್ದರೆ ಇಡೀ ರಾಜ್ಯ ಹೊತ್ತಿ ಉರಿಯುತಿತ್ತು, ಆದರೆ ತಮ್ಮ ಜೊತೆ ಪ್ರತಿಭಟನಾಕಾರರು ತಮ್ಮನ್ನು ಒಳಗಡೆ ಎಳೆದುಕೊಂಡರು, ಎಂದು ಸ್ವಾಮೀಜಿ ಹೇಳಿದರು.
ಬೆಳಗಾವಿ: ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಂಕಿಯುಗುಳುತ್ತಾ ಪಾಠ ಕಲಿಸುವ ಎಚ್ಚರಿಕೆ ನೀಡಿದರು. 9 ಶತಮಾನಗಳ ಇತಿಹಾಸವಿರುವ ಲಿಂಗಾಯತ ಸಮುದಾಯದ ಮೊದಲ ಬಾರಿಗೆ ಹಲ್ಲೆ ನಡೆಸುವ ನೀಚ ಕೆಲಸವನ್ನು ಸರ್ಕಾರ ಮಾಡಿದೆ. ಸಿದ್ದರಾಮಯ್ಯರ ಸೂಚನೆ ಇಲ್ಲದೆ ಪೊಲೀಸರು ಹಲ್ಲೆ ನಡೆಸುವುದು ಸಾಧ್ಯವಿಲ್ಲ. ಲಿಂಗಾಯತ ಸಮುದಾಯಕ್ಕೆ ಸರ್ಕಾರ ಮಾಡಿರುವ ಘೋರ ಅವಮಾನವಿದು, ಹೆಣ್ಣುಮಕ್ಕಳ ಮೇಲೂ ಲಾಠಿ ಪ್ರಹಾರ ಮಾಡಲಾಗಿದೆ, ನಮ್ಮ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ತಕ್ಕ ಶಾಸ್ತಿ ಕಾದಿದೆ ಎಂದು ಸ್ವಾಮೀಜಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಪಂಚಮಸಾಲಿ ಮುಖಂಡರಿಗೆ ಬೆದರಿಕೆ ಹಾಕಲಾಗುತ್ತಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ

ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ

ಕೀಟನಾಶಕ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
