AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಯೌವನವನ್ನು ಕಸಿದು ಬೇಗ ವಯಸ್ಸಾಗುವಂತೆ ಮಾಡುವ ಈ ಅಭ್ಯಾಸಗಳಿಂದ ದೂರವಿರಿ

ನಮ್ಮ ಜೀವನಶೈಲಿಯ ಆಯ್ಕೆಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ನಾವು ಏನು ತಿನ್ನುತ್ತೇವೆ, ಎಷ್ಟು ಬಾರಿ ವ್ಯಾಯಾಮ ಮಾಡುತ್ತೇವೆ ಮತ್ತು ಇತರ ಅಂಶಗಳು ನಮ್ಮ ಆರೋಗ್ಯವನ್ನು ಸುಧಾರಿಸಬಹುದು ಅಥವಾ ಹದಗೆಡಿಸಬಹುದು.

ನಿಮ್ಮ ಯೌವನವನ್ನು ಕಸಿದು ಬೇಗ ವಯಸ್ಸಾಗುವಂತೆ ಮಾಡುವ ಈ ಅಭ್ಯಾಸಗಳಿಂದ ದೂರವಿರಿ
LifestyleImage Credit source: NDTV
TV9 Web
| Updated By: ನಯನಾ ರಾಜೀವ್|

Updated on:Jul 26, 2022 | 12:18 PM

Share

ನಮ್ಮ ಜೀವನಶೈಲಿಯ ಆಯ್ಕೆಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ನಾವು ಏನು ತಿನ್ನುತ್ತೇವೆ, ಎಷ್ಟು ಬಾರಿ ವ್ಯಾಯಾಮ ಮಾಡುತ್ತೇವೆ ಮತ್ತು ಇತರ ಅಂಶಗಳು ನಮ್ಮ ಆರೋಗ್ಯವನ್ನು ಸುಧಾರಿಸಬಹುದು ಅಥವಾ ಹದಗೆಡಿಸಬಹುದು. ಆದ್ದರಿಂದ, ನಾವು ಯಾವ ಅಭ್ಯಾಸಗಳನ್ನು ಅನುಸರಿಸುತ್ತೇವೆ ಎಂಬುದರ ಕುರಿತು ನಾವು ಗಮನ ಹರಿಸುವುದು ಬಹಳ ಮುಖ್ಯ.

ನೈಸರ್ಗಿಕ ಪ್ರಕ್ರಿಯೆ ತಡೆಯಲಾಗದಿದ್ದರೂ, ನಮ್ಮ ಆಯ್ಕೆಗಳು ನಮ್ಮನ್ನು ಬಹುಬೇಗ ವಯಸ್ಸಾಗುವಂತೆ ಮಾಡುತ್ತದೆ. ಮದ್ಯ ಸೇವನೆ ಮದ್ಯಪಾನ ಮಾಡುವುದು ನಿಯಮಿತವಾಗಿದ್ದರೆ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಮದ್ಯಪಾನವು ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಏಕೆಂದರೆ ಇದು ವಿವಿಧ ಅಂಗಗಳ ಆರೋಗ್ಯ ಮತ್ತು ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ಸುಕ್ಕುಗಟ್ಟುವಿಕೆಗೂ ಕಾರಣವಾಗುತ್ತದೆ. -ನಿದ್ರೆಯ ಕೊರತೆ ನಿತ್ಯ ಸರಿಯಾಗಿ ನಿದ್ರೆ ಮಾಡದಿದ್ದರೆ, ದೇಹಕ್ಕೆ ನಿದ್ರೆಯ ಕೊರತೆಯುಂಟಾದರೆ ಇದು ಕೂಡ ನಿಮ್ಮ ದೇಹದ ವಿವಿಧ ಅಂಗಗಳ ಮೇಲೆ ಪರಿಣಾಮವನ್ನು ಬೀರುತ್ತದೆ. – ಆಹಾರ: ಅನಾರೋಗ್ಯಕರ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಚಯಾಪಚಯವನ್ನು ಕಡಿಮೆಯಾಗುವುದಷ್ಟೇ ಅಲ್ಲದೆ, ತೂಕವನ್ನು ಹೆಚ್ಚಿಸುವುದು, ಕೊಲೆಸ್ಟ್ರಾಲ್, ಮಧುಮೇಹ ಇತ್ಯಾದಿ ರೋಗಗಳು ನಿಮ್ಮನ್ನು ಕಾಡಬಹುದು. -ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದು ಹೆಚ್ಚು ಸಮಯಗಳ ಕಾಲ ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದು ಚರ್ಮದ ಕ್ಯಾನ್ಸರ್​ ಅಪಾಯವನ್ನು ಹೆಚ್ಚಿಸುತ್ತದೆ, ಹಾಗೆಯೇ ಚರ್ಮದ ಸುಕ್ಕಿಗೂ ಕಾರಣವಾಗುತ್ತದೆ.

