Droupadi Murmu Lifestyle: ದೇಶದ ಪ್ರಥಮ ಪ್ರಜೆ ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದಿಲ್ಲ.. ಯೋಗ-ಧ್ಯಾನವನ್ನು ಮರೆಯುವುದಿಲ್ಲ.. ದ್ರೌಪದಿ ಮುರ್ಮು ಜೀವನಶೈಲಿ ಹೀಗಿದೆ

Droupadi Murmu: ದ್ರೌಪದಿ ಮುರ್ಮು ಭಾರತದ ಪ್ರಥಮ ಪ್ರಜೆ ಮತ್ತು ದೇಶದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ಅತ್ಯುನ್ನತ ಹುದ್ದೆ ಅಲಂಕರಿಸಿದ 2ನೇ ಮಹಿಳೆ ಹಾಗೂ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾದರೆ ಅವರ ಜೀವನಶೈಲಿ ಹೇಗಿದೆ ನೋಡೋಣಾ...

Droupadi Murmu Lifestyle: ದೇಶದ ಪ್ರಥಮ ಪ್ರಜೆ ಈರುಳ್ಳಿ, ಬೆಳ್ಳುಳ್ಳಿ  ತಿನ್ನುವುದಿಲ್ಲ.. ಯೋಗ-ಧ್ಯಾನವನ್ನು ಮರೆಯುವುದಿಲ್ಲ.. ದ್ರೌಪದಿ ಮುರ್ಮು ಜೀವನಶೈಲಿ ಹೀಗಿದೆ
ದೇಶದ ಪ್ರಥಮ ಪ್ರಜೆ ಈರುಳ್ಳಿ, ಬೆಳ್ಳುಳ್ಳಿ ಸಹ ತಿನ್ನುವುದಿಲ್ಲ.. ಯೋಗ-ಧ್ಯಾನವನ್ನು ಮರೆಯುವುದಿಲ್ಲ.. ದ್ರೌಪದಿ ಮುರ್ಮು ಜೀವನಶೈಲಿ ಹೀಗಿದೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 26, 2022 | 7:42 PM

ದ್ರೌಪದಿ ಮುರ್ಮು ಜೀವನಶೈಲಿ: ದ್ರೌಪದಿ ಮುರ್ಮು ಅವರು (Droupadi Murmu) ಸೋಮವಾರ ಭಾರತದ ಪ್ರಥಮ ಪ್ರಜೆ ಮತ್ತು ದೇಶದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಈ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆ ಹಾಗೂ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುರ್ಮು ಅವರಿಗಿಂತ ಮೊದಲು ಪ್ರತಿಭಾ ಪಾಟೀಲ್ ಮಾತ್ರ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರು. ಇನ್ನು, ನಾವು ದ್ರೌಪದಿ ಮುರ್ಮು ಅವರ ವೈಯಕ್ತಿಕ ವಿವರಗಳಿಗೆ ಹೋದರೆ, ಅವರು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬುಡಕಟ್ಟು ಕುಟುಂಬದಲ್ಲಿ 20 ಜೂನ್ 1958 ರಂದು ಜನಿಸಿದರು. ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಆ ನಂತರ ಅವರು ರಾಜಕೀಯ ಸೇರಿದರು. ಕೌನ್ಸಿಲರ್ ಹುದ್ದೆಯಿಂದ ರಾಜ್ಯಪಾಲರಾಗಿ ಏರಿದರು. ಆದರೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸರಳವಾಗಿ ಬದುಕಲು ಆದ್ಯತೆ ನೀಡುತ್ತಾರೆ. ನಮ್ಮ ರಾಷ್ಟ್ರಪತಿಯ ಜೀವನಶೈಲಿಯನ್ನು ತಿಳಿಯೋಣ (Droupadi Murmu lifestyle).

