Viral News: ಮ್ಯಾಕ್ಡೊನಾಲ್ಡ್ಸ್ನಲ್ಲಿ ನಿಧಾನವಾಗಿ ತಿಂದಿದ್ದಕ್ಕೆ ಬಿತ್ತು 10 ಸಾವಿರ ರೂ. ದಂಡ
ಸಾಮಾನ್ಯವಾಗಿ ಮ್ಯಾಕ್ಡೊನಾಲ್ಡ್, ಪಿಜ್ಜಾ ಹಟ್, ಡಾಮಿನೋಸ್ ಅಥವಾ ಇನ್ಯಾವುದೇ ಹೋಟೆಲ್ಗಳಿರಲಿ ಸ್ನೇಹಿತರೆಲ್ಲಾ ಒಟ್ಟಿಗೆ ಕೂತು ತಿನ್ನುವುದು ವಾಡಿಕೆ.
ಸಾಮಾನ್ಯವಾಗಿ ಮ್ಯಾಕ್ಡೊನಾಲ್ಡ್ಸ್, ಪಿಜ್ಜಾ ಹಟ್, ಡಾಮಿನೋಸ್ ಅಥವಾ ಇನ್ಯಾವುದೇ ಹೋಟೆಲ್ಗಳಿರಲಿ ಸ್ನೇಹಿತರೆಲ್ಲಾ ಒಟ್ಟಿಗೆ ಕೂತು ತಿನ್ನುವುದು ವಾಡಿಕೆ. ಅರ್ಧ ತಾಸು, ಕೆಲವೊಮ್ಮೆ ಒಂದೆರಡು ಗಂಟೆಗಳು ಕುಳಿತಿರುವುದೂ ಇದೆ. ಆದರೆ ಮ್ಯಾಕ್ಡೊನಾಲ್ಡ್ನಲ್ಲಿ ತುಂಬಾ ಹೊತ್ತು ಕುಳಿತು ತಿಂದಿದ್ದಕ್ಕೆ ಗ್ರಾಹಕರೊಬ್ಬರಿಗೆ 10 ಸಾವಿರ ರೂ ದಂಡ ವಿಧಿಸಲಾಗಿದೆ. ಆದರೆ ಇದರಲ್ಲೊಂದು ಸಣ್ಣ ಟ್ವಿಸ್ಟ್ ಇದೆ, ದಂಡ ಬಿದ್ದಿದ್ದು ಮ್ಯಾಕ್ಡೊನಾಲ್ಡ್ನಲ್ಲಿ ತಿಂದಿದ್ದಕ್ಕಲ್ಲ, ಮ್ಯಾಕ್ ಡೊನಾಲ್ಡ್ ಹೊರಗಡೆ 90 ನಿಮಿಷಗಳಿಗಿಂತ ಹೆಚ್ಚು ಹೊತ್ತು ಗಾಡಿ ನಿಲ್ಲಿಸಿದ್ದಕ್ಕೆ.
ಖಾಸಗಿ ಪಾರ್ಕಿಂಗ್ ಕಂಪನಿಯು ಅವರಿಗೆ 10 ಸಾವಿರ ರೂ ದಂಡ ವಿಧಿಸಿದೆ, ವಾಸ್ತವವಾಗಿ ಮೆಕ್ಡೊನಾಲ್ಡ್ ಗ್ರಾಹಕರು ತಮ್ಮ ವಾಹನವನ್ನು ರೆಸ್ಟೋರೆಂಟ್ ಎದುರು 90 ನಿಮಿಷಗಳ ಕಾಲ ನಿಲ್ಲಿಸಬಹುದು ಆದರೆ ಈ ವ್ಯಕ್ತಿಯು ಅದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದರು. ಅವರಿಗೆ ಚಲನ್ ನೀಡಿದಾಗ ಒಮ್ಮೆ ನೋಡಿ ಆಶ್ಚರ್ಯಚಕಿತರಾದರು. ಇದು ನಡೆದಿದ್ದು ಭಾರತದಲ್ಲಲ್ಲ ಬದಲಾಗಿ ಬ್ರಿಟನ್ನಲ್ಲಿ ಶಪೂರ್ ಮೆಫ್ತಾ ಎಂಬುವವರೊಂದಿಗೆ ಈ ಘಟನೆ ನಡೆದಿದೆ.
