ಬೆಂಗಳೂರು: ಚಾಮರಾಜಪೇಟೆಯ ಕೊಳವೆ ಬಾವಿಯೊಂದರಲ್ಲಿ ಪೆಟ್ರೋಲ್ ಮಿಶ್ರಿತ ನೀರು, ಕ್ಯಾರೆ ಅನ್ನದ ಶಾಸಕ, ಸಂಸದ
ಸಮೀಪದಲ್ಲೇ ಪೆಟ್ರೋಲ್ ಬಂಕೊಂದು ಇರೋದ್ರಿಂದ ಬಾವಿಯಿಂದ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿದೆ ಎನ್ನಲಾಗುತ್ತಿದೆ. ಒಮ್ಮೆ ಬಿಬಿಎಂಪಿಯವರು ಸ್ಥಳಕ್ಕೆ ಭೇಟಿ ನೀಡಿ ನೀರಿನ ಸ್ಯಾಂಪಲ್ ಸಂಗ್ರಹಿಸಿ ನೀರು ಕುಡಿಯಲು ಯೋಗ್ಯವಲ್ಲ ಅಂತ ಹೇಳಿದ್ದನ್ನು ಬಿಟ್ಟರೆ ಬೇರೇನೂ ಕೆಲಸವಾಗಿಲ್ಲ. ಸುಮಾರು ಒಂದು ವರ್ಷದಿಂದ ನೂರಕ್ಕೂ ಹೆಚ್ಚು ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದು ದುಬಾರಿ ಬೆಲೆ ತೆತ್ತು ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 7: ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿ ಜನ ತಮ್ಮ ಏರಿಯಾದಲ್ಲಿರುವ ಬೋರ್ ವೆಲ್ ನೀರನ್ನು ಬಳಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಯಿಂದ ಪೆಟ್ರೋಲ್ ಮಿಶ್ರಿತ, ಕೆಮಿಕಲ್ ವಾಸನೆಯನ್ನು ಸೂಸುವ ನೀರು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸಮಸ್ಯೆಯನ್ನು ಬಿಬಿಎಂಪಿ, ಜಲಮಂಡಳಿ, ಪರಿಸರ ಮಾಲಿನ್ಯ ಮಂಡಳಿ, ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಸಂಸದ ಪಿಸಿ ಮೋಹನ್ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಜನ ಹೇಳುತ್ತಿದ್ದಾರೆ.
ಇದನ್ನೂ ಓದಿ: Viral: ಬೋರ್‌ವೆಲ್ ಕೊರೆಸುವಾಗ ಬಾನೆತ್ತರಕ್ಕೆ ಚಿಮ್ಮಿದ ನೀರು; ರೈತನಿಗೆ ಹರ್ಷ ತಂದ ಕ್ಷಣ ಹೇಗಿತ್ತು ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