ವ್ಯಾಯಾಮದ ಕೊರತೆ ಸಾಕಷ್ಟು ವ್ಯಾಯಾಮ ಮಾಡದೇ ಇರುವುದು, ನಿಮ್ಮ ದೇಹಕ್ಕೆ ಹಾನಿಯುಂಟುಮಾಡಬಹುದು. ಇದರಿಂದ ಮಧುಮೇಹ, ಕೊಲೆಸ್ಟ್ರಾಲ್, ಬೊಜ್ಜು, ಹೃದಯರಕ್ತನಾಳದ ಕಾಯಿಲೆಗಳು ಇತ್ಯಾದಿಗಳಿಗೆ ಕಾರಣವಾಗಬಹುದು.

ಒತ್ತಡ ದೀರ್ಘಾವಧಿಯ ಒತ್ತಡವು ಕೆಲಸದ ಒತ್ತಡ, ಪರಸ್ಪರ ಸಮಸ್ಯೆಗಳು ಇತ್ಯಾದಿಗಳಿಂದ ಉತ್ತೇಜಿತವಾಗಬಹುದು. ಒತ್ತಡವು ನಮ್ಮ ಚಯಾಪಚಯ, ತೂಕ, ಮಾನಸಿಕ ಆರೋಗ್ಯ ಮತ್ತು ವಯಸ್ಸಾಗುವಿಕೆಯನ್ನು ವೇಗಗೊಳಿಸುವ ಹಲವಾರು ಇತರ ಅಂಶಗಳ ಮೇಲೆ ಪರಿಣಾಮ ಬೀರಬಹುದು.

ಬಹಳ ಸಮಯ ಕುಳಿತುಕೊಳ್ಳುವುದು ನಿತ್ಯ 10-11 ಗಂಟೆಗಳ ಕಾಲ ಒಂದೇ ಕಡೆ ಕುಳಿತುಕೊಳ್ಳುವುದು, ವ್ಯಾಯಾಮ ಮಾಡದೇ ಇರುವುದು ಕೂಡ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ.

ಕೆಫೀನ್ ಅವಲಂಬನೆ ಚಹಾ ಅಥವಾ ಕಾಫಿಯನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಆದಾಗ್ಯೂ, ಚಹಾ ಮತ್ತು ಕಾಫಿಯನ್ನು ದಿನಕ್ಕೆ ಹಲವಾರು ಬಾರಿ ಸೇವಿಸುವುದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಸನ್ ಗ್ಲಾಸ್ ಧರಿಸದಿರುವುದು ನಮ್ಮ ಚರ್ಮದಂತೆಯೇ ನಮ್ಮ ಕಣ್ಣುಗಳಿಗೂ ಸೂರ್ಯನಿಂದ ರಕ್ಷಣೆ ಬೇಕು.

ಧೂಮಪಾನ ಧೂಮಪಾನವು ನಮ್ಮ ದೇಹದ ಮೇಲೆ ವಿವಿಧ ದುಷ್ಪರಿಣಾಮಗಳನ್ನು ಬೀರುತ್ತದೆ.

Published On - 12:17 pm, Tue, 26 July 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!