ನ್ಯೂ ಮಾರ್ಕೆಟ್ ರಸ್ತೆಯಲ್ಲಿರುವ ಮ್ಯಾಕ್ಡೊನಾಲ್ಡ್ನ ಹೊರಗೆ ಶಪೂರ್ ಕಾರು ನಿಲ್ಲಿಸಿದ್ದರು. ಅವರು ತನ್ನ ಅಣ್ಣನಿಗಾಗಿ ರೆಸ್ಟೋರೆಂಟ್ನಲ್ಲಿ ಕಾಯುತ್ತಿದ್ದರು, ಆ ಸಮಯದಲ್ಲಿ ಆಹಾರ ಪದಾರ್ಥವನ್ನು ಆರ್ಡರ್ ಮಾಡಿದ್ದರು, ಅಲ್ಲಿ ಸುಮಾರು 90 ನಿಮಿಷಗಳು ಮಾತ್ರ ಕಾರನ್ನು ನಿಲ್ಲಿಸಲು ಅವಕಾಶವಿತ್ತು.
ಶಪೂರ್ ಪಾರ್ಕಿಂಗ್ ಸಮಯದ ಮಿತಿಯನ್ನು ಮೀರಿದ್ದರು, ಇದರ ನಂತರ ಖಾಸಗಿ ಪಾರ್ಕಿಂಗ್ ಕಂಪನಿಯು ಅವರ ವಿಳಾಸಕ್ಕೆ 10 ಸಾವಿರ ರೂ ದಂಡದ ನೋಟಿಸ್ ತಲುಪಿಸಿದೆ. ಜನವರಿ 4 ರಂದು ಸಂಜೆ 6 ಗಂಟೆಗೆ ಶಪೂರ್ ರೆಸ್ಟೋರೆಂಟ್ಗೆ ಹೋಗಿದ್ದರು ಎನ್ನಲಾಗಿದೆ. ಯುಕೆ ಪಾರ್ಕಿಂಗ್ ಕಂಟ್ರೋಲ್ ಪ್ರಕಾರ ರೆಸ್ಟೋರೆಂಟ್ ಹೊರಗೆ ನಿಲ್ಲಿಸಲು ಸಮಯವನ್ನು ನಿಗದಿಪಡಿಸಲಾಗಿದೆ.
ಮತ್ತಷ್ಟು ಓದಿ: Viral News: ವಿದೇಶದಲ್ಲಿ ಮದುವೆಯಾಗಿ ಮಗು ಪಡೆದ ಭಾರತೀಯ ವ್ಯಕ್ತಿಗೆ 1 ಲಕ್ಷ 28 ಸಾವಿರ ರೂ. ನೀಡಿದ ಬೆಲಾರಸ್ ಸರ್ಕಾರ
ಇದರಿಂದಾಗಿ ಬೇರೆಯವರಿಗೂ ಕೂಡ ಪಾರ್ಕಿಂಗ್ ಮಾಡಲು ಅವಕಾಶ ದೊರೆಯುತ್ತದೆ. ಸರಿಯಾದ ಮಾರ್ಗ ಸೂಚಿಗಳು ಜಾರಿಯಲ್ಲಿಲ್ಲ ಎನ್ನುವ ಶಪೂರ್ ಅವರ ಹೇಳಿಕೆಯನ್ನು ಯುಕೆ ಪಾರ್ಕಿಂಗ್ ಕಂಟ್ರೋಲ್ ತಳ್ಳಿ ಹಾಕಿದೆ.
ಸೈನ್ ಬೋರ್ಡ್ಗಳನ್ನು ಹಲುವ ಸ್ಥಳಗಳಲ್ಲಿ ಹಾಕಲಾಗಿದೆ. ಬಲವಂತವಾಗಿ ಹೆಚ್ಚು ಹಣ ವಸೂಲಿ ಮಾಡಲಾಗಿದೆ ಎಂದು ಗ್ರಾಹಕರು ಭಾವಿಸಿದರೆ ಈ ವಿಷಯದಲ್ಲಿ ಪಾರ್ಕಿಂಗ್ ಕಂಪನಿ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ದಂಡದ ಮೊತ್ತವನ್ನು ರದ್ದುಗೊಳಿಸುವಂತೆ ಶಪೂರ್ ಯುಕೆ ಪಾರ್ಕಿಂಗ್ ನಿಯಂತ್ರಣಕ್ಕೆ ಮನವಿ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