  1. ಸಮಯ ಪಾಲನೆಗೆ ಪ್ರಾಶಸ್ತ್ಯ..ದ್ರೌಪದಿ ಮುರ್ಮು ಅವರು ತಮ್ಮ ವೃತ್ತಿಜೀವನವನ್ನು ಶಿಕ್ಷಕರಾಗಿ ಪ್ರಾರಂಭಿಸಿದರು. ಹೀಗೆ ಶಿಸ್ತಿನ ಜೀವನ ನಡೆಸುವುದು ಅವರ ದಿನಚರಿಯ ಭಾಗವಾಯಿತು. ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಭಗವಾನ್ ಶಿವನನ್ನು ಹೆಚ್ಚಾಗಿ ಪೂಜಿಸುತ್ತಾರೆ. ಮುರ್ಮು ಎಲ್ಲಿಗೆ ಹೋದರೂ ಕೈಯಲ್ಲಿ ಎರಡು ಪುಸ್ತಕಗಳಿರುತ್ತವೆ. ಅವುಗಳಲ್ಲಿ ಒಂದು ಶಿವನಿಗೆ ಸಂಬಂಧಪಟ್ಟಿದ್ದು ಮತ್ತೊಂದು ಶಿವನ ಕುರಿತಾದ ಅನುವಾದದ ಪುಸ್ತಕ. ಬಿಡುವು ಸಿಕ್ಕಾಗಲೆಲ್ಲ ಈ ಎರಡು ಪುಸ್ತಕಗಳನ್ನು ಓದುತ್ತಾರೆ.
  2. ಯೋಗ, ವಾಕಿಂಗ್, ಧ್ಯಾನ.. ಈರುಳ್ಳಿ- ಬೆಳ್ಳುಳ್ಳಿಯಿಂದ ದೂರ ದೂರ!ದ್ರೌಪದಿ ಮುರ್ಮು ತುಂಬಾ ಕ್ರಮಬದ್ಧವಾದ ಜೀವನ ನಡೆಸಲು ಇಷ್ಟಪಡುತ್ತಾರೆ. ಅವರು ಪ್ರತಿದಿನ ಬೆಳಿಗ್ಗೆ 03:30 ಕ್ಕೆ ಎಚ್ಚರಗೊಳ್ಳುತ್ತಾರೆ. ವ್ಯಾಯಾಮದ ಭಾಗವಾಗಿ ಸ್ವಲ್ಪ ಸಮಯದವರೆಗೆ ವಾಕಿಂಗ್ ಮಾಡುತ್ತಾರೆ. ಅದರ ನಂತರ ಅವರು ಯೋಗ ಮತ್ತು ಧ್ಯಾನ ಮಾಡುತ್ತಾರೆ. ತಮ್ಮ ವ್ಯಕ್ತಿಗತ ಜೀವನದಲ್ಲಿ ಅವರು ಎಷ್ಟೇ ಬ್ಯುಸಿ ಇದ್ದರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಮುರ್ಮು ತಮ್ಮ ಜೀವನವನ್ನು ಸರಳವಾಗಿ ನಡೆಸಲು ಇಷ್ಟಪಡುತ್ತಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಂತಾಲಿ ಸೀರೆ ಮತ್ತು ಸಾದಾ ಚಪ್ಪಲಿಯನ್ನು ಅವರು ಧರಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಆಕೆ ಸಂಪೂರ್ಣ ಸಸ್ಯಾಹಾರಿ. ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು (onion, garlic) ಅವರು ಬಯಸುವುದಿಲ್ಲ -ಇವೆರಡೂ ಅವರಿಗೆ ವರ್ಜ್ಯ. ಅವರ ನೆಚ್ಚಿನ ಸಿಹಿ ಚೆನ್ನಾ ಪೋಡ. ಒಡಿಶಾದಲ್ಲಿ ಇದು ವಿಶೇಷ ಸಿಹಿಯಾಗಿದೆ.
  3. ಖಿನ್ನತೆಯಿಂದ ಹೊರಬರಲುಆದರೆ ಮುರ್ಮು ಅವರ ಜೀವನವು ಸುಗಮದ್ದಾಗಿರಲಿಲ್ಲ. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳು, ದುಃಖ ದುಮ್ಮಾನಗಳನ್ನು ಎದುರಿಸಿದ್ದಾರೆ. 2010-2014 ರ ಅವಧಿಯಲ್ಲಿ ತಮ್ಮ ಪತಿ ಮತ್ತು ತಮ್ಮ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡರು. ಪರಿಣಾಮವಾಗಿ ಆಕೆ ಖಿನ್ನತೆಗೆ ಒಳಗಾಗಿದ್ದರು. ಆದರೆ ಅವರು ನೈತಿಕ ಸ್ಥೈರ್ಯ ಕಳೆದುಳ್ಳಲಿಲ್ಲ. ಅವರು ಯಾವಾಗಲೂ ದೇವರಲ್ಲಿ ಅಪಾರ ನಂಬಿಕೆಯಿಟ್ಟು ಧ್ಯಾನ ಮಾಡುತ್ತಾರೆ. ಹಾಗಾಗಿ ಅವರು ಖಿನ್ನತೆಯಿಂದ ಹೊರಬಂದರು. ಇಬ್ಬರು ಮಕ್ಕಳು, ತಮ್ಮ ಗಂಡನ ಮರಣದ ನಂತರ, ಅವರು ತಮ್ಮ ಮನೆಯನ್ನು ಶಾಲೆಯನ್ನಾಗಿ ಪರಿವರ್ತಿಸಿದರು. ವರ್ಷಕ್ಕೊಮ್ಮೆಯಾದರೂ ಈ ಶಾಲೆಗೆ ಭೇಟಿ ನೀಡಿ ಅಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸಂಭ್ರಮಿಸುತ್ತಾರೆ.
  4. ವಿವಿಧ ಸಾಮರ್ಥ್ಯಗಳಲ್ಲಿ..ಮುರ್ಮು ತನ್ನ ವೃತ್ತಿಜೀವನವನ್ನು ಶಿಕ್ಷಕರಾಗಿ ಪ್ರಾರಂಭಿಸಿದರು. ಆ ಬಳಿಕ ಬಿಜೆಪಿ ಸೇರಿ ರಾಜಕೀಯಕ್ಕೆ ಕಾಲಿಟ್ಟರು. 1997ರಲ್ಲಿ ರಾಯರಂಗಪುರ ನಗರ ಪಂಚಾಯತ್ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಅವರು ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾದ ಉಪಾಧ್ಯಕ್ಷರಾಗಿ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಒಡಿಶಾದಲ್ಲಿ, ಅವರು 2000 ರಿಂದ 2002 ರವರೆಗೆ ಸ್ವತಂತ್ರ ಹ್ಯೂಡಾದಲ್ಲಿ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ಅದೇ ರೀತಿ 2002 ರಿಂದ 2004 ರವರೆಗೆ ಮತ್ಸ್ಯ, ಪಶು ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2015 ರಿಂದ 2021 ರವರೆಗೆ ಅವರು ಜಾರ್ಖಂಡ್ ರಾಜ್ಯಪಾಲರಾಗಿ ಸಮರ್ಥವಾಗಿ ಸೇವೆ ಸಲ್ಲಿಸಿದರು. ಈಗ ದೇಶದ ಪ್ರಥಮ ಪ್ರಜೆಯಾಗಿ ಅತ್ಯುನ್ನತ ಪೀಠವನ್ನು ಏರಿದ್ದಾರೆ. To read in Telugu Clikc here:

Published On - 7:40 pm, Tue, 26 July 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್