ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿಗಳು: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿನ ಏರ್ ಕಂಡಿಷನರ್ ಒಂದು ವಾರದಿಂದ ಕೆಟ್ಟಿದ್ದು, ರೋಗಿಗಳು ತೀವ್ರ ಬಿಸಿಲಿನಿಂದ ಪರದಾಡುತ್ತಿದ್ದಾರೆ. ಕೆಲ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಟಿವಿ9 ವರದಿ ಬಳಿಕ ರೋಗಿಗಳನ್ನು ಇನ್ನೊಂದು ಐಸಿಯುಗೆ ಸ್ಥಳಾಂತರಿಸಲಾಗಿದೆ. ಈ ಘಟನೆಯಿಂದ ಆಸ್ಪತ್ರೆಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.
ಕೋಲಾರ, ಏಪ್ರಿಲ್ 07: ಕೋಲಾರ ಜಿಲ್ಲಾಸ್ಪತ್ರೆಯ (Kolar District Hospital) ಐಸಿಯುನಲ್ಲಿನ ಎಸಿ (AC) ಕೆಟ್ಟಿದ್ದು, ಸೆಕೆಯಾಗಿ ರೋಗಿಗಳು ಪರದಾಡಿದರು. ರೋಗಿಗಳಿಗೆ ಅವರ ಕುಟುಂಬದ ಸದಸ್ಯರು ಗಾಳಿ ಬೀಸುತ್ತಿದ್ದಾರೆ. ಇನ್ನು ಕೆಲ ರೋಗಿಗಳ ಸಂಬಂಧಿಕರು ಮನೆಯಿಂದಲೇ ಫ್ಯಾನ್ ತಂದಿದ್ದಾರೆ. ಕಳೆದ ಒಂದು ವಾರದಿಂದ ಐಸಿಯುನಿಲ್ಲಿ ಎಸಿ ಕೆಟ್ಟಿದೆಯಂತೆ. ಸಮಪರ್ಕವಾದ ಗಾಳಿಯಿಲ್ಲದೆ ಕೆಲ ರೋಗಿಗಳು ಸತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ತಿಳಿಸಿದ್ದಾರೆ.
ಇನ್ನು, ಈ ಬಗ್ಗೆ ಟಿವಿ9 ವರದಿ ಪ್ರಸಾರಮಾಡಿದ ಕೆಲವೇ ನಿಮಿಷಗಳಲ್ಲಿ ರೋಗಿಗಳನ್ನು ಜಿಲ್ಲಾಸ್ಪತ್ರೆಯ ಮತ್ತೊಂದು ಐಸಿಯು ವಾರ್ಡ್ಗೆ ಸಿಬ್ಬಂದಿ ಶಿಪ್ಟ್ ಮಾಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ನರಕಯಾತನೆ ಅನುಭವಿಸಿದ್ದ ರೋಗಿಗಳು ಹಾಗೂ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಐಸಿಯುನಲ್ಲಿನ ರೋಗಿಗಳ ವಿವರ-
- ರೋಗಿ-1 ಗೌರಿ- ಬ್ಲಡ್ನಲ್ಲಿ ಬಿಳಿ ರಕ್ತಕಣದ ಕೊರತೆಯಿಂದ ದಾಖಲು.
- ರೋಗಿ-2 ಮೇರಿ- ನ್ಯುಮೋನಿಯಾ ರೋಗದಿಂದ ಬಳಲುತ್ತಿರುವ ಅಜ್ಜಿ.
- ರೋಗಿ-3 ಲೋಕೇಶ್- ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿ ನಂತರ ಆಸ್ಪತ್ರೆಗೆ ದಾಖಲು.
- ರೋಗಿ-4 ವೆಂಕಟೇಶ್- ಬ್ರೈನ್ ಸ್ಟ್ರೋಕ್ ನಿಂದ ಐಸಿಯುವಿನಲ್ಲಿ ಚಿಕಿತ್ಸೆ.
- ರೋಗಿ-5 ಅನ್ವರ್- ಶ್ವಾಸಕೋಶದ ಸಮಸ್ಯೆ ಉಸಿರಾಟದ ತೊಂದರೆಯಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published on: Apr 07, 2025 03:32 PM