ಸರ್ಕಾರದ ಯಾವುದೇ ಬೆದರಿಕೆಗೆ ಮಣಿಯಲ್ಲ, ಹೋರಾಟ ಮುಂದುವರಿಯುತ್ತದೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಬಂಧನಕ್ಕೊಳಗಾಗಿರುವ ಪಂಚಮಸಾಲಿ ಸಮುದಾಯದವರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕು, ಲಾಠಿಚಾರ್ಜ್ ಗೆ ಕಾರಣರಾದ ಪೊಲೀಸ್ ಕಮೀಶನರ್ ಮತ್ತು ಎಡಿಜಿಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಹೇಳಿದ ಸಾಮೀಜಿಯವರು ಸರ್ಕಾರ ಇದನ್ನು ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಗಾಯಗೊಂಡಿರುವ ಪ್ರತಿಭಟನಾಕಾರರು ಆತಂಕ ಪಡಬೇಕಿಲ್ಲ, ಅವರ ಚಿಕಿತ್ಸೆಯ ವೆಚ್ಚವನ್ನು ತಮ್ಮ ಕೈಲಾದಷ್ಟು ಮಟ್ಟಿಗೆ ಭರಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಬೆಳಗಾವಿ: ಚೆನ್ನಮ್ಮ ವೃತ್ತದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಯ ಸಿದ್ದರಾಮಯ್ಯ ಸರ್ಕಾರ ಪ್ರಾಯಶಃ ಪ್ರತಿಭಟನೆಕಾರರ ಮೇಲೆ ಗುಂಡು ಹಾರಿಸಲು ಸಹ ಹಿಂಜರಿಯದ ಮನಸ್ಥಿಯಲ್ಲಿತ್ತು ಎಂದು ಹೇಳಿದರು. ತಮ್ಮನ್ನು ಭೇಟಿಯಾಗಲು ಮುಖ್ಯಮಂತ್ರಿ ಹೇಳಿ ಕಳಿಸಿದ ಕಾರಣ ಅಲ್ಲಿಗೆ ಹೋಗುವಾಗ ಲಾಠಿಚಾರ್ಜ್ ಮಾಡಲಾಗಿದೆ, ಅವರೇನೇ ಮಾಡಿದರೂ ತಮ್ಮ ಹೋರಾಟ ನಿಲ್ಲಲ್ಲ, ಪ್ರತಿಭಟನೆಯ ಮುಂದುವರಿದ ಭಾಗವಾಗಿ ಡಿಸೆಂಬರ್ 12 ರಂದು ಪಂಚಮಸಾಲಿ ಸಮುದಾಯದವರು ತಾವಿರುವ ಹಳ್ಳಿ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾಕೇಂದ್ರಗಳಲ್ಲಿ ರಾಸ್ತಾರೋಕೋ ಮಾಡುತ್ತಾರೆ, ಹೋರಾಟದ ಮುಂದಿನ ಹಂತವನ್ನು ಅವತ್ತು ಪ್ರಕಟಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 2ಎ ಪ್ರವರ್ಗಕ್ಕೆ ಲಿಂಗಾಯತ ಪಂಚಮಸಾಲಿ ಸಮುದಾಯ ಸೇಪರ್ಡಿಸುವ ನಂಬಿಕೆ ಇದೆ: ಬಸವ ಜಯ ಮೃತ್ಯುಂಜಯ ಸ್ವಾಮಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

ಟಿವಿ9 ನೆಟ್ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ

0.14 ಸೆಕೆಂಡ್ನಲ್ಲಿ ಸಾಲ್ಟ್ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
