ವಿಮಾನದಲ್ಲಿ ಕೆಳಗೆ ಕುಳಿತು ಪ್ರಯಾಣಿಕರೊಬ್ಬರನ್ನು ಸಾಂತ್ವನಗೊಳಿಸಿದ ಸಿಬ್ಬಂದಿ

Flight Attendant : ಫ್ಲೈಟ್​ ಅಟೆಂಡೆಂಟ್​ ಆದವರು ಉಳಿದ ಕೆಲಸಗಳಂತೆ ಕರ್ತವ್ಯವನ್ನಷ್ಟೇ ಮಾಡಿದರೆ ಸಾಲದು. ಪ್ರಯಾಣಿಕರ ಪ್ರಯಾಣ ಆರಾಮಾಗಿ ಸಾಗಬೇಕೆಂದರೆ ಹೆಚ್ಚು ತಾಳ್ಮೆ ಬೇಕು. ಸಹಾನುಭೂತಿ ಬೇಕು. ಇದಕ್ಕೆ ಸಾಕ್ಷಿ ಈ ಘಟನೆ.

ವಿಮಾನದಲ್ಲಿ ಕೆಳಗೆ ಕುಳಿತು ಪ್ರಯಾಣಿಕರೊಬ್ಬರನ್ನು ಸಾಂತ್ವನಗೊಳಿಸಿದ ಸಿಬ್ಬಂದಿ
ಡೆಲ್ಟಾ ಏರ್​ಲೈನ್ಸ್​ನ ಡೀನ್​ ಶಾನನ್ ಪ್ರಯಾಣಿಕರನ್ನು ಸಂತೈಸುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 27, 2023 | 9:55 AM

Viral Video : ಭಯ. ಅನೇಕರಿಗೆ ಅನೇಕ ಭಯಗಳಿವೆ. ಪಟ್ಟಿ ಮಾಡುತ್ತಾ ಹೋದರೆ ಮನಃಶಾಸ್ತ್ರದಲ್ಲಿ ಒಂದೊಂದಕ್ಕೂ ಒಂದೊಂದು ವಿಶ್ಲೇಷಣೆ ಇದೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ನೋಡಿ. ಫ್ಲೈಟ್​ ಅಟೆಂಡೆಂಟ್​ ಕೆಳಗೆ ಕುಳಿತು ಪ್ರಯಾಣಿಕರೊಬ್ಬರ ಕೈ ಹಿಡಿದು ಸಂತೈಸುತ್ತಿದ್ದಾರೆ. ಇಲ್ಲಿರುವ ಈ ಯುವತಿಗೆ ವಿಮಾನ ಪ್ರಯಾಣವೆಂದರೆ. ವಿಮಾನ ಮೇಲೆ ಹಾರುತ್ತಿದ್ದಂತೆ ಆಕೆ ಗಾಬರಿಗೆ ಒಳಗಾಗಿದ್ದಾಳೆ. ಆಗ ಫ್ಲೈಟ್​ ಅಟೆಂಡೆಂಟ್​ ಆಕೆಗೆ ಸಮಾಧಾನ ಹೇಳುತ್ತ ಪ್ರಯಾಣ ಸುಖಕರವಾಗಿ ಆಗುವಂತೆ ಸಹಕರಿಸಿದ್ದಾರೆ.

ಡೆಲ್ಟಾ ಏರ್​ಲೈನ್ಸ್​ನಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಫ್ಲೈಟ್​ ಅಟೆಂಡೆಂಟ್​ ಡೀನ್ ಶಾನನ್​ ಮಹಿಳಾ ಪ್ರಯಾಣಿಕರನ್ನು ಸಂತೈಸುತ್ತಿರುವ ಈ ಫೋಟೋ ಅನ್ನು ಜನವರಿ 14ರಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗಿದೆ. 12,000ಕ್ಕೂ ಹೆಚ್ಚು ಜನರು ಈ ಪೋಸ್ಟ್​ಗೆ ಲೈಕ್​ ಮಾಡಿದ್ದಾರೆ. 1,200 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. 11,000 ಕ್ಕೂ ಹೆಚ್ಚು ಜನರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಕರುಣೆಯುಳ್ಳ ಇಂಥ ವಿಮಾನ ಸಿಬ್ಬಂದಿಯ ಅವಶ್ಯಕತೆ ಈ ಜಗತ್ತಿಗೆ ಬಹಳ ಇದೆ ಎಂದು ಅನೇಕರು ಹೇಳಿದ್ದಾರೆ. ಇಡೀ ಪ್ರಯಾಣದುದ್ದಕ್ಕೂ ಆಕೆಯಲ್ಲಿ ಆತ್ಮವಿಶ್ವಾಸ ತುಂಬಿದ ನಿಮ್ಮ ಮಾನವೀಯತೆ ಶ್ಲಾಘನೀಯ ಎಂದಿದ್ದಾರೆ ಒಬ್ಬರು. ಇಂಥ ಆಪ್ತಭಾವವನ್ನು ಎಲ್ಲರೂ ಎಲ್ಲರಿಗೂ ಕೊಡಲು ಆಗುವುದಿಲ್ಲ ಅದು ಅವರ ವ್ಯಕ್ತಿತ್ವದಲ್ಲಿಯೇ ಮಿಳಿತಗೊಂಡಿರಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಜಗತ್ತಿಗೆ ಇಂಥ ಸಹಾನುಭೂತಿಯನ್ನು ವ್ಯಕ್ತಪಡಿಸುವ ಜೀವಗಳ ಅಗತ್ಯವಿದೆ. ನಿಮ್ಮಂಥವರ ಸಂತತಿ ಹೆಚ್ಚಲಿ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಬೇಟೆಯಾಡಲು ಪ್ರಯತ್ನಿಸಿದ ಮೊಸಳೆಯನ್ನು ದಡಕ್ಕೆ ಎಳೆದು ತಂದ ಎಮ್ಮೆಯ ವಿಡಿಯೋ ವೈರಲ್

ಕೆಲ ಕೆಲಸಗಳು ಕರ್ತವ್ಯಕ್ಕಿಂತ ಮಿಗಿಲಾದುದನ್ನು ಬೇಡುತ್ತವೆ. ಪ್ರೀತಿ, ಕರುಣೆ, ಸಹಾನುಭೂತಿ, ಸಹಾಯ ಮನೋಭಾವ ತುಸು ಹೆಚ್ಚೇ ಬೇಕಾಗುತ್ತದೆ. ಎಂಥ ಪರಿಸ್ಥಿತಿಯನ್ನೂ ಎಂಥ ವ್ಯಕ್ತಿಯನ್ನೂ ನಿಭಾಯಿಸಲು ಹೆಚ್ಚು ತಾಳ್ಮೆ ಬೇಕಾಗುತ್ತದೆ. ಎಲ್ಲಕ್ಕಿಂಥ ಮುಖ್ಯವಾಗಿ ನಿಸ್ವಾರ್ಥ ಮನೋಗತವಾಗಿರಬೇಕು. ಸಹಾಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇಂಥ ಎಲ್ಲ ಗುಣಗಳು ಅಗತ್ಯವಾಗಿ ಬೇಕು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 9:50 am, Fri, 27 January 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