Monkypox: ಲೈಂಗಿಕ ಸಂಪರ್ಕದಿಂದ ಮಂಕಿಪಾಕ್ಸ್ ಹರಡುವುದೇ? ಸಂಶೋಧನೆ ಹೇಳುವುದೇನು?
ಕೊರೊನಾ ನಂತರ ಮಂಕಿಪಾಕ್ಸ್ ಜನರಲ್ಲಿ ಮತ್ತೊಮ್ಮೆ ಭಯವನ್ನು ಸೃಷ್ಟಿಸುತ್ತಿದೆ. ಮಂಕಿಪಾಕ್ಸ್ ನಿಕಟ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ ಎಂದು ಕೆಲವು ಅಧ್ಯಯಗಳು ಹೇಳಿವೆ.
ಕೊರೊನಾ ನಂತರ ಮಂಕಿಪಾಕ್ಸ್ ಜನರಲ್ಲಿ ಮತ್ತೊಮ್ಮೆ ಭಯವನ್ನು ಸೃಷ್ಟಿಸುತ್ತಿದೆ. ಮಂಕಿಪಾಕ್ಸ್ ನಿಕಟ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ ಎಂದು ಕೆಲವು ಅಧ್ಯಯಗಳು ಹೇಳಿವೆ. ಹೀಗಾಗಿ ಈ ಕುರಿತು ಕಾಳಜಿ ಕೂಡ ಹೆಚ್ಚಿದೆ. ಅಮೆರಿಕದಲ್ಲಿ ಮಂಕಿಪಾಕ್ಸ್ ಹರಡುವಿಕೆಯನ್ನು ಗಮನಿಸಿದರೆ, ಇದು ಲೈಂಗಿಕವಾಗಿ ಹರಡುವ ಕಾಯಿಲೆಯಂತಿದೆ.
ಮಂಕಿಪಾಕ್ಸ್ ಯಾವುದೇ ರೀತಿಯ ನಿಕಟ ಸಂಪರ್ಕದ ಮೂಲಕ ಹರಡಬಹುದು, ಚುಂಬನ, ಸ್ಪರ್ಶ, ಮೌಖಿಕ ಅಥವಾ ಸಂಭೋಗದ ಮೂಲಕ ಹರಡುವ ಸಾಂಕ್ರಾಮಿಕವಾಗಿದೆ.
ಹೀಗಾಗಿ ಮೈಯಲ್ಲಿ ಯಾವುದೇ ಹೊಸ ರೀತಿಯ ದದ್ದುಗಳು ಮೂಡಿದಾಗ ನೀವು ಲೈಂಗಿಕ ಕ್ರಿಯೆಯಿಂದ ದೂರವಿರುವುದು ಒಳಿತು ಎಂದು ವೈದ್ಯರು ಹೇಳಿದ್ದಾರೆ. ಈ ರೋಗವು ಇತರ ಸಾಂಕ್ರಾಮಿಕ ರೋಗಗಳಾದ ಚಿಕನ್ಪಾಕ್ಸ್ ಹರ್ಪಿಸ್ ಮತ್ತು ಸಿಫಿಲಿಸ್ ಅನ್ನು ಹೋಲುತ್ತದೆ. ಮಂಕಿಪಾಕ್ಸ್ ವೈರಸ್ ವೀರ್ಯದಲ್ಲಿ ಕಂಡುಬಂದಿದ್ದರೂ, ಇದು ವೀರ್ಯ ಅಥವಾ ಯೋನಿ ದ್ರವಗಳ ಮೂಲಕ ಹರಡಬಹುದೇ ಎಂಬುದು ತಿಳಿದಿಲ್ಲ.
12 ವಾರಗಳವರೆಗೆ ಕಾಂಡೋಮ್ ಬಳಸಲು ಸಲಹೆ ಮಂಕಿಪಾಕ್ಸ್ ಹೊಂದಿರುವವರು ಚೇತರಿಸಿಕೊಂಡ ಬಳಿಕ 12 ವಾರಗಳವರೆಗೆ ಕಾಂಡೋಮ್‌ಗಳನ್ನು ಬಳಸಲು ಸಲಹೆ ನೀಡಲಾಗುತ್ತದೆ, ಚೇತರಿಕೆಯ ನಂತರದ ಅವಧಿಯಲ್ಲಿ ವೈರಸ್‌ನ ಮಟ್ಟಗಳು ಮತ್ತು ವೀರ್ಯದಲ್ಲಿನ ಸಂಭಾವ್ಯ ಸೋಂಕಿನ ಬಗ್ಗೆ ಹೆಚ್ಚು ತಿಳಿಯುತ್ತದೆ.
ಕಾಂಡೋಮ್ ಧರಿಸುವುದು ಮಂಕಿಪಾಕ್ಸ್‌ನಿಂದ ನಿಮ್ಮನ್ನು ರಕ್ಷಿಸುವುದಿಲ್ಲ, ಆದರೆ ಇದು ನಿಮ್ಮನ್ನು ಮತ್ತು ಇತರರನ್ನು STI ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ವೈರಸ್ ಲೈಂಗಿಕ ಸಂಪರ್ಕದ ಮೂಲಕ ಮಾತ್ರ ಹರಡುವುದಿಲ್ಲ, ಆದರೆ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯೊಂದಿಗೆ ಯಾವುದೇ ರೀತಿಯ ನಿಕಟ ಸಂಪರ್ಕದ ಮೂಲಕವೂ ಹರಡುತ್ತದೆ.
ಒಂದೇ ಮನೆಯಲ್ಲಿ ವಾಸಿಸುವ ವ್ಯಕ್ತಿಗಳು ಹೆಚ್ಚಿನ ಅಪಾಯದಲ್ಲಿದ್ದಾರೆ. ಮಂಕಿಪಾಕ್ಸ್ ಆಗಬಹುದಾದ ರೋಗಲಕ್ಷಣಗಳನ್ನು ಹೊಂದಿದರೆ ವೈದ್ಯರನ್ನು ಸಂಪರ್ಕಿಸಿ.
ಮಂಕಿಪಾಕ್ಸ್ ಅಪಾಯವು ಲೈಂಗಿಕವಾಗಿ ಸಕ್ರಿಯವಾಗಿರುವ ಜನರಿಗೆ ಅಥವಾ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವ ಪುರುಷರಿಗೆ ಸೀಮಿತವಾಗಿಲ್ಲ. ರೋಗಲಕ್ಷಣಗಳನ್ನು ಹೊಂದಿರುವ ಯಾರೊಂದಿಗಾದರೂ ನಿಕಟ ಸಂಪರ್ಕ ಹೊಂದಿರುವ ಎಲ್ಲರೂ ಅಪಾಯದಲ್ಲಿರುತ್ತಾರೆ. ಆದರೆ ಹಲವು ಪ್ರಕರಣಗಳನ್ನು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರಲ್ಲಿ ಗುರುತಿಸಲಾಗಿದೆ.